ಮಂಗಳೂರು: ಉಪ್ಪಿನಂಗಡಿಯಲ್ಲಿ ಕಾರ್ಯಕರ್ತರ ಮೇಲೆ ನಡೆದ ಲಾಠಿಚಾರ್ಜ್ ವಿರೋಧಿಸಿ ಪಿಎಫ್ಐ ಕಾರ್ಯಕರ್ತರು 'ಎಸ್ಪಿ ಕಚೇರಿ ಚಲೋ' ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಉಪ್ಪಿನಂಗಡಿಯಲ್ಲಿ ಹಲ್ಲೆ ಪ್ರಕರಣವೊಂದರ ಸಂಬಂಧ ಕೇಸ್ಗೆ ಸಂಬಂಧವಿಲ್ಲದ ಪಿಎಫ್ಐ ನಾಯಕರನ್ನು ಬಂಧಿಸಿದ್ದರ ವಿರುದ್ಧ ನಡೆದ ಪ್ರತಿಭಟನೆ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಇದನ್ನು ವಿರೋಧಿಸಿ ಪಿಎಫ್ಐ ಎಸ್ಪಿ ಕಚೇರಿ ಚಲೋ ಕಾರ್ಯಕ್ರಮ ಆಯೋಜಿಸಿತ್ತು.
ಇಂದು ಮಧ್ಯಾಹ್ನ 3.30 ರ ಸುಮಾರಿಗೆ ಎಸ್ಪಿ ಕಚೇರಿ ಚಲೋ ಮೆರವಣಿಗೆ ನಡೆಸಿದ ಪಿಎಫ್ಐ ಕಾರ್ಯಕರ್ತರನ್ನು ಮಂಗಳೂರಿನ ಕ್ಲಾಕ್ ಟವರ್ ಬಳಿಯ ಮಿನಿವಿಧಾನಸೌಧದ ಎದುರು ತಡೆಯಲಾಯಿತು. ಆಗ ಪಿಎಫ್ಐ ಕಾರ್ಯಕರ್ತರು ಅಲ್ಲಿಯೇ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಂಗಳೂರಿನಲ್ಲಿ 'ಎಸ್ಪಿ ಆಫೀಸ್ ಚಲೋ’ ಪ್ರತಿಭಟನೆ : ಬಿಗಿ ಪೊಲೀಸ್ ಬಂದೋಬಸ್ತ್