ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ನೂತನ ಸಿಂಡಿಕೇಟ್ ಸದಸ್ಯರ ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಆರು ಮಂದಿ ನೂತನ ಸಿಂಡಿಕೇಟ್ ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿದೆ. ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ವಕೀಲರು ಮತ್ತು ನೋಟರಿ ಅಗಿರುವ ಸುರೇಶ್ ಕುಮಾರ್ ಬಿ ನಾವೂರು, ಮಂಗಳೂರಿನ ಸಿ ಎ ನಿತಿನ್ ಶೆಟ್ಟಿ, ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ತಲ್ಲೂರು ಗ್ರಾಮದ ಮಜೂಡಿತ್ ಮೆಂಡೊನಿಕ, ಮಂಗಳೂರಿನ ಕದ್ರಿ ಕಂಬಳದ ರಘುರಾಜ್, ಉಳ್ಳಾಲ ತಾಲೂಕಿನ ಅಚ್ಯುತಾ ಗಟ್ಟಿ ಮತ್ತು ಎನ್ ಎಸ್ ಯು ಐ ಮುಖಂಡ ಸವಾದ್ ಸುಳ್ಯ ಅವರನ್ನು ನೇಮಕ ಮಾಡಲಾಗಿದೆ.
ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ಕರ್ನಾಟಕ ವಿದ್ಯಾವಿದ್ಯಾಲಯಗಳ ಅಧಿನಿಯಮ, 2000ರ ಪ್ರಕರಣ 28(1)(ಜಿ)ರಡಿ ಪ್ರದತ್ತವಾದ ಅಧಿಕಾರದನ್ವಯ ಹಾಗೂ ಪ್ರಕರಣ 38 ಮತ್ತು 39ರ ಉಪಬಂಧಗಳಿಗೊಳಪಟ್ಟು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನಾಮನಿರ್ದೇಶನ ಮಾಡಿ ಆದೇಶಿಸಲಾಗಿದೆ.
ಇದನ್ನೂ ಓದಿ: ನ್ಯಾಯಾಲಯವು ಸಂವಿಧಾನದ ಅನುಸಾರದಲ್ಲಿ ನಡೆಯುತ್ತಿದ್ದು, ಜಾತ್ಯತೀತವಾಗಿದೆ: ಹೈಕೋರ್ಟ್