ETV Bharat / state

ಪ್ರಿಯತಮೆಯ ಚಿಕ್ಕಮ್ಮನಿಗೆ ಅಶ್ಲೀಲ ವೀಡಿಯೋ ಕಳುಹಿಸಿ, ಕರೆ ಮಾಡಿ ಕಾಟ ಕೊಡುತ್ತಿದ್ದ ಯುವಕ ಅಂದರ್​ - ಪ್ರೀತಿಸಿದ ಯುವತಿಯ ಚಿಕ್ಕಮ್ಮಳಿಗೆ ಅಶ್ಲೀಲ ಸಂದೇಶ

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೂಲದ ನಿವಾಸಿ ಸಂತೋಷ್ ಎಂಬಾತನನ್ನ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಪ್ರಿಯತಮೆಯ ಚಿಕ್ಕಮ್ಮನಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಿದ್ದ  ಬಂಧನ

author img

By

Published : Nov 10, 2021, 3:15 AM IST

ಮಂಗಳೂರು: ಪ್ರೀತಿ ಮಾಡುತ್ತಿದ್ದ ಯುವತಿಯನ್ನು ಬಚ್ಚಿಟ್ಟ ಕಾರಣಕ್ಕೆ ಸಿಟ್ಟಿಗೆದ್ದ ಯುವಕನೋರ್ವ ಪ್ರಿಯತಮೆಯ ಚಿಕ್ಕಮ್ಮನ ಮೊಬೈಲ್​ಗೆ ತನ್ನದೇ ಅಶ್ಲೀಲ ವೀಡಿಯೋ ಕಳುಹಿಸಿದ್ದಲ್ಲದೆ, ವಿಭಿನ್ನ ನಂಬರ್​ಗಳಿಂದ ಕರೆಮಾಡಿ ಅಶ್ಲೀಲವಾಗಿ ಮಾತನಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೂಲದ ನಿವಾಸಿ ಸಂತೋಷ್ ಎಂಬಾತನನ್ನ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯ ಅಕ್ಕನ ಮಗಳನ್ನು ಮೂಡಿಗೆರೆ ಮೂಲದ, ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಸಂತೋಷ್ ಎಂಬಾತ ಪ್ರೀತಿಸುತ್ತಿದ್ದ. ಇದಕ್ಕೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಆಕೆಯನ್ನು ಮಂಗಳೂರಿನಲ್ಲಿರುವ ಚಿಕ್ಕಮನ ಮನೆಯಲ್ಲಿ ಇರಿಸಿದ್ದರು. ಆದರೆ, ಸಂತೋಷ್ ಯುವತಿಯ ಮೊಬೈಲ್​​ಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸುವುದು ಹಾಗೂ ಕರೆ ಮಾಡಿ ಮಾತನಾಡುವುದನ್ನು ಮುಂದುವರಿಸಿದ್ದ.

ಇದನ್ನು ತಿಳಿದ ಆಕೆಯ ಚಿಕ್ಕಮ್ಮ, ಯುವತಿಯ ಮೊಬೈಲ್‌ ಸಿಮ್ ಕಾರ್ಡನ್ನು ತೆಗೆದಿಟ್ಟಿದ್ದರು. ಆ ಬಳಿಕ ಆರೋಪಿ ಸಂತೋಷ್, ಹುಡುಗಿಯ ಚಿಕ್ಕಮ್ಮನ ಮೊಬೈಲ್ ಸಂಖ್ಯೆಗೆ ಬೇರೆ ಬೇರೆ ನಂಬರ್​ಗಳಿಂದ ಕರೆ ಮಾಡತೊಡಗಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಸಂತೋಷ್ ಕರೆ ಮಾಡುತ್ತಿದ್ದ ಎಲ್ಲ ನಂಬರ್ ಗಳನ್ನು ಬ್ಲಾಕ್ ಮಾಡಿದ್ದರು.

ಆದರೆ ಈ ನಡುವೆ, ಸಂತೋಷ್ ಬೇರೊಂದು ಮೊಬೈಲ್ ಸಂಖ್ಯೆಯಿಂದ ಯುವತಿಯ ಚಿಕ್ಕಮ್ಮನ ಮೊಬೈಲಿಗೆ ಪುರುಷರ ಗುಪ್ತಾಂಗದ ನಗ್ನ ಚಿತ್ರವನ್ನು ಕಳುಹಿಸಿದ್ದಾನೆ. ಅಲ್ಲದೆ, ತನ್ನದೇ ಅಶ್ಲೀಲ ವೀಡಿಯೋ ಒಂದನ್ನು ಕಳುಹಿಸಿದ್ದಾನೆ. ಜೊತೆಗೆ ಮಹಿಳೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದರಿಂದ ಮಾನಸಿಕ ಹಿಂಸೆಗೊಳಗಾದ ಮಹಿಳೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.