ETV Bharat / state

'ನಿರ್ವಾಹಕ ಟಿಕೆಟ್‌ ಕೊಡದಿದ್ದರೆ ಫ್ರೀಯಾಗಿ ಪ್ರಯಾಣಿಸಿ, ಕಿರಿ ಕಿರಿ ಮಾಡಿದ್ರೆ...' ಆಯುಕ್ತರು ಹೇಳಿದ್ದೇನು?

author img

By

Published : Oct 4, 2019, 7:28 PM IST

ಬಸ್ ನಿರ್ವಾಹಕರು ಟಿಕೆಟ್ ನೀಡದೇ ಪ್ರಯಾಣ ದರ ಪಡೆದಲ್ಲಿ ಉಚಿತವಾಗಿ ಪ್ರಯಾಣಿಸಿ. ಹಣ ನೀಡುವಂತೆ ನಿರ್ವಾಹಕ ಕಿರಿಕಿರಿ ಮಾಡಿದಲ್ಲಿ ಬಸ್ ಮಾಲೀಕರ ಸಂಘದ ಅಧ್ಯಕ್ಷರ ವ್ಯಾಟ್ಸ್ ಆ್ಯಪ್ ಸಂಖ್ಯೆಗೆ ಬಸ್ ಸಂಖ್ಯೆ ಸಹಿತ ದೂರು ನೀಡಿ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ

ಮಂಗಳೂರು: ಬಸ್ ನಿರ್ವಾಹಕರು ಟಿಕೆಟ್ ನೀಡದೇ ಪ್ರಯಾಣ ದರ ಪಡೆದಲ್ಲಿ ಉಚಿತವಾಗಿ ಪ್ರಯಾಣಿಸಿ. ಹಣ ನೀಡುವಂತೆ ನಿರ್ವಾಹಕ ಕಿರಿಕಿರಿ ಮಾಡಿದಲ್ಲಿ ಬಸ್ ಮಾಲೀಕರ ಸಂಘದ ಅಧ್ಯಕ್ಷರ ವ್ಯಾಟ್ಸ್ ಆ್ಯಪ್ ಸಂಖ್ಯೆಗೆ ಬಸ್ ಸಂಖ್ಯೆ ಸಹಿತ ದೂರು ನೀಡಿ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸ್ ನಿರ್ವಾಹಕರು ಟಿಕೆಟ್ ನೀಡದೆ ಪ್ರಯಾಣ ದರ ಪಡೆಯುವಂತಿಲ್ಲ. ಈ ಬಗ್ಗೆ ಸಾಕಷ್ಟು ದೂರು ಬರುತ್ತಲೇ ಇವೆ. ಆದರೆ ಪರಿಸ್ಥಿತಿ ಸುಧಾರಿಸಿಲ್ಲ. ಪ್ರಯಾಣಿಕರು ಪ್ರಯಾಣ ದರ ನೀಡುವಾಗ ಟಿಕೆಟ್ ದರ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಈ ಸಂದರ್ಭ ಟಿಕೆಟ್ ನೀಡದೆ ನಿರ್ವಾಹಕ ಅಸಂಬದ್ಧವಾಗಿ ವ್ಯವಹರಿಸಿದರೆ 7996999977 ದೂರವಾಣಿ ಸಂಖ್ಯೆಗೆ ಬಸ್ ಸಂಖ್ಯೆ ಸಹಿತ ದೂರು ನೀಡಿ ಎಂದು ಪಿ.ಎಸ್.ಹರ್ಷ ಸೂಚನೆ ನೀಡಿದರು.

ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಫೋನ್​ಇನ್​ ಕಾರ್ಯಕ್ರಮ

ಚರ್ಚ್, ದೇವಸ್ಥಾನ, ಮಸೀದಿಗಳಲ್ಲಿ ವಿಶೇಷ ದಿನಗಳಲ್ಲಿ ವಾಹನ ನಿಯಂತ್ರಣ ಮಾಡಲು ಅವರದೇ ಸ್ವಯಂಸೇವಕರನ್ನು ನೇಮಿಸಬೇಕು. ಇವರು ಪೊಲೀಸರೊಂದಿಗೆ ಕೈಜೋಡಿಸಬೇಕು. ಅಲ್ಲದೆ ಟ್ರಾಫಿಕ್ ಪೊಲೀಸರಿಂದ ಅವರಿಗೆ ತರಬೇತಿಯನ್ನು ಒದಗಿಸಬೇಕು. ಕಾರ್ಯಕ್ರಮ ಮುಗಿದ ತಕ್ಷಣ ಸ್ವಯಂಸೇವಕರೇ ಪಾರ್ಕಿಂಗ್ ನಿಂದ ಎಲ್ಲಾ ವಾಹನಗಳನ್ನು ತೆರವುಗೊಳಿಸುವ ವ್ಯವಸ್ಥೆ ಮಾಡಬೇಕು. ಪೊಲೀಸರು ಈ ರೀತಿ ಮಾಡಿದಲ್ಲಿ ಧಾರ್ಮಿಕ ಭಾವನೆಗಳ ಪ್ರಶ್ನೆಗಳು ಉದ್ಭವವಾಗುತ್ತವೆ. ಅವರದೇ ಸದಸ್ಯರು ಸ್ಥಳದಲ್ಲಿ ವ್ಯವಸ್ಥೆ ಮಾಡಿದರೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ಎಂದರು.

ನೂತನ‌ ವಾಹನ ಕಾಯ್ದೆಯ ಪ್ರಕಾರ ರಸ್ತೆಯ ಅವ್ಯವಸ್ಥೆ ಕಾಮಗಾರಿಯಿಂದ ಮೃತಪಟ್ಟರೆ ಅಥವಾ ಗಾಯಗೊಂಡರೆ, ಕಾಮಗಾರಿ ನಡೆಸುವವರ ಮೇಲೆ ಪ್ರಕರಣ ದಾಖಲಿಸಬಹುದು. ನ್ಯಾಯಾಲಯ ಈ ಬಗ್ಗೆ ಸೂಕ್ತವಾಗಿ ಪರಿಶೀಲನೆ ನಡೆಸಿ, ಒಂದು ಲಕ್ಷ ರೂ‌. ವರೆಗೆ ದಂಡ ವಿಧಿಸುವ ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಡಿಸಿಪಿಗಳಾದ ಅರುಣಾಂಗು ಗಿರಿ, ಲಕ್ಷ್ಮೀಗಣೇಶ್, ಎಸಿಪಿಗಳಾದ ಮಂಜುನಾಥ ಶೆಟ್ಟಿ, ವಿನಯ್ ಗಾಂವ್ಕರ್, ಟ್ರಾಫಿಕ್ ಇನ್ ಸ್ಪೆಕ್ಟರ್ ಗಳಾದ ಅಮಾನುಲ್ಲಾ, ಗುರು ಕಾಮತ್ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Intro:ಮಂಗಳೂರು: ಬಸ್ ನಿರ್ವಾಹಕ ಪ್ರಯಾಣಿಕರಿಗೆ ಟಿಕೆಟ್ ನೀಡದಿದ್ದಲ್ಲಿ ಉಚಿತವಾಗಿ ಪ್ರಯಾಣಿಸಿ. ಹಣ ನೀಡುವಂತೆ ನಿರ್ವಾಹಕ ಕಿರಿಕಿರಿ ಮಾಡಿದಲ್ಲಿ ಬಸ್ ಮಾಲಕರ ಸಂಘದ ಅಧ್ಯಕ್ಷರ ವ್ಯಾಟ್ಸ್ ಆ್ಯಪ್ ಸಂಖ್ಯೆಗೆ ಬಸ್ ಸಂಖ್ಯೆ ಸಹಿತ ದೂರು ನೀಡಿ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದ ಸಂದರ್ಭ ಮಾತನಾಡಿದ ಅವರು, ಬಸ್ ನಿರ್ವಾಹಕರು ಟಿಕೆಟ್ ನೀಡದೆ ಪ್ರಯಾಣ ದರ ಪಡೆಯುವಂತಿಲ್ಲ. ಈ ಬಗ್ಗೆ ಸಾಕಷ್ಟು ದೂರು ಬರುತ್ತಲೇ ಇದೆ. ಆದರೆ ಪರಿಸ್ಥಿತಿ ಸುಧಾರಿಸಿಲ್ಲ. ಪ್ರಯಾಣಿಕರು ಪ್ರಯಾಣ ದರ ನೀಡುವಾಗ ಟಿಕೆಟ್ ದರ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಈ ಸಂದರ್ಭ ಟಿಕೆಟ್ ನೀಡದೆ ನಿರ್ವಾಹಕ ಅಸಂಬದ್ಧ ವಾಗಿ ವ್ಯವಹರಿಸಿದ್ದಲ್ಲಿ 7996999977 ದೂರವಾಣಿ ಸಂಖ್ಯೆಗೆ ಬಸ್ ಸಂಖ್ಯೆ ಸಹಿತ ದೂರು ನೀಡಿ. ಈ ಬಗ್ಗೆ ಬಸ್ ಮಾಲಕರ ಸಂಘದ ಮುಖ್ಯಸ್ಥರು ನಿರ್ವಾಹಕ ಹಾಗೂ ಮಾಲಕರ ಮೇಲೆ ಕ್ರಮಕೈಗೊಳ್ಳುವರು ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಸೂಚನೆ ನೀಡಿದರು.

ಚರ್ಚ್, ದೇವಸ್ಥಾನ, ಮಸೀದಿಗಳಲ್ಲಿ ವಿಶೇಷ ದಿನಗಳಲ್ಲಿ ವಾಹನ ನಿಯಂತ್ರಣ ಮಾಡಲು ಅವರದೇ ಸ್ವಯಂಸೇವಕರನ್ನು ನೇಮಿಸಬೇಕು. ಇವರು ಪೊಲೀಸರೊಂದಿಗೆ ಕೈಜೋಡಿಸಬೇಕು. ಅಲ್ಲದೆ ಟ್ರಾಫಿಕ್ ಪೊಲೀಸರಿಂದ ಅವರಿಗೆ ತರಬೇತಿಯನ್ನು ಒದಗಿಸಬೇಕು. ಕಾರ್ಯಕ್ರಮ ಮುಗಿದ ತಕ್ಷಣ ಸ್ವಯಂಸೇವಕರೇ ಪಾರ್ಕಿಂಗ್ ನಿಂದ ಎಲ್ಲಾ ವಾಹನಗಳನ್ನು ತೆರವುಗೊಳಿಸುವ ವ್ಯವಸ್ಥೆ ಮಾಡಬೇಕು. ಪೊಲೀಸರು ಈ ರೀತಿ ಮಾಡಿದ್ದಲ್ಲಿ ಧಾರ್ಮಿಕ ಭಾವನೆಗಳ ಪ್ರಶ್ನೆಗಳು ಉದ್ಭವವಾಗುತ್ತದೆ. ಅವರದೇ ಸದಸ್ಯರು ಸ್ಥಳದಲ್ಲಿ ವ್ಯವಸ್ಥೆ ಮಾಡಿದ್ದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ಹೇಳಿದರು.

Body:ನೂತನ‌ ವಾಹನ ಕಾಯ್ದೆಯ ಪ್ರಕಾರ ರಸ್ತೆಯ ಅವ್ಯವಸ್ಥೆ ಕಾಮಗಾರಿಯಿಂದ ಮೃತಪಟ್ಟರೆ ಅಥವಾ ಗಾಯಗೊಂಡರೆ, ಕಾಮಗಾರಿ ನಡೆಸುವವರ ಮೇಲೆ ಪ್ರಕರಣ ದಾಖಲಿಸಬಹುದು. ನ್ಯಾಯಾಲಯ ಈ ಬಗ್ಗೆ ಸೂಕ್ತವಾಗಿ ಪರಿಶೀಲನೆ ನಡೆಸಿ, ಒಂದು ಲಕ್ಷ ರೂ‌. ವರೆಗೆ ದಂಡ ವಿಧಿಸುವ ಅವಕಾಶವಿದೆ ಎಂದು ಡಾ.ಪಿ.ಎಸ್.ಹರ್ಷ ಹೇಳಿದರು.

ಈ ಸಂದರ್ಭ ಯುವಕರು ಬೈಕ್ ನಲ್ಲಿ ತ್ರಿಪಲ್ ರೈಡ್ ಮಾಡುತ್ತಿದ್ದಾರೆ, ಹಿರಿಯ ನಾಗರಿಕರ ಸೀಟ್ ಗಳಲ್ಲಿ ವಿದ್ಯಾವಂತರೇ ಕುಳಿತಿರುತ್ತಾರೆ, ಬಸ್ ನಿರ್ವಾಹಕರು ಅಪ್ರಾಪ್ತ ವಯಸ್ಸಿನವರಿರುತ್ತಾರೆ, ಕರ್ಕಶ ಹಾರ್ನ್ ಬಳಸಲಾಗುತ್ತದೆ, ಮರಳು ಲಾರಿಗಳ ಹಾವಳಿ ಮುಂತಾದ ಒಟ್ಟು 14 ಕರೆಗಳು ಪೊಲೀಸ್ ಫೋನ್ ಇನ್ ಕಾರ್ಯಕ್ರಮಕ್ಕೆ ಬಂದಿತ್ತು.

ಈ ಸಂದರ್ಭ ಡಿಸಿಪಿಗಳಾದ ಅರುಣಾಂಗ್ಶು ಗಿರಿ, ಲಕ್ಷ್ಮೀಗಣೇಶ್, ಎಸಿಪಿಗಳಾದ ಮಂಜುನಾಥ ಶೆಟ್ಟಿ, ವಿನಯ್ ಗಾಂವ್ಕರ್, ಟ್ರಾಫಿಕ್ ಇನ್ ಸ್ಪೆಕ್ಟರ್ ಗಳಾದ ಅಮಾನುಲ್ಲಾ, ಗುರು ಕಾಮತ್ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.