ಮಂಗಳೂರು: ಮಂಗಳೂರಿನ ಧಕ್ಕೆ ಅಳಿವೆ ಬಾಗಿಲಿನಲ್ಲಿ ಪರ್ಷಿಯನ್ ಬೋಟ್ ಮುಳುಗಡೆಯಾಗಿದ್ದು 6 ಮಂದಿ ಮೀನುಗಾರರು ಕಣ್ಮರೆಯಾಗಿದ್ದಾರೆ.
ಘಟನೆಯ ವಿವರ:
ಶ್ರೀರಕ್ಷಾ ಹೆಸರಿನ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದೆ. ಇದರಲ್ಲಿ 22 ಮಂದಿ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ನಡೆಸಿ ಮೀನುಗಳನ್ನು ಬೋಟ್‌ಗೆ ತುಂಬಿಸುವ ವೇಳೆ ಬೋಟ್‌ನೊಳಗೆ ನೀರು ನುಗ್ಗಿ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಘಟನೆಯಲ್ಲಿ 16 ಜನರನ್ನು ರಕ್ಷಣೆ ಮಾಡಲಾಗಿದೆ. ಘಟನೆ ಇಂದು ಮುಂಜಾನೆ 5 ಘಂಟೆಯ ಸುಮಾರಿಗೆ ನಡೆದಿದೆ ಎಂಬ ಮಾಹಿತಿ ದೊರೆತಿದೆ.
ಈ ಸುದ್ದಿಯನ್ನೂ ಓದಿ: ಮಂಗಳೂರು: ಬಲೆಗೆ ಸಿಲುಕಿದ ಮೀನುಗಾರ ಸಮುದ್ರಕ್ಕೆ ಬಿದ್ದು ಸಾವು
ನಾಪತ್ತೆಯಾದ ಇನ್ನುಳಿದ ಮೀನುಗಾರರ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.