ಮಂಗಳೂರು: ಕಾರಿನ ಗ್ಲಾಸ್ಗೆ ಟಿಂಟ್ ಅಳವಡಿಸಬಾರದೆಂದು ಕಾನೂನಿದೆ. ಆದರೂ ಸಹ ಅದನ್ನು ಉಲ್ಲಂಘಿಸಿ ವಾಹನಗಳ ಗ್ಲಾಸ್ ಮೇಲೆ ಟಿಂಟ್ ಅಳವಡಿಸಿದವರ ವಿರುದ್ಧ ಮಂಗಳೂರು ಪೊಲೀಸರು ಕಾರ್ಯಚರಣೆ ಆರಂಭಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಡಾ.ಪಿ.ಎಸ್ ಹರ್ಷ ಅವರ ನಿರ್ದೇಶನದಂತೆ ಮಂಗಳೂರು ಟ್ರಾಫಿಕ್ ಪೊಲೀಸರು ಕಳೆದ ನಾಲ್ಕು ದಿನದಿಂದ ಟಿಂಟ್ ಗ್ಲಾಸ್ ಅಳವಡಿಸಿದ ಕಾರುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ನಾಲ್ಕು ದಿನದಲ್ಲಿ 498 ಕಾರುಗಳ ಟಿಂಟ್ ತೆರವು ಮಾಡಲಾಗಿದ್ದು, ಈಗಾಗಲೇ 49,800.ರೂ ದಂಡವನ್ನೂ ಸಂಗ್ರಹಿಸಲಾಗಿದೆ.