ಮಂಗಳೂರು : ಶ್ರೀಗಂಧ ಮರ ಕಡಿಯುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
ಮೂಡಬಿದ್ರೆ ತಾಲೂಕು ಬೆಳುವಾಯಿ ನಡಿಗುಡ್ಡೆಯ ಸೇಸಪ್ಪ ಬಂಧಿತ ಆರೋಪಿ. ಈತ ಅರಣ್ಯ ಇಲಾಖೆಯ ಶಿರ್ತಾಡಿ ವ್ಯಾಪ್ತಿಯ ಪಡುಕೋಣಾಜೆ ಗ್ರಾಮದ ರಕ್ಷಿತಾರಣ್ಯದಲ್ಲಿ ಶ್ರೀಗಂಧ ಮರ ಕಡಿಯುತ್ತಿದ್ದನು. ಈ ವೇಳೆ ದಾಳಿ ನಡೆಸಿ ಈತನನ್ನು ಬಂಧಿಸಲಾಗಿದೆ. ಜೊತೆಗಿದ್ದ ಮತ್ತೋರ್ವ ಆರೋಪಿ ರಾಜು ಪರಾರಿಯಾಗಿದ್ದು, ಆತನ ಶೋಧ ಕಾರ್ಯ ನಡೆಯುತ್ತಿದೆ.
ಬಂಧಿತನಿಂದ ಮೂರೂವರೆ ಕೆಜಿ ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ್, ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ನಿರ್ದೇಶನದ ಮೇರೆಗೆ ಉಪ ಅರಣ್ಯಾಧಿಕಾರಿ ಮಂಜುನಾಥ್, ಅಶ್ವಿತ್ ಗಟ್ಟಿ, ಕಾಂತರಾಜು ಬಿ ಎ, ಅರಣ್ಯ ರಕ್ಷಕರಾದ ಬಸಪ್ಪ ಹಲಗೇರ, ಶಂಕರ ಗೌಡ, ರಮೇಶ್ ನಾಯ್ಕ್, ಸಂದೇಶ್ ಸ್ವರ್ಣನಾಯ್ಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.