ETV Bharat / state

ಮಂಗಳೂರು : ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಬಂಧನ

author img

By

Published : Nov 2, 2021, 5:08 PM IST

Updated : Nov 2, 2021, 5:31 PM IST

ಸರಗಳ್ಳತನ, ವಾಹನ ಕಳ್ಳತನ, ದರೋಡೆ ಸೇರಿದಂತೆ 24 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್​​​ ಅನ್ನು ಮಂಗಳೂರು ಪೊಲೀಸರು ಬಂಧಿಸಿದ್ಧಾರೆ..

ಖತರ್ನಾಕ್ ಕಳ್ಳರ ಗ್ಯಾಂಗ್ ಅಂದರ್
ಖತರ್ನಾಕ್ ಕಳ್ಳರ ಗ್ಯಾಂಗ್ ಅಂದರ್

ಮಂಗಳೂರು : ನಗರದ ವ್ಯಾಪ್ತಿಯಲ್ಲಿ ಸರಗಳ್ಳತನ, ವಾಹನ ಕಳ್ಳತನ, ದರೋಡೆ ಸೇರಿದಂತೆ 24 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಅ​​​ನ್ನು ಪೊಲೀಸರು ಹೆಡೆಮುರಿ ಕಟ್ಟಿ‌ದ್ದಾರೆ.

ಖತರ್ನಾಕ್ ಕಳ್ಳರ ಗ್ಯಾಂಗ್ ಬಂಧನ

ನಗರದ ಕಾವೂರು ನಿವಾಸಿಗಳಾದ ಅಬ್ದುಲ್ ಇಶಾಮ್(26), ಮೊಹಮ್ಮದ್ ತೌಸೀಫ್(30), ಪಂಜಿಮೊಗರು ನಿವಾಸಿ ಸಫ್ವಾನ್(29), ಶಾಂತಿನಗರ ನಿವಾಸಿ ಅಬ್ದುಲ್ ಖಾದರ್ ಸಿನಾನ್(30), ಮಲ್ಲೂರು ನಿವಾಸಿ ಮೊಹಮ್ಮದ್ ಫಜಲ್(32), ಚೊಕ್ಕಬೆಟ್ಟು ನಿವಾಸಿ ಅರ್ಷಾದ್(34), ಉಡುಪಿ‌ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಶಿ‌ ನಿವಾಸಿ ಮುಜಾಹಿದುರ್ ರೆಹಮಾನ್(23) ಬಂಧಿತ ಆರೋಪಿಗಳು.

ಆರೋಪಿಗಳಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಹಿಳೆಯರಿಂದ ಎಳೆದೊಯ್ದ ಸುಮಾರು 10 ಲಕ್ಷ ರೂ. ಮೌಲ್ಯದ 210 ಗ್ರಾಂ ತೂಕದ ಚಿನ್ನದ ಸರ, ಕರಿಮಣಿ ಸರ ಹಾಗೂ 3 ದ್ವಿಚಕ್ರ ವಾಹನಗಳನ್ನು ವಶೊಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಗಳನ್ನು ಸೆರೆಹಿಡಿದ ಪೊಲೀಸ್ ತಂಡಕ್ಕೆ  25 ಸಾವಿರ ರೂ. ಬಹುಮಾನ  ನೀಡಿದ ಪೊಲೀಸ್ ಕಮಿಷನರ್

ಆರೋಪಿಗಳ ವಿರುದ್ಧ ಬಜಪೆ ಪೊಲೀಸ್ ಠಾಣೆ, ಬಂದರು ಠಾಣೆ, ಬರ್ಕೆ ಠಾಣೆ, ಕಾವೂರು ಠಾಣೆ, ಉರ್ವ ಠಾಣೆ, ಮಂಗಳೂರು ಪೂರ್ವ ಠಾಣೆ, ಕಂಕನಾಡಿ ನಗರ ಠಾಣೆ, ಉಳ್ಳಾಲ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಅಲ್ಲದೆ ನಗರದ ಶಕ್ತಿನಗರ ದತ್ತ ನಗರದಲ್ಲಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ ವಾಹನ ನಿಲ್ಲಿಸದೆ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ಗೆ ತಾಗಿಸಿಕೊಂಡ ಹೋಗಿರುವುದು ಸೇರಿ 24 ಪ್ರಕರಣಗಳು ದಾಖಲಾಗಿವೆ.

ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಬೇಕಾಗಿದ್ದು, ಅವರಿಬ್ಬರೂ ಕತಾರ್ ಹಾಗೂ ಸೌದಿ ಅರೇಬಿಯಾದಲ್ಲಿದ್ದಾರೆ‌ಂಬ ಮಾಹಿತಿಯಿದೆ. ಅಲ್ಲದೆ ಪ್ರಕರಣದಲ್ಲಿ ಕಳವುಗೈದ ಆಭರಣಗಳನ್ನು ಆರೋಪಿಗಳು ಬಂಟ್ವಾಳದ ಜ್ಯುವೆಲ್ಲರಿ ಮಳಿಗೆಗೆ ಮಾರಿರುವುದಾಗಿ ಮಾಹಿತಿಯಿದೆ.

ಈ ಜ್ಯುವೆಲ್ಲರಿ ಮಳಿಗೆಯವರಿಗೂ ಕಳವುಗೈದ ಮಾಲು ಎಂಬ ಮಾಹಿತಿಯಿದ್ದೇ ಅವರ ಒಡವೆಗಳನ್ನು ಪಡೆಯುತ್ತಿದ್ದರು. ಆದ್ದರಿಂದ ಅವರ ಮೇಲೆಯೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದೊಂದು ಜಾಲವಾಗಿದ್ದು, ಎಲ್ಲರೂ ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಮಾತನಾಡಿ, ಆರೋಪಿಗಳು ಸರಗಳವು ಮಾಡಲು ಸ್ವಂತ ವಾಹನಗಳನ್ನು ಬಳಸತ್ತಿರಲಿಲ್ಲ. ಬದಲಾಗಿ ನಗರದ ಕುಂಟಿಕಾನ ಹಾಗೂ ಕೊಟ್ಟಾರ ಚೌಕಿಯಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳನ್ನು ಕಳವುಗೈದು ಅದನ್ನೇ ದುಷ್ಕೃತ್ಯ ಎಸಗಲು ಬಳಸುತ್ತಿದ್ದರು.

ಅದಕ್ಕಾಗಿ ಕೀ ಇಲ್ಲದೆ ಡೈರೆಕ್ಟ್ ಮಾಡಿ ವಾಹನವನ್ನು ಸ್ಟಾರ್ಟ್ ಮಾಡಲು‌ ಮೆಕ್ಯಾನಿಕ್ ಓರ್ವನಿಂದ ತರಬೇತಿಯನ್ನು ಪಡೆದಿದ್ದರು. ಅಲ್ಲದೆ ಸಿಸಿ ಕ್ಯಾಮೆರಾಗಳು ಇಲ್ಲದ ಪ್ರದೇಶಗಳನ್ನು ಗುರುತಿಸಿಯೇ ಕಳುವು ಕೃತ್ಯವನ್ನು ನಡೆಸುತ್ತಿದ್ದರು ಎಂದು ಮಾಹಿತಿ ನೀಡಿದರು.

ಖತರ್ನಾಕ್ ತಂಡದ ಆರೋಪಿಗಳನ್ನು ಸೆರೆಹಿಡಿದ ಪೊಲೀಸ್ ತಂಡಕ್ಕೆ ಪೊಲೀಸ್ ಕಮಿಷನರ್ 25 ಸಾವಿರ ರೂ. ಬಹುಮಾನ ನೀಡಿ ಶ್ಲಾಘಿಸಿದರು.

Last Updated : Nov 2, 2021, 5:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.