ETV Bharat / state

ಕುಂಪಲದ ಬಗಂಬಿಲ ರಸ್ತೆಯಲ್ಲಿ ಬಿಜೆಪಿ - ಕಾಂಗ್ರೆಸ್ ರಾಜಕೀಯ: ಒಂದೇ ರಸ್ತೆ ಎರಡೆರಡು ಬಾರಿ ಉದ್ಘಾಟನೆ !

author img

By

Published : Mar 2, 2023, 10:55 PM IST

ಕುಂಪಲದ ಬಗಂಬಿಲ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಒಂದೇ ರಸ್ತೆಯನ್ನು ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷದವರು ಎರಡು ಬಾರಿ ಉದ್ಘಾಟನೆ ಮಾಡಲು ದಿನಾಂಕವನ್ನು ನಿಗದಿಗೊಳಿಸಿದ್ದಾರೆ.

ಒಂದೇ ರಸ್ತೆ ಎರಡೆರಡು ಬಾರಿ ಉದ್ಘಾಟನೆ
ಒಂದೇ ರಸ್ತೆ ಎರಡೆರಡು ಬಾರಿ ಉದ್ಘಾಟನೆ

ಉಳ್ಳಾಲ (ಮಂಗಳೂರು): ಒಂದು ರಸ್ತೆ, ಒಂದೇ ಅನುದಾನ, ಆದರೆ ಉದ್ಘಾಟನೆ ಮಾತ್ರ ಎರಡು ದಿನ! ಹೀಗೊಂದು ವಿಲಕ್ಷಣ ಪ್ರಕರಣ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ಬಿಜೆಪಿ-ಕಾಂಗ್ರೆಸ್ ನಡುವಿನ ರಸ್ತೆ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಕುಂಪಲ ಬೈಪಾಸ್‌ನಿಂದ ಬಗಂಬಿಲ ಮೂಲಕ ಯೇನಪೋಯ ಆಸ್ಪತ್ರೆಯನ್ನು ಸಂಪರ್ಕಿಸುವ ರಸ್ತೆ ಬಹುತೇಕ ಕಾಂಕ್ರೀಟ್‌ನಿಂದ ಕೂಡಿದೆ. ಈ ರಸ್ತೆಗೆ ವಿವಿಧ ಹಂತದಲ್ಲಿ ಸರಕಾರದಿಂದ ಅನುದಾನ ಬಂದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ಪ್ರಯತ್ನವೂ ಇದೆ. ಈ ನಡುವೆ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಐದನೇ ವಾರ್ಡ್ ಬಗಂಬಿಲ ಕೆಎಚ್‌ಬಿ ಕಾಲೊನಿ ಬಳಿ ಒಂದಷ್ಟು ರಸ್ತೆ ಕಾಮಗಾರಿ ಬಾಕಿ ಉಳಿದಿತ್ತು.

ಪ್ರವೀಣ್ ಬಗಂಬಿಲ ಅಭಿನಂದನೆ ಫ್ಲೆಕ್ಸ್​
ಪ್ರವೀಣ್ ಬಗಂಬಿಲ ಅಭಿನಂದನೆ ಫ್ಲೆಕ್ಸ್​

ಇಲ್ಲಿನ ರಸ್ತೆ ಗುಂಡಿಗಳಿಂದ ಕೂಡಿ ವಾಹನ ಸಂಚಾರವೂ ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ 15ನೇ ಹಣಕಾಸು ಯೋಜನೆಯಡಿ ಐದು ಲಕ್ಷ ಮತ್ತು ಪಟ್ಟಣ ಪಂಚಾಯತ್‌ನಿಂದ 10 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಇದೇ ವೇಳೆ, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾಗಿರುವ ಪ್ರವೀಣ್ ಬಗಂಬಿಲ ಅವರ ಭಾವಚಿತ್ರವುಳ್ಳ ಫ್ಲೆಕ್ಸ್ ಜಾಲತಾಣದಲ್ಲಿ ಹರಿದಾಡಿದೆ. ಈ ಫ್ಲೆಕ್ಸ್​​ನಲ್ಲಿ ಪ್ರವೀಣ್ ಅವರು ಅನುದಾನ ಬಿಡುಗಡೆಗೊಳಿಸಿದ್ದು ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಅಲ್ಲದೆ ಇಂದು ರಸ್ತೆ ಉದ್ಘಾಟನೆಗೂ ದಿನ ನಿಗದಿಗೊಳಿಸಲಾಗಿದೆ.

ಯುಟಿ ಖಾದರ್​ ಅಭಿನಂದನೆ ಫ್ಲೆಕ್ಸ್​
ಯುಟಿ ಖಾದರ್​ ಅಭಿನಂದನೆ ಫ್ಲೆಕ್ಸ್​

ಬಗಂಬಿಲ ಕಾಂಗ್ರೆಸ್ ಕಾರ್ಯಕರ್ತರ ಹೆಸರಿನಲ್ಲೂ ಹಾಕಲಾಗಿರುವ ಫ್ಲೆಕ್ಸ್ ಜಾಲತಾಣದಲ್ಲಿ ಹರಿದಾಡಿದೆ. ಇದರಲ್ಲಿ ಶಾಸಕ ಖಾದರ್ ಅವರ ಭಾವಚಿತ್ರ ಅಳವಡಿಸಲಾಗಿದ್ದು, ಅನುದಾನ ಬಿಡುಗಡೆಗೊಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಲಾಗಿದೆ. ಭಾನುವಾರ ಉದ್ಘಾಟನೆಗೆ ದಿನ ನಿಗದಿಪಡಿಸಲಾಗಿದೆ. ಒಂದೇ ಕಾಮಗಾರಿ, ಒಂದೇ ಅನುದಾನದಲ್ಲಿ ನಡೆದಿರುವ ರಸ್ತೆ ಕಾಮಗಾರಿ ರಾಜಕೀಯ ಮೇಲಾಟಕ್ಕಾಗಿ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಅನುದಾನ ಯಾರದ್ದು?: ಈ ರಸ್ತೆಗೆ 15ನೇ ಹಣಕಾಸು ಯೋಜನೆ ಮತ್ತು ಪಟ್ಟಣ ಪಂಚಾಯತ್ ನಿಧಿಯನ್ನು ಬಳಸಲಾಗಿದೆ. ಇವೆರಡೂ ಸರಕಾರದ ಅನುದಾನವೇ ಆಗಿದೆ. ಆದರೆ ವಿಧಾನಸಭಾ ಚುನಾವಣೆ ಸನಿಹದಲ್ಲೇ ಇರುವುದರಿಂದ ರಾಜಕೀಯವಾಗಿ ಗೊಂದಲ ಸೃಷ್ಟಿಸಿದೆ. ಕೋಟೆಕಾರ್ ಪಟ್ಟಣ ಪಂಚಾಯತ್‌ಗೆ 2021, ಡಿಸೆಂಬರ್ 30ರಂದು ಪಟ್ಟಣ ಪಂಚಾಯತ್‌ನ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಆದರೆ ಇದುವರೆಗೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯದ ಕಾರಣ ಅನುದಾನ ಬಳಕೆಯ ಜವಾಬ್ದಾರಿ ಶಾಸಕರದ್ದಾಗಿದ್ದು, ಅವರ ಸೂಚನೆಯನ್ನು ಅಧಿಕಾರಿಗಳು ಪಾಲಿಸಬೇಕಾಗಿದೆ. ರಸ್ತೆ ಕೆಲಸಕ್ಕೂ ಶಾಸಕರ ಸೂಚನೆ ಮೇರೆಗೆ ಅನುದಾನ ಬಳಸಲಾಗಿದೆ ಎನ್ನಲಾಗಿದೆ. ಆದರೆ, ಈ ವಿಚಾರವೇ ರಾಜಕೀಯಕ್ಕಾಗಿ ಗೊಂದಲಕ್ಕೆ ಕಾರಣವಾಗಿದ್ದು ಮಾಹಿತಿ ಕೊರತೆ ಇರುವುದು ಯಾರಿಗೆ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ಇದನ್ನೂ ಓದಿ: ಚುನಾವಣೆ ಫಲಿತಾಂಶದಿಂದ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಮತ್ತಷ್ಟು ದೃಢ: ಮೋದಿಯಿಂದ ಮತದಾರರಿಗೆ ಅಭಿನಂದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.