ETV Bharat / state

'ತುಳು' ಲಿಪಿಯಲ್ಲೇ ಹನುಮಾನ್ ಚಾಲೀಸಾ ಬರೆದ ದಕ್ಷಿಣ ಕನ್ನಡದ ಒಡಿಯೂರು ಸ್ವಾಮೀಜಿ - ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಸುದ್ದಿ

ತುಳು ಭಾಷೆ, ಕನ್ನಡ ಲಿಪಿಯ ಮೂಲಕ ಸಾಹಿತಿ ವಿ ಬಿ ಅರ್ತಿಕಜೆ ಬರೆದ ತುಳಸೀದಾಸರು ರಚಿಸಿದ ಹನುಮಾನ್ ಚಾಲೀಸಾವನ್ನು ಚೊಚ್ಚಲ ಬಾರಿ ತುಳು ಲಿಪಿಯಲ್ಲಿ ಬರೆದರು. ಈ ಬಾರಿಯ ಲಾಕ್‌ಡೌನ್​​ ಅವಧಿಯಲ್ಲಿ ತುಳಸೀದಾಸ್ ಹನುಮಾನ್ ಚಾಲೀಸಾವನ್ನು ನೇರವಾಗಿ ತುಳು ಭಾಷೆಗೆ ಅನುವಾದಿಸಿ ತುಳುಲಿಪಿಯಲ್ಲಿಯೇ ರಚಿಸಿದರು..

lipi
ತುಳು ಲಿಪಿಯಲ್ಲೇ ಹನುಮಾನ್ ಚಾಲೀಸಾ
author img

By

Published : Jul 5, 2021, 1:51 PM IST

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿಯವರು ಲಾಕ್​ಡೌನ್ ಅವಧಿಯಲ್ಲಿ ತುಳು ಲಿಪಿಯನ್ನು ಪೂರ್ಣವಾಗಿ ಕಲಿತು ಅದರಲ್ಲೇ ತುಳಸೀದಾಸರ ಹನುಮಾನ್ ಚಾಲೀಸಾವನ್ನು ನೇರವಾಗಿ ಅನುವಾದಿಸಿ ಗಮನ ಸೆಳೆದಿದ್ದಾರೆ.

lipi
ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ

ದಕ್ಷಿಣದ ಗಾಣಗಾಪುರ ಎಂದು ಗುರುತಿಸಲ್ಪಟ್ಟ ಬಂಟ್ವಾಳ ತಾಲೂಕಿನ ಒಡಿಯೂರಿನಲ್ಲಿರುವ ಶ್ರೀಗುರುದೇವದತ್ತ ಸಂಸ್ಥಾನಮ್ನ ಶ್ರೀಗುರುದೇವಾನಂದ ಸ್ವಾಮೀಜಿ ಪ್ರತಿ ವರ್ಷ ತುಳು ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ವಿದ್ವಾಂಸರನ್ನು ಕರೆಸಿ ಚರ್ಚಾಗೋಷ್ಠಿಗಳನ್ನು ಏರ್ಪಡಿಸುತ್ತಾರೆ. ತುಳು ಭಾಷೆ, ಸಾಹಿತ್ಯ, ಸಂಸ್ಕ್ರತಿಯ ಉಳಿವಿಗಾಗಿ ಕೇರಳ-ಕರ್ನಾಟಕದ ಗಡಿ ಹಾಗೂ ಅವಿಭಜಿತ ಜಿಲ್ಲೆಯಲ್ಲಿ ಹತ್ತು-ಹಲವು ಕಾರ್ಯಕ್ರಮಗಳನ್ನು ಸಂಘಟಿಸಿ ತುಳು ಬೆಳವಣಿಗೆಗೆ ಹೆಗಲು ಕೊಟ್ಟವರು.

ಕಳೆದ ಬಾರಿಯ ಲಾಕ್​ಡೌನ್​ ಸಮಯದಲ್ಲಿ ತುಳು ಲಿಪಿ ಅಧ್ಯಯನ ಆರಂಭಿಸಿದರು. ಭಾಷೆಯ ಬೆಳವಣಿಗೆಗೆ ಬಲ ತುಂಬುವ ಲಿಪಿಯ ಬಗ್ಗೆ ಆಸಕ್ತರಾಗಿ ತುಳುಲಿಪಿಯ ಪ್ರತಿ ಬೀಜಾಕ್ಷರಗಳನ್ನು ಬರೆಯಲು ಕಲಿತರು. ಮಾರ್ಚ್​​ನಿಂದ ಜುಲೈ ತನಕ ಲಿಪಿಯನ್ನು ಕಲಿತು, ಲಿಪಿ ಮೂಲಕ ಲೀಲಾಜಾಲವಾಗಿ ಬರೆಯುವುದನ್ನು ಕಲಿತರು.

ತುಳು ಭಾಷೆ, ಕನ್ನಡ ಲಿಪಿಯ ಮೂಲಕ ಸಾಹಿತಿ ವಿ ಬಿ ಅರ್ತಿಕಜೆ ಬರೆದ ತುಳಸೀದಾಸರು ರಚಿಸಿದ ಹನುಮಾನ್ ಚಾಲೀಸಾವನ್ನು ಚೊಚ್ಚಲ ಬಾರಿ ತುಳು ಲಿಪಿಯಲ್ಲಿ ಬರೆದರು. ಈ ಬಾರಿಯ ಲಾಕ್‌ಡೌನ್​​ ಅವಧಿಯಲ್ಲಿ ತುಳಸೀದಾಸ್ ಹನುಮಾನ್ ಚಾಲೀಸಾವನ್ನು ನೇರವಾಗಿ ತುಳು ಭಾಷೆಗೆ ಅನುವಾದಿಸಿ ತುಳುಲಿಪಿಯಲ್ಲಿಯೇ ರಚಿಸಿದರು.

ಇದಲ್ಲದೇ ಏಕೀಶ್ಲೋಕ ರಾಮಾಯಣ, ಶ್ರೀಕೃಷ್ಣ ಲೀಲಾಮೃತ, ಚರ್ತುಶ್ಲೋಕಿ ಮದ್ಭಾಗವತ ಇನ್ನಿತರ ಪುರಾಣಗಳನ್ನು ತುಳು ಲಿಪಿಯಲ್ಲಿ ಬರೆದು ಮುಗಿಸಿದ್ದಾರೆ. ''ಭಾಷೆ ಎಂಬುದು ಭಾವನೆಗಳಿಗೆ ಸಂವಹನ ಕಲ್ಪಿಸುವ ಸಂಪರ್ಕಸೇತು. ಮಾತೃಭಾಷೆಯ ಬಗ್ಗೆ ಅಗಾಧ ಪ್ರೇಮವಿರಬಹುದು.

ಆದರೆ, ಅನ್ಯ ಭಾಷೆಯಯನ್ನು ಸದಾ ಗೌರವಿಸಬೇಕು. ಸಮೃದ್ಧ ಸಾಹಿತ್ಯವನ್ನೊಳಗೊಂಡಿರುವ ತುಳುಭಾಷೆ ತುಳು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಲೇಬೇಕು. ನಮ್ಮೆಲ್ಲರ ಒತ್ತಾಸೆ, ಪರಿಶ್ರಮದಿಂದ ಆ ಮಾನ್ಯತೆಗೊಳಪಡುವ ದಿನ ದೂರವಿಲ್ಲ'' ಎನ್ನುತ್ತಾರೆ ಶ್ರೀ ಗುರುದೇವಾನಂದ ಸ್ವಾಮೀಜಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.