ಮಂಡ್ಯ: ಆಟೋ ಹಾಗೂ 50 ಸಾವಿರ ರೂಪಾಯಿ ಹಣಕ್ಕೆ ಮಾರ್ವಾಡಿವೋರ್ವನನ್ನು ರಾಜಸ್ಥಾನ ಮೂಲದವರು ಕೊಲೆ ಮಾಡಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗಳಾದ ರಾಜಸ್ಥಾನ ಮೂಲದ ಮನೀಶ್ ಹಾಗೂ ಕಿಶನ್ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು ಬಳಿಕ ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ಬೆಳಗ್ಗೆ ರಾಜಸ್ಥಾನ ಮೂಲದ ವ್ಯಾಪಾರಿ ಬುಂಡಾರಾಮ್ರನ್ನು ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಹಾಸನದಲ್ಲಿ ಬಂಧಿಸಿದ್ದರು. ವಿಚಾರಣೆ ವೇಳೆ ಕಿಶನ್ ಮತ್ತು ಮನೀಸ್, ಒಂದು ಆಟೋ ಮತ್ತು 50 ಸಾವಿರ ರೂಪಾಯಿಗೆ ಕೊಲೆ ಮಾಡಲು ಒಪ್ಪಿಕೊಂಡಿದ್ದರು ಎಂದು ಎನ್ನಲಾಗ್ತಿದೆ.
ಈ ಕೊಲೆಗೆ ಬುಂಡಾರಾಮ್ ಪತ್ನಿ ಚಂದ್ರಿಕಾ ಹಾಗೂ ಆಕೆಯ ಪ್ರಿಯಕರ ಸುರೇಶ್ ಸುಪಾರಿ ನೀಡಿದ್ದರು ಎಂದು ಹೇಳಲಾಗ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪಶ್ಚಿಮ ಠಾಣೆ ಪೊಲೀಸರು, ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.