ETV Bharat / state

ರಾಹುಲ್ ಗಾಂಧಿ 224 ಕ್ಷೇತ್ರಕ್ಕೂ ಹೋಗಲಿ, ಅವರು ಹೋದಲೆಲ್ಲ ಕಾಂಗ್ರೆಸ್ ಸೋತಿದೆ: ನಳಿನ್ ಕುಮಾರ್ ಕಟೀಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವರ್ಚ್ಯುಯಲ್ ಸಭೆಯನ್ನು ವೀಕ್ಷಿಸಿದ ನಳಿನ್ ಕುಮಾರ್ ಕಟೀಲ್.

bjp
ನಳಿನ್ ಕುಮಾರ್ ಕಟೀಲ್
author img

By

Published : Apr 27, 2023, 2:23 PM IST

Updated : Apr 27, 2023, 3:10 PM IST

ಸಭೆ ಕುರಿತು ನಳಿನ್ ಕುಮಾರ್ ಕಟೀಲ್ ಮತ್ತು ಕಾರ್ಯಕರ್ತರಿಂದ ಪ್ರತಿಕ್ರಿಯೆ

ಮಂಗಳೂರು(ದಕ್ಷಿಣ ಕನ್ನಡ): ರಾಹುಲ್ ಗಾಂಧಿ ಅವರು 224 ಕ್ಷೇತ್ರಕ್ಕೂ ಹೋಗಿ ಬರಲಿ ಎಂದು ವಿನಂತಿ ಮಾಡುತ್ತೇನೆ. ಅವರು ಹೋದಲೆಲ್ಲ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್​ನ ಜಾಯಮಾನವೇ ಭ್ರಷ್ಟಾಚಾರವಾಗಿದೆ. ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಮಂಗಳೂರಿನ ಡೊಂಗರಕೇರಿಯ ಸುಧೀಂದ್ರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕರ್ತರ ಜೊತೆಗೆ ನಡೆದ ಸಂವಾದದ ವರ್ಚುಯಲ್​ ಸಭೆಯನ್ನು ವೀಕ್ಷಿಸಿದ ಬಳಿಕ ನಳಿನ್ ಕುಮಾರ್ ಕಟೀಲ್ ಮಾತನಾಡಿದರು. ಮನೆ ಮನೆಗೆ ಹೋಗಿ ಯಾವ ವಿಚಾರ ಹೇಳಬೇಕು. ನಮ್ಮ ದೇಶದ ನಮ್ಮ ರಾಜ್ಯದ ಸರಕಾರಗಳ ಸಾಧನೆ, ಡಬಲ್ ಇಂಜಿನ್ ಸರಕಾರದ ಸಾಧನೆ, ನಮ್ಮ ಸರಕಾರ ನೀಡಿರುವ ಕೊಡುಗೆಗಳನ್ನು ಜನರ ಬಳಿಗೆ ಮುಟ್ಟಿಸುವ ಬಗ್ಗೆ ಪ್ರಧಾನಮಂತ್ರಿ ಗಳು ಕಾರ್ಯಕರ್ತರಿಗೆ ಪ್ರೇರಣೆ ನೀಡುವ ಮೂಲಕ ಹೇಳಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ ರಕ್ತ ಯಾರ ಉಪಯೋಗಕ್ಕೂ ಬರಲ್ಲ: ಸಿಎಂ ಬೊಮ್ಮಾಯಿ ಟಾಂಗ್

ಮನೆಮನೆಗೆ ಪ್ರಚಾರಕ್ಕೆ ಹೋದಾಗ ಕಾರ್ಯಕರ್ತ ಹೇಗಿರಬೇಕು. ಬಿಜೆಪಿ ಕಾರ್ಯಕರ್ತ ಚುನಾವಣೆಯನ್ನು ಹೇಗೆ ಸವಾಲಾಗಿ ಸ್ವೀಕರಿಸಬೇಕು ಎಂಬುದನ್ನು ಪ್ರಧಾನಮಂತ್ರಿ ಕಾರ್ಯಕರ್ತರಿಗೆ ಪ್ರೇರಣೆ ನೀಡಿದ್ದಾರೆ. ಪ್ರಧಾನಮಂತ್ರಿಗಳು ಕಾರ್ಯಕರ್ತರಿಗೆ ಉತ್ಸಾಹ ತುಂಬಿದ್ದಾರೆ. ಇಡೀ ರಾಜ್ಯದಲ್ಲಿ ಹೊಸ ವಾತಾವರಣ ನಿರ್ಮಾಣವಾಗಿದೆ ಎಂದರು.

ಈಗಾಗಲೇ ಮಹಾಚುನಾವಣಾ ಪ್ರಚಾರದ ಭಾಗವಾಗಿ ‌ಮನೆ ಮನೆ ಸಂಪರ್ಕಗಳನ್ನು ‌ಪ್ರಾರಂಭ ಮಾಡಿದ್ದೇವೆ. ಅದಕ್ಕೆ ವೇಗ ಮತ್ತು ಉತ್ಸಾಹ ಎರಡು ತುಂಬಿದೆ. ಪ್ರಧಾನಮಂತ್ರಿಗಳ ಈ ಸಭೆಯಿಂದ ಕಾರ್ಯಕರ್ತರಿಂದ ಇನ್ನಷ್ಟು ಉತ್ಸಾಹ ಬರಲಿದೆ ಎಂದರು. ಪ್ರಧಾನಮಂತ್ರಿಗಳ ಸಂವಾದದಲ್ಲಿ ತನ್ನ ಪ್ರಶ್ನೆಗೆ ಉತ್ತರಿಸಿದ ಬಗ್ಗೆ ಬಿಜೆಪಿ ಕಾರ್ಯಕರ್ತ ಅರುಣ್ ಶೇಟ್ ಮಾತನಾಡಿ, ನಾನು ಕೇಳಿದ ಪ್ರಶ್ನೆಗೆ ಪ್ರಧಾನಮಂತ್ರಿಗಳು ಸುಂದರವಾಗಿ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಯುವಕರ ಏಳಿಗೆ, ದೇಶದ ಅಭಿವೃದ್ಧಿಯೇ ಡಬಲ್​ ಎಂಜಿನ ಸರ್ಕಾರದ ಪ್ರಮುಖ ಉದ್ದೇಶ.. ಮೋದಿ ಘೋಷಣೆ

ಕಾಂಗ್ರೆಸ್​ನವರು ಉಚಿತವಾಗಿ ಕೊಡುವ ಭರವಸೆಗಳ ಬಗ್ಗೆ ಅವರ ಅಭಿಪ್ರಾಯ ಕೇಳಿ ಪ್ರಶ್ನೆ ಕಳುಹಿಸಿಕೊಟ್ಟಿದೆ. ಉಚಿತ ಕೊಡುಗೆ ನೀಡುವ ಮೂಲಕ ದೇಶದ ರಾಜ ಸ್ವನಷ್ಟವಾಗಿ ದೇಶ ಕಂಗಾಲಾಗುವ ಪರಿಸ್ಥಿತಿ ಬರುತ್ತದೆ. ಆ ರೀತಿ ಬರಬಾರದು. ಉಚಿತ ಕೊಡುಗೆಗಳ ಮೂಲಕ ದೇಶವನ್ನು ನಷ್ಟಕ್ಕೆ ತಳ್ಳಬಾರದು ಎಂದು ಮಾರ್ಗದರ್ಶನ ಕೊಟ್ಟಿದ್ದಾರೆ ಎಂದರು.

ರಾಜ್ಯ,ರಾಷ್ಟ್ರ ಅಭಿವೃದ್ದಿಗೆ ಡಬಲ್​ ಎಂಜಿನ್ ಸರ್ಕಾರ ಮುಖ್ಯ: ಚುನಾವಣೆ ಹಿನ್ನೆಲೆ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿ ನಡೆಸಿದ್ದ ವರ್ಚುವಲ್​ ಸಂವಾದದಲ್ಲಿ ಕಾರ್ಯಕರ್ತರೊಬ್ಬರು ಮೋದಿಯವರಿಗೆ ಡಬಲ್​ ಇಂಜಿನ್​ ಸರ್ಕಾರದ ಮೂಲ ಉದ್ದೇಶ ಏನೆಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಧಾನಿಯವರು, ದೇಶದ ಯುವಕರನ್ನು ಬಲಿಷ್ಠಗೊಳಿಸುವುದು, ರಾಷ್ಟ್ರವನ್ನು ಅಭಿವೃದ್ಧಿಗೊಳಿಸುವುದು ಇದರ ಉದ್ದೇಶವಾಗಿದೆ. ರಾಜ್ಯ ಸೇರಿದಂತೆ ದೇಶ ಅಭಿವೃದ್ದಿ ಹೊಂದಬೇಕಾದರೆ ಡಬಲ್​ ಇಂಜಿನ್​ ಸರ್ಕಾರದ ಆಯ್ಕೆ ಮಾಡಬೇಕಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Karnataka Election: ಅಮಿತ್ ಶಾ ವಿರುದ್ಧ ಕಾಂಗ್ರೆಸ್ ನಾಯಕರಿಂದ ಪೊಲೀಸರಿಗೆ ದೂರು

Last Updated : Apr 27, 2023, 3:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.