ಮಂಗಳೂರು: ನೂತನವಾಗಿ ಜಾರಿಯಾಗಿರುವ ದಂಡ ನಿಯಮದ ಜತೆಗೆ ವಾಹನ ಸವಾರರ ಮನ ಪರಿವರ್ತನೆ ಮುಖ್ಯ. ಎಲ್ಲವೂ ದಂಡದಿಂದಲೇ ಸಾಧ್ಯವಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಅಪಘಾತಗಳು ಆಗುವ ಸಂಖ್ಯೆ, ಮರಣಗಳ ಸಂಖ್ಯೆಗಳನ್ನು ಕಂಡಾಗ ಸಂಕಟವಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾಯ್ದೆಗಳ ಅಗತ್ಯತೆ ಇದೆ. ಬಹಳಷ್ಟು ಮಂದಿ ಅಪಘಾತಕ್ಕೆ ಬಲಿಯಾಗುತ್ತಲೇ ಇದ್ದಾರೆ. ಆದ್ದರಿಂದ ಶಿಸ್ತು ಪಾಲಿಸಲೇಬೇಕು. ಆದ್ದರಿಂದ ಸರ್ಕಾರ ಕನಿಷ್ಠ 30 ದಿನಗಳ ಕಾಲ ಸಮಯ ನೀಡಿ, ಜನರ ಮನ ಪರಿವರ್ತನೆ ಮಾಡಬೇಕು ಎಂದರು.