ETV Bharat / state

ಮಾದಕ ದ್ರವ್ಯ ಸೇವನೆ: ಇಬ್ಬರು ವ್ಯಸನಿಗಳ ಬಂಧನ - ಇಬ್ಬರು ಗಾಂಜಾ ವ್ಯಸನಿಗಳ ಬಂಧನ ಲೆಟೆಸ್ಟ್ ನ್ಯೂಸ್​

ನಿಷೇಧಿಸಲ್ಪಟ್ಟ ಮಾದಕ ದ್ರವ್ಯ ಸೇವಿಸಿದ ಇಬ್ಬರು ಆರೋಪಿಗಳನ್ನು ನಗರದ ಪಣಂಬೂರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಬ್ಬರು ಗಾಂಜಾ ವ್ಯಸನಿಗಳ ಬಂಧನ
marijuana accused
author img

By

Published : Dec 8, 2019, 3:09 PM IST

ಮಂಗಳೂರು: ನಿಷೇಧಿಸಲ್ಪಟ್ಟ ಮಾದಕ ದ್ರವ್ಯ ಸೇವಿಸಿದ ಇಬ್ಬರು ಆರೋಪಿಗಳನ್ನು ನಗರದ ಪಣಂಬೂರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುರತ್ಕಲ್, ಮುಕ್ಕ ನಿವಾಸಿ ಮೊಹಮ್ಮದ್ ರಾಜಿಕ್ ಯಾನೆ ರಾಜಿಕ್ (32), ಚೇಳ್ಯಾರು ಎಮ್​ಆಎರ್​ಪಿಎಲ್​ ಕಾಲೋನಿ ನಿವಾಸಿ ನಿಖಿಲ್ (19) ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ನಗರ ಉತ್ತರ ಉಪ ವಿಭಾಗದ ಎಸಿಪಿ ಶ್ರೀನಿವಾಸ್​ ಗೌಡ ಆರ್. ನೇತೃತ್ವದ ರೌಡಿ ನಿಗ್ರಹ ದಳ ಕಾರ್ಯಾಚರಣೆ ನಡೆಸಿದ್ದು, ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ತನಿಖೆಗಾಗಿ ಆರೋಪಿಗಳ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಆರೋಪಿಗಳ ಮೇಲೆ ಎನ್​ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Intro:ಮಂಗಳೂರು: ನಿಷೇಧಿತ ಮಾದಕ ದ್ರವ್ಯವನ್ನು ಸೇವಿಸಿರುವ ಇಬ್ಬರು ಆರೋಪಿಗಳನ್ನು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಂಪಾಡಿ ಗ್ರಾಮದ ಚನಲ್ ಎಂಬಲ್ಲಿ ಬಂಧಿಸಿದ್ದಾರೆ.

ಸುರತ್ಕಲ್, ಮುಕ್ಕ ನಿವಾಸಿ
ಮೊಹಮ್ಮದ್ ರಾಜಿಕ್ ಯಾನೆ ರಾಜಿಕ್ (32), ಚೇಳ್ಯಾರು ಎಮ್.ಆರ್.ಪಿ.ಎಲ್. ಕಾಲನಿ, ನಿವಾಸಿ ನಿಖಿಲ್ (19) ವಶಕ್ಕೊಳಗಾದ ಆರೋಪಿಗಳು.

ಖಚಿತ ಮಾಹಿತಿಯ ಮೇರೆಗೆ ಮಂಗಳೂರು ನಗರ ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ ಗೌಡ ಆರ್.(ಐಪಿಎಸ್) ನೇತೃತ್ವದ ರೌಡಿ ನಿಗ್ರಹ ದಳ ಕಾರ್ಯಚರಣೆ ನಡೆಸಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದಾರೆ. ಆರೊಪಿಗಳ ಮೇಲೆ ಎನ್ ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Body:ಈ ಕಾರ್ಯಾಚರಣೆ ಯಲ್ಲಿ ಪೊಲೀಸ್ ಆಯುಕ್ತ ಪಿ.ಎಸ್. ಹರ್ಷ ಅವರ ನಿರ್ದೇಶನದಂತೆ ಉಪ ಪೊಲೀಸ್ ಆಯುಕ್ತ (ಕಾ & ಸು) ಅರುಣಾಂಶು ಗಿರಿ ಪೊಲೀಸ್ ಉಪ ಆಯುಕ್ತ(ಅಪರಾಧ & ಸಂಚಾರ) ಲಕ್ಮೀ ಗಣೇಶ್ ರವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ಆರ್. ರವರ ನೇತೃತ್ವ್ವದಲ್ಲಿ ಪಣಂಬೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಅಜ್ಮತ್ ಅಲಿ ಮತ್ತು ಪೊಲೀಸ್ ಉಪನಿರೀಕ್ಷಕ ಕುಮಾರೇಶನ್ ಹಾಗೂ ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿ ಮೊಹಮ್ಮದ್, ಕುಶಲ ಮಣಿಯಾಣಿ, ಸತೀಶ್ ಎಂ. ಇಸಾಕ್ , ಶರಣ್ ಕಾಳಿ ಮತ್ತು ಪಣಂಬೂರು ಪೊಲೀಸರು ‌ತಂಡದಲ್ಲಿದ್ದರು.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.