ಮಂಗಳೂರು: ನಗರದ ಫಲ್ಗುಣಿ ನದಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.
ನಗರದ ತೋಟ ಬೇಂಗ್ರೆಯಲ್ಲಿ ಮಗುವಿನ ಮೃತದೇಹ ನದಿಯಲ್ಲಿ ತೇಲಿ ಬರುತ್ತಿರುವುದು ಮೀನುಗಾರರಿಗೆ ಕಂಡು ಬಂದಿದೆ. ಬೋಟಿನಲ್ಲಿದ್ದ ಮೀನುಗಾರರಾದ ರಹೀಂ ಹಾಗೂ ಫೈಸಲ್ ಎಂಬುವರು ಮಗುವಿನ ಮೃತದೇಹವನ್ನು ಮೇಲಕ್ಕೆತ್ತಿ ಪಣಂಬೂರು ಠಾಣೆಗೆ ದೂರು ನೀಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಹುಟ್ಟಿರುವ ಮಗು ಇದಾಗಿದ್ದು, ಯಾರೋ ನದಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಓದಿ: ಯುವತಿಗೆ ಬ್ಲ್ಯಾಕ್ ಮೇಲ್: ಪುಣಚ ನಿವಾಸಿ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು
ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.