ETV Bharat / state

ಜನತೆ ವಿಚಲಿತರಾಗದೇ ಶಾಂತ ಚಿತ್ತದಿಂದ ಸವಾಲು ಎದುರಿಸಬೇಕು: ಡಾ. ವೀರೇಂದ್ರ ಹೆಗ್ಗಡೆ - Dr. Veerendra Hegde

ಜನತೆ ಅವರವರ ಶ್ರದ್ಧಾ, ಭಕ್ತಿಗನುಗುಣವಾಗಿ ದೇವರನ್ನು ನಂಬುತ್ತಾರೆ. ನಂಬಿದವರನ್ನು‌ ಮಂಜುನಾಥ ಸ್ವಾಮಿ ಖಂಡಿತಾ ಕೈಬಿಡುವುದಿಲ್ಲ. ಯಾವುದೇ ಕಾರಣಕ್ಕೂ ವಿಚಲಿತರಾಗದೇ‌, ಶಾಂತ ಚಿತ್ತದಿಂದ ಸವಾಲು ಎದುರಿಸಬೇಕಿದೆ. ಮುಖ್ಯವಾಗಿ ವೈದ್ಯರು ಹಾಗೂ ಸರ್ಕಾರ ಸೂಚಿಸಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.

ಡಾ. ವೀರೇಂದ್ರ ಹೆಗ್ಗಡೆ
ಡಾ. ವೀರೇಂದ್ರ ಹೆಗ್ಗಡೆ
author img

By

Published : Dec 11, 2020, 3:05 PM IST

ಬೆಳ್ತಂಗಡಿ: ಕೊರೊನಾದಿಂದ ಇಡೀ ಜಗತ್ತು ತತ್ತರಿಸಿದೆ. ಇದು ಕೇವಲ ಒಬ್ಬರು, ಇಬ್ಬರ ಸಮಸ್ಯೆಯಲ್ಲ. ಆದ್ದರಿಂದ ಜನತೆ ಯಾವುದೇ ಕಾರಣಕ್ಕೂ ವಿಚಲಿತರಾಗದೆ‌, ಶಾಂತ ಚಿತ್ತದಿಂದ ಸವಾಲು ಎದುರಿಸಬೇಕಿದೆ. ಮುಖ್ಯವಾಗಿ ವೈದ್ಯರು ಹಾಗೂ ಸರ್ಕಾರ ಸೂಚಿಸಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಮೂಲಕ ಸಂಭಾವ್ಯ ಅಪಾಯ ತಪ್ಪಿಸಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಪಾದಯಾತ್ರಿಗಳನ್ನು‌ ಉದ್ದೇಶಿಸಿ ಮಾತನಾಡಿದ ಅವರು, ಜನತೆ ಅವರವರ ಶ್ರದ್ಧಾ, ಭಕ್ತಿಗನುಗುಣವಾಗಿ ದೇವರನ್ನು ನಂಬುತ್ತಾರೆ. ನಂಬಿದವರನ್ನು‌ ಮಂಜುನಾಥ ಸ್ವಾಮಿ ಖಂಡಿತಾ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ಅಂತೆಯೇ ಫಲವೂ ಪ್ರಾಪ್ತಿಯಾಗುತ್ತದೆ. ನಮಗೆ ಲಭಿಸಿರುವ ಈ ಶ್ರೇಷ್ಠ ಜೀವನವನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ

ಗ್ರಾಮಾಭಿವೃದ್ಧಿ ಯೋಜನೆಗೆ 4 ಲಕ್ಷ ಸದಸ್ಯರ ಸೇರ್ಪಡೆ: ಪ್ರಸಕ್ತ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ 40 ಸಾವಿರ ಸಂಘಗಳು ಹೊಸದಾಗಿ ಸೇರ್ಪಡೆಯಾಗಿದ್ದು, 4 ಲಕ್ಷ ಮಂದಿ ಹೊಸದಾಗಿ ಯೋಜನೆಗೆ ಸೇರ್ಪಡೆಯಾದಂತಾಗಿದೆ ಎಂದರು.

ಮನೆ- ಮನೆಗೆ ಸೌಕರ್ಯ: ಸಮಾಜದ ಜನತೆ ಸಂಕಷ್ಟದಲ್ಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಿವಿಧ ಜನ ಪರ ಕಾರ್ಯಗಳನ್ನು ಮನೆ ಮನೆಗಳಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಈ ಬಾರಿ ವೃದ್ಧರು, ಅಶಕ್ತರ ನೆರವಿಗಾಗಿಯೇ ವೃದ್ಧಾಪ್ಯ ವೇತನ, ವಾತ್ಸಲ್ಯ ಮೊದಲಾದ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಜಮ್ಮು- ಕಾಶ್ಮೀರ, ಪಂಜಾಬ್ ಮೊದಲಾದ ರಾಜ್ಯಗಳಲ್ಲಿಯೂ ರುಡ್ ಸೆಟ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ದೇಶದ 567 ಜಿಲ್ಲೆಗಳಲ್ಲಿ ಯುವಕರು ಸ್ವ - ಉದ್ಯೋಗಿಗಳನ್ನಾಗಿ ಮಾಡಲು ಪ್ರೇರಣೆ ನೀಡಲಾಗುತ್ತಿದೆ ಎಂದರು.

ಇದನ್ನು ಓದಿ:ಇಷ್ಟಾರ್ಥ ಈಡೇರಿಸುವ ಆಂಜನೇಯ: ಈ ವಾಯುಪುತ್ರನ ಪರಮ ಭಕ್ತರಂತೆ ದಾವಣಗೆರೆ

ಪಾದಯಾತ್ರೆಗೆ ಚಾಲನೆ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಪಾದಯಾತ್ರಾ ಸಮಿತಿ ವತಿಯಿಂದ ಧರ್ಮಸ್ಥಳದ ಅಭಿಮಾನಿಗಳು, ಭಕ್ತರು ಸಮಾನ ಮನಸ್ಕರು ಸೇರಿಕೊಂಡು ಕಳೆದ ಏಳು ವರ್ಷಗಳಿಂದ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಳ್ಳುತ್ತಿತ್ತು. ಕೋವಿಡ್-19 ಹಿನ್ನೆಲೆ ಸರ್ಕಾರ ಮಾರ್ಗಸೂಚಿಗೆ ಅನುಗುಣವಾಗಿ ಪ್ರಸ್ತುತ ವರ್ಷ 8ನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.