ETV Bharat / state

ಮೀನು ವ್ಯಾಪಾರಕ್ಕೆ ಅಡ್ಡಿ ಆರೋಪ: ಪಿಡಿಒ ವಿರುದ್ಧ ಸ್ಥಳೀಯರ ಆಕ್ರೋಶ - ಉಪ್ಪಿನಂಡಗಡಿಯಲ್ಲಿ ಮೀನು ಮಾರಾಟಗಾರರ ಸಮಸ್ಯೆ ಲೇಟೆಸ್ಟ್​ ನ್ಯೂಸ್​

ಉಪ್ಪಿನಂಗಡಿಯಲ್ಲಿ ಸ್ಥಳೀಯರಿಗೆ ಮೀನು ಮಾರಾಟ ಮಾಡಲು ಪಿಡಿಒ ಅಡ್ಡಿಪಡಿಸಿದ್ದಾರೆ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

pdo-distrup-onfish-sale-in-uppingadi
ಪಿಡಿಒ ವಿರುದ್ಧ ಸ್ಥಳೀಯರ ಆಕ್ರೋಶ
author img

By

Published : Jun 5, 2020, 10:26 AM IST

ಉಪ್ಪಿನಂಗಡಿ: ಮೀನು ಮಾರಾಟ ಮಾಡಲು ಪಿಡಿಒ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ಮೀನು ಮಾರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀನು ವ್ಯಾಪಾರಕ್ಕೆ ಪಿಡಿಒ ಅಡ್ಡಿ ಆರೋಪ

ಸ್ಥಳೀಯ ಉಪ್ಪಿನಂಗಡಿಯ ಅಶೋಕ್ ಶೆಟ್ಟಿ ಎಂಬುವರು ಇತ್ತೀಚೆಗೆ ಹೊಸದಾಗಿ ಮೀನು ವ್ಯಾಪಾರ ಆರಂಭಿಸಿದ್ದರು. ಈ ವೇಳೆ ಏಕಾಏಕಿಯಾಗಿ ಸ್ಥಳಕ್ಕಾಗಮಿಸಿದ ಉಪ್ಪಿನಂಗಡಿಯ ಪಿಡಿಒ ಯಾವುದೇ ಕಾರಣ ನೀಡದೆ ವ್ಯಾಪಾರಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ವ್ಯಾಪಾರಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಪಿಡಿಒ ಸ್ಥಳಕ್ಕೆ ಬಂದ ವಿಷಯ ತಿಳಿಯುತ್ತಿದ್ದಂತೆ ನೂರಾರು ವ್ಯಾಪಾರಸ್ಥರು ಜಮಾಯಿಸಿ ಅವರ ಕಾರನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಉಪ್ಪಿನಂಗಡಿಯಲ್ಲಿ ಹಲವಾರು ಮಂದಿ ಮೀನು ವ್ಯಾಪಾರ ನಡೆಸುತ್ತಿದ್ದು , ಅವರಿಗೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸದೆ ಏಕಪಕ್ಷೀಯ ಧೋರಣೆ ತಳೆದಿದ್ದಾರೆ ಮತ್ತು ಸ್ಥಳೀಯ ಮೀನು ವ್ಯಾಪಾರಿಯೊಬ್ಬರ ಕುಮ್ಮಕ್ಕಿನಿಂದಲೇ ವ್ಯಾಪಾರಕ್ಕೆ ಅಡ್ಡಿಪಡಿಸಿದ್ದಾರೆಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ.

ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫರ್ಡ್ ರೋಡ್ರಿಗಸ್ ರವರು ಅನಧಿಕೃತವಾಗಿ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ವ್ಯಾಪಾರ ಮಾಡುತ್ತಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿಯೇ ಕ್ರಮ ತೆಗೆದುಕೊಂಡಿದ್ದೇವೆ. ಮತ್ತು ಇಲ್ಲಿ ಯಾವುದೇ ಪಕ್ಷ,ಜಾತಿ ಹಿಡಿದು ನಾನು ಕರ್ತವ್ಯ ಮಾಡಿಲ್ಲ, ಮುಂದಿನ ದಿನಗಳಲ್ಲಿ ಉಪ್ಪಿನಂಗಡಿ ಪರಿಸರದಲ್ಲಿ ಎಲ್ಲೆಲ್ಲಾ ಅನಧಿಕೃತ ಅಂಗಡಿಗಳು ಇವೆ ಎಂಬ ಬಗ್ಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗುವ ಎಲ್ಲಾ ಅನಧಿಕೃತ ಅಂಗಡಿಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.