ETV Bharat / state

ಅಕ್ರಮ ಪಡಿತರ ಅಕ್ಕಿ ಮಾರಾಟ ದಂಧೆ ಪತ್ತೆ: ಬೆಳ್ತಂಗಡಿಯಲ್ಲಿ 14 ಕ್ವಿಂಟಾಲ್ ಅಕ್ಕಿ ಜಪ್ತಿ - illegally stored ration

ನ್ಯಾಯಬೆಲೆ ಅಂಗಡಿ ಮೂಲಕ ಸಾರ್ವಜನಿಕರಿಗೆ ವಿತರಣೆಯಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಲಾರಿಯಲ್ಲಿ ಬೇರೆಡೆಗೆ ಸಾಗಿಸಲು ಲೋಡ್ ಮಾಡುತ್ತಿದ್ದ ವೇಳೆ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್.ಜೆ ಮತ್ತು ಆಹಾರ ನಿರೀಕ್ಷಕ ವಿಶ್ವ.ಕೆ ಜಂಟಿಯಾಗಿ‌ ದಾಳಿ ಮಾಡಿ, 14 ಕ್ವಿಂಟಾಲ್ ಅಕ್ಕಿಯನ್ನ ವಶಕ್ಕೆ ಪಡೆದಿದ್ದಾರೆ.

ಪಡಿತರ ಅಕ್ಕಿ
ಪಡಿತರ ಅಕ್ಕಿ
author img

By

Published : Jun 2, 2022, 9:28 AM IST

ಬೆಳ್ತಂಗಡಿ(ದಕ್ಷಿಣ ಕನ್ನಡ) : ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮಾಡಿ ಲಾರಿಯಲ್ಲಿ ತುಂಬಿಸುತ್ತಿದ್ದ ವೇಳೆ ತಹಶೀಲ್ದಾರ್ ಮತ್ತು ಆಹಾರ ನಿರೀಕ್ಷಕ ಜಂಟಿಯಾಗಿ ನಿನ್ನೆ ಸಂಜೆ ದಾಳಿ ಮಾಡಿ, 14 ಕ್ವಿಂಟಾಲ್ ಪಡಿತರ ವಶಕ್ಕೆ ಪಡೆದ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆಯಲ್ಲಿ ನಡೆದಿದೆ.

ಗೇರುಕಟ್ಟೆ ಬಸ್ ನಿಲ್ದಾಣದ ಬಳಿ ಇರುವ ಎಸ್.ವಿ. ಟ್ರೇಡರ್ಸ್​ನಲ್ಲಿ ಸರ್ಕಾರದಿಂದ ಸಿಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಲಾರಿಯಲ್ಲಿ ಸಾಗಿಸಲು ಲೋಡ್ ಮಾಡುತ್ತಿದ್ದ ವೇಳೆ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್.ಜೆ ಮತ್ತು ಆಹಾರ ನಿರೀಕ್ಷಕ ವಿಶ್ವ.ಕೆ ಜಂಟಿಯಾಗಿ‌ ದಾಳಿ ಮಾಡಿ, ಪತ್ತೆ ಹಚ್ಚಿದ್ದಾರೆ.

ಲಾರಿಯಲ್ಲಿ ಒಟ್ಟು 14 ಕ್ವಿಂಟಾಲ್ ಪಡಿತರ ಪತ್ತೆಯಾಗಿದ್ದು, ಬೆಳ್ತಂಗಡಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ಮಹೇಶ್. ಜೆ , ಆಹಾರ ನಿರೀಕ್ಷಕ ವಿಶ್ವ. ಕೆ, ಕೊಕ್ಕಡ ಕಂದಾಯ ನಿರೀಕ್ಷಕ ಪವಡಪ್ಪ ದೊಡ್ಡಮಣಿ, ಕಳಿಯ ಗ್ರಾಮ ಪಂಚಾಯತ್ ಗ್ರಾಮಲೆಕ್ಕಿಗ ಪೃಥ್ವಿರಾಜ್, ಚಾಲಕ ಸಂತೋಷ್ ಕುಮಾರ್ ಭಾಗವಹಿಸಿದ್ದರು.

ಇದನ್ನೂ ಓದಿ: ಮೇಲೆ ಟೊಮೆಟೊ ಬಾಕ್ಸ್​, ಕೆಳಗೆ ರಕ್ತಚಂದನವಿಟ್ಟು ಸಾಗಣೆ.. ಹೊಸಕೋಟೆಯಲ್ಲಿ 600ಕೆಜಿ ರೆಡ್​ ಸ್ಯಾಂಡಲ್ ವಶಕ್ಕೆ ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.