ETV Bharat / state

ವೃತ್ತಿ ಮೂಲಕ ಭಗವಂತನನ್ನು ಕಂಡುಕೊಂಡ ಸಮುದಾಯವಿದು: ಕಟೀಲ್ ಗುಣಗಾನ - nalin kumar katil

ಕುತ್ತಾರು ಗಾಣದ ಮನೆ ಜೀರ್ಣೋದ್ಧಾರ ಸಮಿತಿ ಇದರ ಆಶ್ರಯದಲ್ಲಿ ಕುತ್ತಾರು ತೇವುಲದಲ್ಲಿ ನೂತನವಾಗಿ ನಿರ್ಮಾಣಗೊಂಡ ಗಾಣಕೊಟ್ಯದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​​ ಭಾಗವಹಿಸಿದ್ದರು.

nalin-kumar-kateel
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್
author img

By

Published : Jun 27, 2020, 9:32 AM IST

ಉಳ್ಳಾಲ : ಕುತ್ತಾರು ಪ್ರದೇಶದಲ್ಲಿ ಹತ್ತಾರು ವರ್ಷಗಳಿಂದ ವೃತ್ತಿಯಲ್ಲಿ ಗಾಣವನ್ನು ಅನುಸರಿಸಿಕೊಂಡು ಬಂದ ಸಮಾಜ ಗಾಣದ ಕೊಟ್ಯದ ಮೂಲಕ ಭಗವಂತನನ್ನು ಆರಾಧನೆ ಮಾಡಿಕೊಂಡು ಬರುತ್ತಿದೆ. ವೃತ್ತಿಯ ಮೂಲಕವೇ ಭಗವಂತನನ್ನು ಕಂಡಂತ ಉತ್ತಮ ನಿದರ್ಶನ ಗಾಣದ ಕೊಟ್ಯದ್ದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅಭಿಪ್ರಾಯಪಟ್ಟರು.

ಕುತ್ತಾರು ಗಾಣದ ಮನೆ ಜೀರ್ಣೋದ್ಧಾರ ಸಮಿತಿ ಇದರ ಆಶ್ರಯದಲ್ಲಿ ಕುತ್ತಾರು ತೇವುಲದಲ್ಲಿ ನೂತನವಾಗಿ ನಿರ್ಮಾಣಗೊಂಡ ಗಾಣಕೊಟ್ಯದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಪ್ರದಾಯದ ಪ್ರಕಾರ ದೈವಾರಾಧನೆ, ದೇವತಾರಾಧನೆಗೆ ಪರಿಶುದ್ಧ ತೈಲವನ್ನು ಅರ್ಪಣೆ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್

ತೈಲ ತಯಾರಿಸುವ ಈ ಗಾಣದ ಕೊಟ್ಯವನ್ನು ಆರಾಧನೆಯ ರೂಪದಲ್ಲಿ ಕಾಣುವುದು ಒಂದು ವಿಶಿಷ್ಟ ಸಂಪ್ರದಾಯವಾಗಿದೆ. ಶಿಥಿಲಾವಸ್ಥೆಯಲ್ಲಿದ್ದ ಈ ಗಾಣದ ಕೊಟ್ಯದ ಪುನರ್ ನಿರ್ಮಾಣದ ಮೂಲಕ ಹಿಂದಿನ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ದೈವಾರಾಧನೆ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗಣೇಶ್ ಟೈಲರ್, ನಾಗೇಶ್ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.