ಮಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಈ ಸಂಬಂಧ ನಗರಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 45 ಚೆಕ್ ಪೋಸ್ಟ್ ವ್ಯವಸ್ಥೆ ಮಾಡಲಾಗಿದ್ದು, ನೈಟ್ ಕರ್ಫ್ಯೂ ಬಂದೋಬಸ್ತಿಗೆ ಸಿವಿಲ್, ಡಿಎಆರ್, ಕೆಎಸ್ಆರ್ಪಿ ಸಿಬ್ಬಂದಿ, 47 ಪಿಎಸ್ಐ, ಎಸಿಪಿ, ಡಿಸಿಪಿಗಳು ಸೇರಿದಂತೆ ಸುಮಾರು 350 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಓದಿ: ಕೋವಿಡ್ ನೈಟ್ ಕರ್ಫ್ಯೂ: ಕೆಆರ್ ಪುರ ಸೇತುವೆ ಬಂದ್
ನೈಟ್ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಖುದ್ದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಫೀಲ್ಡಿಗಿಳಿದು ತಪಾಸಣೆ ನಡೆಸಿದರು.