ETV Bharat / state

ಪುತ್ತೂರು; ಸಮಸ್ಯೆ ಪರಿಹಾರಕ್ಕೆ ಟ್ವಿಟರ್ ಅಭಿಯಾನ ಹಮ್ಮಿಕೊಂಡ ಎನ್​ಪಿಎಸ್ ಸಂಘ

ಪುತ್ತೂರಿನಲ್ಲಿ ಎನ್‌ಪಿಎಸ್ ನೌಕರರ ಸಂಘ ಸರ್ಕಾರಿ ನೌಕರರಿಗೆ ಮಾಸ್ಕ್ ವಿತರಣೆ ಮಾಡುವ ಮೂಲಕ ಕೊರೊನಾ ಮುನ್ನೆಚ್ಚರಿಕೆ ಕ್ರಮ ಮತ್ತು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡುವ ಪ್ರಯತ್ನ ಮಾಡಿದೆ.

NPS Association
ನಮ್ಮ ಸಮಸ್ಯೆಗಳ ಕಡೆ ಸರ್ಕಾರದ ಗಮನ ಸೆಳೆಯಲು ಟ್ವಿಟರ್ ಅಭಿಯಾನ ಹಮ್ಮಿಕೊಂಡ ಎನ್​ಪಿಎಸ್ ಸಂಘ
author img

By

Published : Jun 26, 2020, 10:19 PM IST

ಪುತ್ತೂರು: ಕೊರೊನಾ ವೈರಸ್ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದೆ. ದೇಶದಲ್ಲಿಯೂ ಕೊರೊನಾ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಶ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಎನ್‌ಪಿಎಸ್ ನೌಕರರಿಗೂ ಮಹಾಮಾರಿ ಎದುರಾಗಿದೆ. ಈ ನಿಟ್ಟಿನಲ್ಲಿ ಎನ್‌ಪಿಎಸ್ ನೌಕರರ ಸಂಘ ಜೂ.26ರಂದು ಎನ್.ಎಮ್.ಒ.ಪಿ.ಎಸ್ ವತಿಯಿಂದ ಟ್ವಿಟ್ಟರ್ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಪುತ್ತೂರು ತಾಲೂಕು ಎನ್.ಪಿ.ಎಸ್ ಸಂಘದಿಂದ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸುವ ಮತ್ತು ಬೇಡಿಕೆಯ ಅಭಿಯಾನಕ್ಕೆ ಚಾಲನೆ ನೀಡಿದರು.

ನಮ್ಮ ಸಮಸ್ಯೆಗಳ ಕಡೆ ಸರ್ಕಾರದ ಗಮನ ಸೆಳೆಯಲು ಟ್ವಿಟರ್ ಅಭಿಯಾನ ಹಮ್ಮಿಕೊಂಡ ಎನ್​ಪಿಎಸ್ ಸಂಘ

ರಾಜ್ಯದಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಅನೇಕ ಹೋರಾಟಗಳೇ ನಡೆದಿದೆ. ರಾಜ್ಯ ಸರ್ಕಾರವೂ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರೂ ಇದುವರೆಗೂ ಈಡೇರಿಸಿಲ್ಲ. ಇದೀಗ ಕೊರೊನಾ ವಾರಿಯರ್ಸ್ ಆಗಿ ಬಹುತೇಕ ಎನ್‌ಪಿಎಸ್ ನೌಕರರು ದುಡಿಯುತ್ತಿದ್ದಾರೆ. ಇಂತಹ ಎನ್​ಪಿಎಸ್ ನೌಕರರು ಹಾಗೂ ಅವಲಂಬಿತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಎನ್‌ಎಮ್‌ಒಪಿಎಸ್ ಕಾರ್ಯಕಾರಿ ಸಮಿತಿಯು ಪ್ರಸಕ್ತ ಸಂದರ್ಭದಲ್ಲಿ ಸರ್ಕಾರದ ಗಮನವನ್ನು ನಮ್ಮ ಸಮಸ್ಯೆಗಳ ಕಡೆ ಸೆಳೆಯಲು ಟ್ವಿಟರ್ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಎನ್​ಪಿಎಸ್​ ಪುತ್ತೂರು ತಾಲೂಕು ಕಾರ್ಯದರ್ಶಿ ವಿಮಲ್ ಕುಮಾರ್ ಹೇಳಿದರು.

2006ರ ನಂತರ ರಾಜ್ಯ ಸರ್ಕಾರ ಹಳೆ ಪಿಂಚಣಿ ಯೋಜನೆ ಕೈಬಿಟ್ಟು ನೂತನ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಈ ಕೊರೊನಾ ಸಂದರ್ಭ ವಾಸ್ತವತೆ ಅರ್ಥ ಆಗಿದೆ. ನಮ್ಮ ಹಲವು ಹೋರಾಟಗಳ ಮೂಲಕ ಈಗಾಗಲೇ ಸರ್ಕಾರದ ಮುಂದೆ ಹಳೆಯ ಪಿಂಚಣಿ ಯೋಜನೆ ಬೇಕೆಂದು ಬೇಡಿಕೆ ಇಟ್ಟಿದ್ದೇವೆ. ಇದಕ್ಕೆ ಪೂರಕವಾಗಿ ಎನ್.ಎಮ್.ಒ.ಪಿ.ಎಸ್ ವತಿಯಿಂದ ಟ್ವಿಟರ್ ಅಭಿಯಾನ ನಡೆಯುತ್ತಿದೆ. ತಾಲೂಕು ಮಟ್ಟದಲ್ಲಿ ನಾವು ಮಾಸ್ಕ್ ವಿತರಣೆ ಮಾಡುವ ಮೂಲಕ ಜಾಗೃತಿಯ ಜೊತೆಗೆ ಬೇಡಿಕೆ ಮುಂದಿಟ್ಟಿದ್ದೇವೆ ಎಂದು ತಿಳಿಸಿದರು.

ಮಾಸ್ಕ್ ವಿತರಣಾ ಅಭಿಯಾನದಲ್ಲಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ವಿದ್ಯಾಧರ್ ರೈ, ಜಿಲ್ಲಾಧ್ಯಕ್ಷ ಇಬ್ರಾಹಿಂ, ಅಶ್ರಫ್, ಪ್ರದೀಪ್, ಹರಿ ಪ್ರಸಾದ್, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.