ETV Bharat / state

ಶಾಸಕ ಹರೀಶ್​ ಪೂಂಜಾರಿಗೆ ಕೊರಿಯರ್​ನಲ್ಲಿ ಬಂದ್ವು ಟೋಪಿ, ಹಸಿರು ಶಾಲು.. ಕಾರಣ? - Harish Poonja on Muslims votes

ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿಂದು ಅಲ್ಪಸಂಖ್ಯಾತರ ಸಮಾವೇಶ ನಡೆದಿದೆ. ಸಿಪಿಐ ಕಾರ್ಯಕರ್ತರೊಬ್ಬರು ಮುಸ್ಲಿಂರ ಬಿಳಿ ಟೋಪಿ ಮತ್ತು ಹಸಿರು ಶಾಲನ್ನು ಕೊರಿಯರ್ ಮೂಲಕ ಕಳುಹಿಸುವ ಮೂಲಕ ಟೀಕಿಸಿದ್ದಾರೆ.

Muslim hat green shawl courier to MLA Harish Poonja
ಶಾಸಕ ಹರೀಶ್ ಪೂಂಜಾರಿಗೆ ಮುಸ್ಲಿಂರ ಟೋಪಿ, ಹಸಿರು ಶಾಲು ಕೊರಿಯರ್
author img

By

Published : Jun 22, 2022, 8:05 PM IST

ಮಂಗಳೂರು (ದಕ್ಷಿಣ ಕನ್ನಡ): ಈ ಹಿಂದೆ ಭಾಷಣದ ವೇಳೆ 'ನನಗೆ ಮುಸ್ಲಿಂರ ಮತಗಳು ಬೇಡ' ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿಂದು ಅಲ್ಪಸಂಖ್ಯಾತರ ಸಮಾವೇಶ ನಡೆದಿದೆ. ಇದನ್ನು ಟೀಕಿಸಿ ಸಿಪಿಐ ಕಾರ್ಯಕರ್ತರೊಬ್ಬರು ಮುಸ್ಲಿಂರ ಬಿಳಿ ಟೋಪಿ ಮತ್ತು ಹಸಿರು ಶಾಲನ್ನು ಕೊರಿಯರ್ ಮೂಲಕ ಕಳುಹಿಸಿದ್ದಾರೆ.

MLA Harish Poonja Convention
ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿಂದು ಅಲ್ಪಸಂಖ್ಯಾತರ ಸಮಾವೇಶ

ಕೆಲ ದಿನಗಳ ಹಿಂದೆ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತ 'ನನಗೆ ಮುಸ್ಲಿಂರ ‌ಮತಗಳು ಬೇಡ' ಎಂದು ಭಾಷಣ ಮಾಡಿದ್ದರು. ಈ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆದಿದ್ದವು. ಇದೀಗ ಮೋದಿ ಸರ್ಕಾರದ ಆಡಳಿತದ ಎಂಟನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬೆಳ್ತಂಗಡಿಯಲ್ಲಿ ಅಲ್ಪಸಂಖ್ಯಾತ ಬಂಧುಗಳ ಸಮಾವೇಶ ಆಯೋಜಿಸಲಾಗಿತ್ತು. ಬಿಜೆಪಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಈ ಸಮಾವೇಶ ನಡೆಸಲಾಗಿದೆ.

ಅಲ್ಪಸಂಖ್ಯಾತರ ಸಮಾವೇಶ ನಡೆಸಿದ್ದಕ್ಕೆ ಶಾಸಕ ಹರಿಶ್​ ಪೂಂಜಾರಿಗೆ ಕೊರಿಯರ್​ನಲ್ಲಿ ಬಂದ್ವು ಟೋಪಿ, ಹಸಿರು ಶಾಲು!
Muslim hat green shawl courier to MLA Harish Poonja
ಶಾಸಕ ಹರೀಶ್ ಪೂಂಜಾರಿಗೆ ಪತ್ರ

ಇದನ್ನೂ ಓದಿ: 'ನನಗೆ ಮುಸ್ಲಿಮರ ಮತಗಳ ಅಗತ್ಯವಿಲ್ಲ, ಹಿಂದೂಗಳ ಮತಗಳು ಸಾಕು': ಶಾಸಕ ಹರೀಶ್ ಪೂಂಜಾ

ಮುಸ್ಲಿಂರ ಮತಗಳು ನನಗೆ ಬೇಡ ಎಂದು ಭಾಷಣ ಮಾಡಿದ್ದ ಶಾಸಕ ಹರೀಶ್ ಪೂಂಜಾ ಅವರು ಅಲ್ಪಸಂಖ್ಯಾತರ ಸಮಾವೇಶ ನಡೆಸುತ್ತಿರುವುದಕ್ಕೆ ವ್ಯಂಗ್ಯವಾಡಿ ಸಿಪಿಐ ಕಾರ್ಯಕರ್ತ ಶೇಖರ್ ಲಾಯಿಲಾ ಅವರು ಶಾಸಕರ ಕಚೇರಿಗೆ ಮುಸ್ಲಿಂರ ಟೋಪಿ, ಹಸಿರು ಶಾಲು ರವಾನಿಸಿದ್ದಾರೆ. ಇದರ ಜೊತೆಗೆ ಶಾಸಕರಿಗೆ ಪತ್ರ ಕೂಡ ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.