ಕಡಬ: ಶಾಲಾ - ಕಾಲೇಜುಗಳು ಪುನಾರಂಭವಾಗಿದ್ದು, ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಆದರೆ ಕಡಬ, ಅಲಂಕಾರು ಕಡೆಗಳಿಂದ ಪುತ್ತೂರಿನ ಶಾಲಾ ಕಾಲೇಜುಗಳಿಗೆ ಆಗಮಿಸಲು ಸರಿಯಾದ ಬಸ್ ಸೌಲಭ್ಯವಿಲ್ಲದೇ (ಗ್ರಾಮೀಣ ಬಸ್ ಸಂಚಾರ) ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಸುಳ್ಯ ಹಾಗೂ ಕಡಬ ತಾಲೂಕಿನ ಬಹುತೇಕ ಪ್ರದೇಶಗಳಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಅಲ್ಲಿಂದ ಹೇಗೋ ಸಾಹಸ ಮಾಡಿ ಕಡಬ ಪೇಟೆಗೆ ಬಂದರೂ ಇಲ್ಲಿಂದ ಪುತ್ತೂರಿನ ಶಾಲೆಗಳಿಗೆ ಹೋಗಲು ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆ, ಕಡಬದಿಂದ ಪುತ್ತೂರು ಕಡೆ ಹೋಗುವ ಕಡಬ - ಅಲಂಕಾರು - ಶಾಂತಿಮೊಗೆರು - ಪುತ್ತೂರು ಬಸ್ ಸೇರಿದಂತೆ ಬೆಳಗ್ಗೆ ಸಂಚರಿಸುವ ಹಲವಾರು ಬಸ್ಗಳನ್ನು ರದ್ದು ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: ಮಂದಾರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ ಹೃದಯಾಘಾತದಿಂದ ಸಾವು
ಆದರೆ, ಶಾಲಾ ಕಾಲೇಜುಗಳು ಆರಂಭವಾಗಿ ಹಲವು ದಿನಗಳೇ ಕಳೆದರೂ ರದ್ದು ಮಾಡಿದ ಬಸ್ಗಳು ಮಾತ್ರ ವಾಪಸ್ ರಸ್ತೆಗೆ ಬಂದಿಲ್ಲ. ಇದರಿಂದಾಗಿ ಕಡಬದಿಂದ ಶಾಲಾ ಕಾಲೇಜುಗಳಿಗೆ ಆಗಮಿಸುವ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಂತಾಗಿದೆ.