ETV Bharat / state

ಉಳ್ಳಾಲದಲ್ಲಿ ಸಮುದ್ರಲೆಗಳ ಅಬ್ಬರ ಜೋರು; ಅಪಾಯದಂಚಿನಲ್ಲಿ ಸಮ್ಮರ್​ ಸ್ಯಾಂಡ್​ ರೆಸಾರ್ಟ್

ನಿಸರ್ಗ ಚಂಡಾಮಾರುತ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಉಳ್ಳಾಲ ಭಾಗದ ನಾಡದೋಣಿ ಮೀನುಗಾರರು ಮೀನುಗಾರಿಕೆಯನ್ನು ಜೂ.1 ರಿಂದಲೇ ಸ್ಥಗಿತಗೊಳಿಸಿದ್ದಾರೆ. ಇದೀಗ ರೆಸಾರ್ಟ್‌ವೊಂದು ಅಪಾಯ ಎದುರಿಸುತ್ತಿದೆ.

Ullal beach
ಉಳ್ಳಾಲ ಬೀಚ್​
author img

By

Published : Jun 3, 2020, 10:13 AM IST

ಮಂಗಳೂರು: ಉಳ್ಳಾಲದಾದ್ಯಂತ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿರುವ ಪರಿಣಾಮ ಸಮುದ್ರದ ಅಂಚಿನಲ್ಲಿರುವ ರೆಸಾರ್ಟ್ ಅಪಾಯದ ಅಂಚಿಗೆ ಸಿಲುಕಿದೆ.

ಉಳ್ಳಾಲದಲ್ಲಿ ಕಡಲ ಅಬ್ಬರ

ಕೋಟೆಪುರ, ಕೈಕೋ, ಕಿಲಿರಿಯಾನಗರ, ಮೊಗವೀರಪಟ್ನ, ಸೋಮೇಶ್ವರ, ಉಚ್ಚಿಲ ಭಾಗಗಳಲ್ಲಿ ಸಮುದ್ರ ಬಿರುಸುಗೊಂಡಿವೆ. ಆದರೆ ಮಳೆಗಾಲ ಆರಂಭದ ಮುನ್ನವೇ ಸಮುದ್ರ ತೀರದಲ್ಲಿ ಬಮ್ರ್ ಅನ್ನು ಹಾಕಲಾದ ಹಿನ್ನೆಲೆಯಲ್ಲಿ ಅಪಾಯದಂಚಿನಲ್ಲಿದ್ದ ಮನೆಗಳು ಸುರಕ್ಷಿತವಾಗಿದೆ. ಆದರೆ ಉಳ್ಳಾಲ ಬೀಚ್ ಸಮೀಪವೇ ಇರುವ ಸಮ್ಮರ್ ಸ್ಯಾಂಡ್ ರೆಸಾರ್ಟ್ ರಾತ್ರಿ ಹೊತ್ತಿಗೆ ಅಪಾಯದ ಅಂಚಿಗೆ ಸಿಲುಕಿದೆ. ಅಲೆಗಳು ರೆಸಾರ್ಟ್‍ಗೆ ಬಡಿಯಲು ಆರಂಭಿಸಿದೆ.

ಕಳೆದ ವರ್ಷದ ಮಳೆಗಾಲ ಸಂದರ್ಭದಲ್ಲಿ ರೆಸಾರ್ಟ್ ತಡೆಗೋಡೆಗಳು ಸಮುದ್ರಪಾಲಾಗಿದ್ದವು. ಇದೀಗ ರೆಸಾರ್ಟ್‍ಗೆ ಅಲೆಗಳು ಬಡಿಯಲಾರಂಭಿಸಿದೆ. ನಿಸರ್ಗ ಚಂಡಮಾರುತ ಹಿನ್ನೆಲೆಯಲ್ಲಿ ಉಳ್ಳಾಲ ಭಾಗದ ನಾಡದೋಣಿ ಮೀನುಗಾರರು ಮೀನುಗಾರಿಕೆಯನ್ನು ಜೂ.1 ರಿಂದಲೇ ಸ್ಥಗಿತಗೊಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.