ETV Bharat / state

ನಾಡೋಜ ಡಾ. ಜಿ.ಶಂಕರ್ ಟ್ರಸ್ಟ್​​​​​ನಿಂದ ಸರ್ಕಾರಿ & ಖಾಸಗಿ ಆಸ್ಪತ್ರೆಗೆ ಕೋವಿಡ್ ಕಿಟ್ ಕೊಡುಗೆ - Nadoja Dr G Shankar family trust donate covid kit

ನಾಡೋಜ ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನಿಂದ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ಕೋವಿಡ್ ಕಿಟ್ ಕೊಡುಗೆಯಾಗಿ ನೀಡಲಾಯಿತು.

Covid kit
Covid kit
author img

By

Published : Aug 11, 2020, 2:01 PM IST

ಮಂಗಳೂರು: ಉಡುಪಿಯ ನಾಡೋಜ ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನಿಂದ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ಕೋವಿಡ್ ಕಿಟ್ ಕೊಡುಗೆಯಾಗಿ ನೀಡಲಾಯಿತು.

ಮಂಗಳೂರಿನಲ್ಲಿರುವ ಜಿಲ್ಲಾ ಸರ್ಕಾರಿ ವೆನ್‍ಲಾಕ್ ಆಸ್ಪತ್ರೆ ಮತ್ತು ಕೆ.ಎಂ.ಸಿ. ಆಸ್ಪತ್ರೆಗೆ ಕೋವಿಡ್ ಕಿಟ್ ಕೊಡುಗೆಯಾಗಿ ನೀಡಲಾಗಿದೆ.

ಈ ಎರಡು ಆಸ್ಪತ್ರೆಗೆ ಸುಮಾರು ರೂ. 12 ಲಕ್ಷ ಮೌಲ್ಯದ ಕೋವಿಡ್-19 ಪಿಪಿಇ ಕಿಟ್‍ ವಿತರಿಸಲಾಯಿತು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮ್ಮುಖದಲ್ಲಿ ಡಾ. ಜಿ.ಶಂಕರ್ ಅವರು ವೆನ್‍ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸದಾಶಿವ ಮತ್ತು ಬಿ. ಶೇಷಪ್ಪ ಹಾಗೂ ಕೆ.ಎಂ.ಸಿ ಪರವಾಗಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೇಮಲತಾ ಅವರಿಗೆ ಸರಳ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಸದ ನಳಿನ್‍ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ದಿವಾಕರ್, ಕೊಲ್ಲಾಡಿ ಬಾಲಕೃಷ್ಣ ರೈ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.