ETV Bharat / state

ಆರೋಪಿ ಬದಲಿಗೆ ಬೇರೊಬ್ಬನ ಬಂಧನ: ಪೊಲೀಸರಿಗೆ ₹5 ಲಕ್ಷ ದಂಡ ವಿಧಿಸಿದ ಕೋರ್ಟ್‌

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಎಎಸ್‌ಐ ಕುಮಾರ್ ಅವರು ನವೀನ್ ಎನ್ನುವ ಆರೋಪಿಯ ಬದಲಿಗೆ ನವೀನ್ ಸಿಕ್ವೇರಾ ಎಂಬವನನ್ನು ಬಂಧಿಸಿ ತನಿಖಾಧಿಕಾರಿ ಮುಂದೆ ಹಾಜರುಪಡಿಸಿದ್ದರು.

Second Additional FTSC POCSO Court
ಎರಡನೇ ಹೆಚ್ಚುವರಿ ಎಫ್‌ಟಿಎಸ್‌ಸಿ ಪೋಕ್ಸೋ ನ್ಯಾಯಾಲಯ
author img

By

Published : Dec 2, 2022, 11:41 AM IST

ಮಂಗಳೂರು: ಪೋಕ್ಸೊ ಪ್ರಕರಣದಲ್ಲಿ ಆರೋಪಿಯ ಬದಲಿಗೆ ಬೇರೊಬ್ಬ ವ್ಯಕ್ತಿಯನ್ನು ಬಂಧಿಸಿದ ಮಂಗಳೂರಿನ ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಇಲ್ಲಿನ ನ್ಯಾಯಾಲಯ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ನಿರಾಪರಾಧಿ ವ್ಯಕ್ತಿ ಒಂದು ವರ್ಷ ನ್ಯಾಯಾಂಗ ಬಂಧನದಲ್ಲಿದ್ದು, ಕೋರ್ಟ್ ವಿಚಾರಣೆಯ ವೇಳೆ ಆತ ಆರೋಪಿಯಲ್ಲ ಎಂದು ಸಾಬೀತಾಗಿದೆ.‌ ಈ ಹಿನ್ನೆಲೆಯಲ್ಲಿ ಆತನಿಗೆ 5 ಲಕ್ಷ ರೂ. ಪರಿಹಾರವನ್ನು ತನಿಖೆ ನಡೆಸಿದ ಪೊಲೀಸ್‌ ಅಧಿಕಾರಿಗಳು ತಮ್ಮ ವೈಯಕ್ತಿಕ ಹಣದಿಂದಲೇ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಎರಡನೇ ಹೆಚ್ಚುವರಿ ಎಫ್‌ಟಿಎಸ್‌ಸಿ ಪೋಕ್ಸೊ ನ್ಯಾಯಾಲಯ ಆದೇಶಿಸಿತು.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳ ಮೇಲೆ ನವೀನ್ ಎಂಬಾತ ಅತ್ಯಾಚಾರ ಎಸಗಿದ ಬಗ್ಗೆ ದೂರು ನೀಡಲಾಗಿತ್ತು. ಬಾಲಕಿ ನೀಡಿದ ಹೇಳಿಕೆಯನ್ವಯ ಮಂಗಳೂರು ಮಹಿಳಾ ಪೊಲೀಸ್ ಉಪನಿರೀಕ್ಷಕರಾಗಿದ್ದ ರೋಸಮ್ಮ ಪಿ.ಪಿ. ಅವರು ನವೀನ್ ಎನ್ನುವ ಆರೋಪಿಯ ಮೇಲೆ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಪೊಲೀಸ್ ನಿರೀಕ್ಷಕರಾದ ರೇವತಿ ಅವರಿಗೆ ಹಸ್ತಾಂತರಿಸಿದ್ದರು.

ಆರೋಪಿ ಅದಲು ಬದಲು: ಪ್ರಕರಣದ ತನಿಖೆ ಸಂದರ್ಭದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಎಎಸ್‌ಐ ಕುಮಾರ್ ಅವರು ನವೀನ್ ಎನ್ನುವ ಆರೋಪಿ ಬದಲು ನವೀನ್ ಸಿಕ್ವೇರಾ ಎಂಬವನನ್ನು ಬಂಧಿಸಿ ತನಿಖಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದರು. ಪ್ರಕರಣದ ತನಿಖಾ ಸಮಯ ನೊಂದ ಬಾಲಕಿ ತನ್ನ ಫಿರ್ಯಾದಿಯಲ್ಲಿ ಮತ್ತು ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಯಲ್ಲಿ, ಕೇವಲ ನವೀನ್ ಎಂಬ ಆರೋಪಿಯ ಹೆಸರನ್ನು ಉಲ್ಲೇಖಿಸಿದ್ದಳು. ತನಿಖೆ ನಡೆಸಿದ ರೇವತಿ ಅವರು ನವೀನ್ ಅವರನ್ನು ಆರೋಪಿಯನ್ನಾಗಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ತಪ್ಪು ವ್ಯಕ್ತಿಯ ಬಂಧನ: ಆರೋಪಿ ಪರ ವಕೀಲ ರಾಜೇಶ್ ಕುಮಾರ್ ಅಮ್ಟಾಡಿ ಮತ್ತು ಗಿರೀಶ್ ಶೆಟ್ಟಿ ವಾದ ಮಂಡಿಸಿ, ಕೋರ್ಟ್‌ಗೆ ಹಾಜರುಪಡಿಸಿದ ಎಲ್ಲಾ ದಾಖಲೆಗಳಲ್ಲೂ ಕೇವಲ ನವೀನ್ ಮಾತ್ರ ಹೆಸರಿಸಲಾಗಿದೆ. ವಯಸ್ಸು 25 ರಿಂದ 26 ಎಂದು ನಮೂದಿಸಲಾಗಿದೆ. ಆದರೆ ನ್ಯಾಯಾಂಗ ಸೆರೆಯಲ್ಲಿರುವ ಆರೋಪಿಯ ಹೆಸರು ನವೀನ್ ಸಿಕ್ವೇರಾ ಆಗಿದ್ದು, ವಯಸ್ಸು 47 ಆಗಿದೆ. ಈ ಆಧಾರದಲ್ಲಿ ಪೊಲೀಸರು ನಿಜವಾದ ವ್ಯಕ್ತಿಯನ್ನು ಬಂಧಿಸಿಲ್ಲ. ತಪ್ಪು ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸುಮಾರು 1 ವರ್ಷ ಕಾಲ ನ್ಯಾಯಾಂಗ ಬಂಧನದಲ್ಲಿರುವಂತೆ ಮಾಡಿದ್ದಾರೆ ಎಂದು ವಾದ ಮಂಡಿಸಿದ್ದರು.

ಪೊಲೀಸರ ವಿರುದ್ಧ ಕಾನೂನು ಕ್ರಮಕ್ಕೆ ಆದೇಶ: ವಿಚಾರಣೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ 2 ನೇ ಹೆಚ್ಚುವರಿ ಎಫ್‌ಟಿಎಸ್‌ಸಿ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಕೆ ಯು ರಾಧಾಕೃಷ್ಣ ಅವರು ನವೀನ್ ಸಿಕ್ವೇರಾ ನಿರಪರಾಧಿ ಎಂದು ಆದೇಶಿಸಿದ್ದಾರೆ. ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಕಾರಣ, ಪೊಲೀಸ್ ನಿರೀಕ್ಷಕರಾದ ರೇವತಿ ಮತ್ತು ಪೊಲೀಸ್ ಉಪನಿರೀಕ್ಷಕರಾದ ರೋಸಮ್ಮ ಪಿ.ಪಿ. ಅವರು ನವೀನ್ ಸಿಕ್ವೇರಾ ಅವರಿಗೆ 5 ಲಕ್ಷ ರೂ. ಪರಿಹಾರ ಹಣವನ್ನು ತಮ್ಮ ವೈಯಕ್ತಿಕ ಹಣದಿಂದಲೇ ನೀಡಬೇಕೆಂದು ಆದೇಶ ಮಾಡಿದ್ದಾರೆ. ಅಲ್ಲದೆ ಈ ಇಬ್ಬರು ಪೊಲೀಸ್‌ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶ ಮಾಡಿ ಪ್ರಕರಣದ ಆರೋಪಿ ನವೀನ್ ಸಿಕ್ವೇರಾ ಅವರನ್ನು ಖುಲಾಸೆಗೊಳಿಸಿದ್ದಾರೆ.

ಇದನ್ನೂ ಓದಿ: ವಿಕಲಚೇತನ ಮಗಳ ಮೇಲೆ ರೇಪ್​.. ಕ್ರೂರಿ ತಂದೆಗೆ 107 ವರ್ಷ ಕಠಿಣ ಜೈಲು ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.