ETV Bharat / state

ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡುವ ಮುನ್ನ ಎಚ್ಚರ: ಬಾಲಕನಿಗೆ ವಾಹನ ನೀಡಿದ ತಂದೆಗೆ ₹ 20 ಸಾವಿರ ದಂಡ - ಬಾಲಕನಿಗೆ ವಾಹನ ನೀಡಿದ ತಂದೆಗೆ ದಂಡ

ಅಪ್ರಾಪ್ತರು ವಾಹನ ಚಲಾಯಿಸಿ ನಿಯಮ ಉಲ್ಲಂಘಿಸಿದರೆ ಪೋಷಕರು ದುಬಾರಿ ದಂಡ ಕಟ್ಟಿರುವ ಹಲವು ಪ್ರಕರಣಗಳು ದಾಖಲಾಗಿವೆ. ಅಂತೆಯೇ ಅಪ್ರಾಪ್ತ ಬಾಲಕನಿಗೆ ವಾಹನ ನೀಡಿದ ತಂದೆಗೆ ಪುತ್ತೂರು ನ್ಯಾಯಾಲಯ 20 ಸಾವಿರ ರೂ. ದಂಡ ವಿಧಿಸಿದೆ.

Representative image
ಸಾಂದರ್ಭಿಕ ಚಿತ್ರ
author img

By

Published : Nov 19, 2022, 9:09 AM IST

ಕಡಬ(ದಕ್ಷಿಣ ಕನ್ನಡ): ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ ತಪ್ಪಿಗೆ ಆತನ ತಂದೆಗೆ ನ್ಯಾಯಾಲಯವು ಬರೋಬ್ಬರಿ 20 ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಕಡಬ ತಾಲೂಕಿನ ಕೊಯಿಲ ಗ್ರಾಮದ ಕೆ.ಸಿ. ಫಾರ್ಮ್ ನಿವಾಸಿ ಅಬ್ದುಲ್ ರಹಿಮಾನ್ ದಂಡ ಪಾವತಿಸಿದವರು. 2020ನೇ ಇಸವಿಯಲ್ಲಿ ಕೊಯಿಲದಲ್ಲಿ ಅಬ್ದುಲ್ ರಹಿಮಾನ್ ಎಂಬವರು ತಮ್ಮ ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ ಚಲಾಯಿಸಲು ನೀಡಿದ್ದರು. ಆ ಸಮಯದಲ್ಲಿ ಬೈಕ್ ಅಪಘಾತವಾಗಿ ಅಪ್ರಾಪ್ತ ಬಾಲಕನ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಬಗ್ಗೆ ಪುತ್ತೂರು ಎಸಿಜೆಜೆಎಂಎಫ್​​ಸಿ ನ್ಯಾಯಾಲಯದ ನ್ಯಾಯಾಧೀಶ ಯೋಗೀಂದ್ರ ಶೆಟ್ಟಿಯವರು ತೀರ್ಪು ನೀಡಿದ್ದಾರೆ. ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ವಾಹನವನ್ನು ನೀಡಿದ್ದ ವಾಹನ ಮಾಲೀಕರಿಗೆ 20 ಸಾವಿರ ರೂ. ದಂಡ ಪಾವತಿಸುವಂತೆ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕರಾರದ ಕವಿತಾ ಅವರು ನ್ಯಾಯಾಲಯದಲ್ಲಿ ವಾದಿಸಿದ್ದರು.

ಇದನ್ನೂ ಓದಿ: ಶಿವಮೊಗ್ಗ: ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡಲೇಬೇಡಿ, ತಂದೆಗೆ ಬಿತ್ತು‌ 25 ಸಾವಿರ ರೂ ದಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.