ಶಿರಾದಲ್ಲಿ 25,000 ಮತಗಳ ಅಂತರದಲ್ಲಿ ಜಯಭೇರಿ: ಬಿ. ವೈ.ವಿಜಯೇಂದ್ರ ವಿಶ್ವಾಸ - Shira constituency election 2020
ಜೆ.ಪಿ ನೆಡ್ಡಾ ಅವರ ಸೂಚನೆಯಂತೆ ಮೈಸೂರಿನಿಂದ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಯಡಿಯೂರಪ್ಪ ಮಗನಾಗಿರುವುದು ಹೆಮ್ಮೆ ವಿಷಯ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಉಳ್ಳಾಲ: ಶಿರಾ ಕ್ಷೇತ್ರದಲ್ಲಿ 25,000 ಮತಗಳ ಅಂತರದಲ್ಲಿ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಕುತ್ತಾರು ಬಾಲಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಆಶ್ರಮದ ಮಕ್ಕಳ ಜೊತೆಗೆ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿ ಮಾತನಾಡಿದ ಅವರು, ಜೆ.ಪಿ ನೆಡ್ಡಾ ಅವರ ಸೂಚನೆಯಂತೆ ಮೈಸೂರಿನಿಂದ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಯಡಿಯೂರಪ್ಪ ಅವರ ಮಗನಾಗಿರುವುದಕ್ಕೆ ಹೆಮ್ಮೆ ವಿಷಯ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರ ಪ್ರೀತಿ ವಿಶ್ವಾಸದೊಂದಿಗೆ ಬೆಳೆಯುತ್ತಾ ಇದ್ದೇವೆ ಎಂದರು.
ಆಶ್ರಮದ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಣೆ: ಬೆಳಗ್ಗೆ 8.30 ರ ಹೊತ್ತಿಗೆ ಆಗಮಿಸಿದ ವಿಜಯೇಂದ್ರ ಅವರನ್ನ ಉಳ್ಳಾಲ ವಲಯದ ಬಿಜೆಪಿ ಕಾರ್ಯಕರ್ತರು ಬರಮಾಡಿಕೊಂಡರು. ಮೊದಲಿಗೆ ಗೋಪೂಜೆ ನೆರವೇರಿಸಿ ನಂತರ ಭಾರತಮಾತೆಗೆ ಪುಷ್ಪಾರ್ಚನೆ ಮಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷರು ನಂತರ ಮಕ್ಕಳ ಜತೆಗೆ ಹುಟ್ಟುಹಬ್ಬ ಆಚರಿಸಿದರು.

ಈ ಸಂದರ್ಭ ಆಶ್ರಮ ಸಂಘಟಕ ಅನಂತಕೃಷ್ಣ ಭಟ್, ಬಿಜೆಪಿ ಮುಖಂಡರುಗಳಾದ ಕಿಶೋರ್ ಕುಮಾರ್ ಪುತ್ತೂರು, ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಹಾಸ್ ಪಂಡಿತ್ ಹೌಸ್, ಗೋಪಾಲ್ ಕುತ್ತಾರ್, ರಾಜೀವ್ ಮೈಸೂರು ಉಪಸ್ಥಿತರಿದ್ದರು.