ETV Bharat / state

ಕೂಲಿ ಕೆಲಸ ಮಾಡಿ PhD ಪಡೆದ ನಿಯಾಝ್‌ ಪಣಕಜೆ - ಪಿಎಚ್​ಡಿ

ನಿಯಾಝ್ ‌‌‌ಪಣಕಜೆ ತಮ್ಮ ವಿದ್ಯಾಭ್ಯಾಸಕ್ಕಾಗಿ ಬಾವಿ ತೋಡುವುದು, ಮಣ್ಣು ಎತ್ತುವುದು, ಗದ್ದೆ-ತೋಟದ ಕೆಲಸ ಸಹಿತ ಎಲ್ಲಾ ವಿಧದ ಕೂಲಿ ಕೆಲಸ ಮಾಡುತ್ತಿದ್ದರು. ಇದೀಗ ಪಿ.ಎಚ್‌.ಡಿ ಪದವಿಯನ್ನೂ ಸಂಪಾದಿಸಿದ್ದಾರೆ.

Niaz Panakaje
ನಿಯಾಝ್‌ ಪಣಕಜೆ
author img

By

Published : Mar 5, 2021, 4:45 PM IST

ಬೆಳ್ತಂಗಡಿ: ಮಡಂತ್ಯಾರು ಪಣಕಜೆಯ ನಿವಾಸಿ ನಿಯಾಝ್ ‌‌‌ಪಣಕಜೆ ಅವರು ಕೂಲಿ ಕೆಲಸ ಮಾಡುತ್ತಲೇ ವಿದ್ಯಾಭ್ಯಾಸ ಮಾಡಿ ಪಿ.ಎಚ್‌.ಡಿ ಪದವಿ ಪಡೆದಿದ್ದಾರೆ.

ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ಅಬೂಬಕ್ಕರ್ ಸಿದ್ದಿಕ್ ಮಾರ್ಗದರ್ಶನದಲ್ಲಿ ಇವರು ಮಂಡಿಸಿದ Role of Co-operative banking in socio-economic development of rural Muslim communities-A study in DK district of Karnataka ಎನ್ನುವ ಸಂಶೋಧನಾ ಮಹಾ ಪ್ರಬಂಧಕ್ಕೆ ನಿಯಾಝ್ ‌ಅವರಿಗೆ ಮಂಗಳೂರು ವಿ.ವಿ ಪಿಎಚ್‌.ಡಿ ನೀಡಿದೆ.

ನಿಯಾಝ್‌ ಪಣಕಜೆ ಅವರು ಪಣಕಜೆಯ ಇಬ್ರಾಹಿಂ ಹಾಗೂ ಝುಬೈರಾ ದಂಪತಿ ಪುತ್ರ. ಬಡ ಕುಟುಂದವರಾದ ಇವರು ತಮ್ಮ ವಿದ್ಯಾಭ್ಯಾಸಕ್ಕಾಗಿ ಕೂಲಿ ಕೆಲಸ, ಬಾವಿ ತೋಡುವುದು, ಮಣ್ಣು ಎತ್ತುವುದು, ಗದ್ದೆ-ತೋಟದ ಕೆಲಸ ಸಹಿತ ಎಲ್ಲಾ ವಿಧದ ಕೆಲಸ ಮಾಡುತ್ತಿದ್ದರು. ಅಲ್ಲದೇ ಇವರು ಮನೆ ಮನೆಗೆ ತೆರಳಿ ದಿನಪತ್ರಿಕೆ ವಿತರಿಸುವ ಕೆಲಸವನ್ನೂ ಮಾಡಿದ್ದಾರೆ.

ಮಂಗಳೂರು ಸೈಂಟ್ ಆಗ್ನೆಸ್ ಪಿಜಿ ಸೆಂಟರ್‌ನಲ್ಲಿ ಎಂಕಾಂ ಪದವಿ ಪಡೆದ ಇವರು 2017ರಲ್ಲಿ ಮೈಸೂರು ವಿವಿಯಿಂದ ಕೆ-ಸೆಟ್ ಮುಗಿಸಿ, ಇದೀಗ ಮಂಗಳೂರು ವಿವಿಯಿಂದ ಪಿಎಚ್​ಡಿ ಪದವಿ ಪಡೆದಿದ್ದಾರೆ. ಈಗಾಗಲೇ 55ಕ್ಕೂ ಹೆಚ್ಚು ಸಂಶೋಧನಾತ್ಮಕ ಪ್ರಬಂಧಗಳನ್ನು ರಾಷ್ಟ್ರದ ವಿವಿ ಸೆಮಿನಾರ್‌ಗಳಲ್ಲಿ ಮಂಡಿಸಿದ ನಿಯಾಝ್ 50ಕ್ಕೂ ಅಧಿಕ ಅತಿಥಿ ಉಪನ್ಯಾಸ ನೀಡಿದ್ದಾರೆ. ಅನೇಕ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.