ETV Bharat / state

ಗುಜರಾತಿನ ಗ್ರೀನ್ ಜೂ ಯಿಂದ ಪಿಲಿಕುಳ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ - ಮಂಗಳೂರು ಪಿಲಿಕುಳ ಮೃಗಾಲಯ

ಪಿಲಿಕುಳ ಮೃಗಾಲಯಕ್ಕೆ ರಿಲಯನ್ಸ್ ಫೌಂಡೇಷನ್ ನಿಂದ ರೂ ಒಂದು ಕೋಟಿ ದೇಣಿಗೆ ಸಿಕ್ಕಿದೆ. ಗ್ರೀನ್ ಮೃಗಾಲಯ ಮತ್ತು ರೆಸ್ಕ್ಯೂ ಸೆಂಟರ್​ನ ಮಾತೃ ಸಂಸ್ಥೆಯಾದ ರಿಲಯನ್ಸ್ ಫೌಂಡೇಷನ್ ಪಿಲಿಕುಳ ಮೃಗಾಲಯಕ್ಕೆ ಹೊಸ ಪ್ರಾಣಿಗಳ ಆವರಣ ರಚನೆ ಮತ್ತು ಅಭಿವೃದ್ಧಿಗೆ ಒಂದು ಕೋಟಿಯನ್ನು ದೇಣಿಗೆಯಾಗಿ ನೀಡಿರುತ್ತಾರೆ ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಹೆಚ್. ಜೆ. ಭಂಡಾರಿ ತಿಳಿಸಿದ್ದಾರೆ.

New animals and birds brought to Pilikula Zoo from Green Zoo, Gujarat
ಗುಜರಾತಿನ ಗ್ರೀನ್ ಜೂ ಯಿಂದ ಪಿಲಿಕುಳ ಮೃಗಾಲಯಕ್ಕೆ ತರಿಸಲಾದ ಹೊಸ ಪ್ರಾಣಿ-ಪಕ್ಷಿಗಳು
author img

By

Published : Dec 20, 2022, 7:56 PM IST

ಮಂಗಳೂರು: ಪಿಲಿಕುಳ ಮೃಗಾಲಯಕ್ಕೆ ಪ್ರಾಣಿ ವಿನಿಮಯ ಕಾರ್ಯಕ್ರಮ ಅಡಿ ಸದ್ಯ ಹೊಸ ಅತಿಥಿಗಳ ಆಗಮನವಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿ ಮೇರೆಗೆ ಗುಜರಾತಿನ ಗ್ರೀನ್ ಜೂ ಯಿಂದ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ವಿವಿಧ ಪ್ರಾಣಿಪಕ್ಷಿಗಳನ್ನು ಕರೆತರಲಾಗಿದೆ.

ಮದ್ಯ ಮತ್ತು ದಕ್ಷಿಣ ಅಮೆರಿಕ, ಬ್ರೆಜಿಲ್, ಅರ್ಜೆಂಟೀನಾ, ಆಫ್ರಿಕಾ ಖಂಡ ಮತ್ತು ಆಸ್ಟ್ರೇಲಿಯಗಳಲ್ಲಿ ಕಾಣಸಿಗುವ ಸಣ್ಣ ಜಾತಿಯ ಅಳಿಲು ಕಪಿ, ಮರ‍್ಮೊಸೆಟ್, ಕೆಂಪು ಕೈಯ ಟೆಮಾರಿನ, ಮಾರ ಮಾರ, ಬೃಹತ್ ಗಾತ್ರದ ನೀಲಿ ಬಂಗಾರದ ಮಕಾವು, ಮಿಲಿಟರಿ ಮಕಾವು, ಗಾಲಾ ಕೋಕಟು, ಹಸಿರು ಟೊರೆಕೊ ಮತ್ತು ವಿವಿಧ ಜಾತಿಯ ಪರದೇಶದ ಪಕ್ಷಿಗಳನ್ನು ತರಿಸಲಾಗಿದೆ. ಇದಕ್ಕೆ ವಿನಿಮಯವಾಗಿ ಪಿಳಿಕುಳದಲ್ಲಿ ಹೆಚ್ಚುವರಿಯಾಗಿರುವ ಹುಲಿಗಳು, ಚಿರತೆಗಳು, ಕಾಡುನಾಯಿಗಳು ಮತ್ತು ವಿವಿಧ ಜಾತಿಯ ಉರಗಗಳನ್ನು ಗುಜರಾತಿನ ಗ್ರೀನ್ ಜೂವಿಗೆ ನೀಡಲಾಗಿದೆ.

New animals and birds brought to Pilikula Zoo from Green Zoo, Gujarat
ಗುಜರಾತಿನ ಗ್ರೀನ್ ಜೂ ಯಿಂದ ಪಿಲಿಕುಳ ಮೃಗಾಲಯಕ್ಕೆ ತರಿಸಲಾದ ಹೊಸ ಪ್ರಾಣಿ-ಪಕ್ಷಿಗಳು

ಇನ್ನು, ಹಲವು ವಿದೇಶಿ ಪ್ರಾಣಿಗಳನ್ನು ಉಚಿತವಾಗಿ ಕೊಡಲಾಗುವುದೆಂದು ಗ್ರೀನ್ ಮೃಗಾಲಯದ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ. ಹೊಸದಾಗಿ ಬಂದ ಪ್ರಾಣಿಗಳ ಆರೋಗ್ಯವನ್ನು ಪರಿಶೀಲಿಸಲು ಮತ್ತು ಇಲ್ಲಿಯ ವಾತಾವರಣಕ್ಕೆ ಒಗ್ಗುವ ತನಕ ಕ್ವಾರೆಂಟೈನ್​ನಲ್ಲಿ ಇಡಲಾಗಿದೆ. ಪಕ್ಷಿಗಳು ವೀಕ್ಷಣೆಗೆ ಮುಕ್ತವಾಗಿದ್ದು ಮತ್ತು ಇತರ ಪ್ರಾಣಿಗಳನ್ನು ಕ್ವಾರೆಂಟೈನ್ ಅವಧಿ ಮುಗಿದ ಕೂಡಲೇ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುವುದು. ಮೃಗಾಲಯದ ವೈದ್ಯಾಧಿಕಾರಿಗಳು, ಬಯೋಲೋಜಿಸ್ಟ್​ಗಳು ಮತ್ತು ಪ್ರಾಣಿ ಪರಿಪಾಲಕರು ಪ್ರಾಣಿಗಳ ಆರೋಗ್ಯದ ಮೇಲೆ ನಿಗವಹಿಸುತ್ತಿದ್ದಾರೆ.

ಹಾಗೆ ಮುಖ್ಯವಾಗಿ, ಪಿಲಿಕುಳ ಮೃಗಾಲಯಕ್ಕೆ ರಿಲಯನ್ಸ್ ಫೌಂಡೇಷನ್ ನಿಂದ ರೂ ಒಂದು ಕೋಟಿ ದೇಣಿಗೆ ಸಿಕ್ಕಿದೆ. ಗ್ರೀನ್ ಮೃಗಾಲಯ ಮತ್ತು ರೆಸ್ಕ್ಯೂ ಸೆಂಟರ್​ನ ಮಾತೃ ಸಂಸ್ಥೆಯಾದ ರಿಲಯನ್ಸ್ ಫೌಂಡೇಷನ್ ಪಿಲಿಕುಳ ಮೃಗಾಲಯಕ್ಕೆ ಹೊಸ ಪ್ರಾಣಿಗಳ ಆವರಣ ರಚನೆ ಮತ್ತು ಅಭಿವೃದ್ಧಿಗೆ ಒಂದು ಕೋಟಿಯನ್ನು ದೇಣಿಗೆಯಾಗಿ ನೀಡಿರುತ್ತಾರೆ ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಹೆಚ್. ಜೆ. ಭಂಡಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಪದವಿ ಫಲಿತಾಂಶ ವಿಳಂಬ : ಮಂಗಳೂರು ವಿವಿ ಆಡಳಿತಸೌಧದ ಎದುರು ಎಬಿವಿಪಿ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.