ಬಂಟ್ವಾಳ: ಸತೀಶ ಶೆಟ್ಟಿ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರಿಗೆ ದಿನಸಿ ಸಾಮಾಗ್ರಿ ವಿತರಿಸುವ ಕಾರ್ಯ ಆರಂಭಿಸಿದೆ.
ಪ್ರಸ್ತುತ ಸನ್ನಿವೇಶದ ಗಂಭೀರತೆಯನ್ನು ಗಣನೆಗೆ ತೆಗೆದುಕೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ತುರ್ತು ಸಭೆ ಸೇರಿ ಯಕ್ಷಗಾನ ಕಲಾವಿದರ ಕುಟುಂಬದವರಿಗೆ ಅಗತ್ಯ ಹಾಗೂ ಅವಶ್ಯಕವಾಗಿ ಸಹಕರಿಸುವ ನಿರ್ಧಾರ ಕೈಗೊಂಡಿತು.
ಇಂದಿನ ಈ ಪರಿಸ್ಥಿತಿಯಲ್ಲಿ ಯಾವುದೇ ಕಲಾವಿದ ಹಾಗೂ ಅವರ ಮನೆಯವರು ಹಸಿವಿನಿಂದ ಇರಬಾರದೆಂಬ ಉದ್ದೇಶದಿಂದ ತೆಂಕುತಿಟ್ಟು ಹಾಗೂ ಬಡಗುತಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಅಗತ್ಯವಿರುವ ಕಲಾವಿದರಿಗೆ 25 ಕೆಜಿ ಅಕ್ಕಿ ಹಾಗೂ ರೇಷನ್ ಸಾಮಗ್ರಿ ತಲುಪಿಸುವಂತಹ ಕಾರ್ಯವನ್ನು ಟ್ರಸ್ಟ್ ಕೈಗೆತ್ತಿಕೊಳ್ಳುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಪಟ್ಲ ಸತೀಶ್ ಶೆಟ್ಟಿ - 9900371441, ಪುರುಷೋತ್ತಮ ಭಂಡಾರಿ - ಪ್ರಧಾನ ಕಾರ್ಯದರ್ಶಿ - 9845172865, ಸುದೇಶ್ ಕುಮಾರ್ ರೈ – ಕೋಶಾಧಿಕಾರಿ, 8197737575 ಅವರನ್ನು ಇದುವರೆಗೆ ಸುಮಾರು 650ಕ್ಕೂ ಅಧಿಕ ಕಲಾವಿದರು ಸಂಪರ್ಕಿಸಿದ್ದು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ವಿತರಣೆ ಆರಂಭಗೊಂಡಿದೆ ಎಂದು ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.