ಮಂಗಳೂರು: ಕೋವಿಡ್ ಭೀತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಜಾತ್ರಾ ಮಹೋತ್ಸವ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.
ಕೊರೊನಾ ನಿರ್ಬಂಧದ ಹಿನ್ನೆಲೆ ಜಾತ್ರಾ ಮಹೋತ್ಸವ ಸರಳವಾಗಿ ಆಚರಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ನಿರ್ಬಂಧದ ನಡುವೆಯೇ ಭಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಮಂಗಳೂರು ತಹಶೀಲ್ದಾರ್ ಹಾಗೂ ಅಧಿಕಾರಿಗಳು ದೇವಳಕ್ಕೆ ತೆರಳಿ ಸರ್ಕಾರದ ಆದೇಶದಂತೆ ಜಾತ್ರಾ ಮಹೋತ್ಸವ ಮೊಟಕುಗೊಳಿಸಲು ಸೂಚನೆ ನೀಡಿದೆ.
ಇದನ್ನೂ ಓದಿ: ಕ್ಯಾಬ್ ವ್ಯವಹಾರದ ಮೇಲೆ ಕೋವಿಡ್ ಎರಡನೇ ಅಲೆ ಕೆಂಗಣ್ಣು
ನಿನ್ನೆ ದೇವಳದ ರಥ ಬೀದಿಯಲ್ಲಿ ಹಗಲು ರಥೋತ್ಸವ ನಡೆಸಲಾಗಿದ್ದು, ಇಂದು ನಡೆಯಲಿದ್ದ ಎಕ್ಕಾರು ಕೊಡಮಣಿತ್ತಾಯ ಹಾಗೂ ಶಿಬರೂರು ಕೊಡಮಣಿತ್ತಾಯ ಭೇಟಿಯನ್ನು ರದ್ದುಗೊಳಿಸಲಾಗಿದೆ. ಉಳಿದಂತೆ ಇಂದು ದೇವಸ್ಥಾನದ ಪ್ರಾಂಗಣ ಒಳಗೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಸರಳವಾಗಿ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.