ETV Bharat / state

ಆಕಸ್ಮಿಕವಾಗಿ ಕೆರೆಗೆ ಬಿದ್ದ ಮಗು: ರಕ್ಷಿಸಲು ಹೋದ ತಾಯಿಯೂ ನೀರುಪಾಲು

ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದ ಮಗುವನ್ನು ರಕ್ಷಿಸಲು ಕೆರೆಗೆ ಹಾರಿದ ತಾಯಿ ಹಾಗೂ ಮಗು ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಸುಳ್ಯ ತಾಲೂಕಿನಲ್ಲಿ ನಡೆದಿದೆ.

child dies after drowning in lake
ತಾಯಿ ಮಗು ಸಾವು
author img

By

Published : Aug 8, 2021, 5:02 PM IST

ಸುಳ್ಯ: ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದ ಮಗುವನ್ನು ರಕ್ಷಿಸಲು ಕೆರೆಗೆ ಹಾರಿದ ತಾಯಿ ಹಾಗೂ ಮಗು ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನೆಲ್ಲೂರು ಕೇಮ್ರಾಜೆ ಗ್ರಾಮದಲ್ಲಿ ನಡೆದಿದೆ.

ನೆಲ್ಲೂರು ಕೇಮ್ರಾಜೆ ಗ್ರಾಮದ ಮಾಪಲಕಜೆಯಲ್ಲಿ ತವರು ಮನೆ ಹೊಂದಿರುವ ಮೆಲ್ಕಾರ್ ನಿವಾಸಿ ಅಮಿತ್ ಎಂಬವರ ಪತ್ನಿ ಸಂಗೀತಾ(30) ಮತ್ತು ಆಕೆಯ ಮಗು‌ ನಾಲ್ಕು ವರ್ಷದ ಅಭಿಮನ್ಯು ಮೃತರು.

ಕಳೆದ ಎರಡು ದಿನಗಳ ಹಿಂದೆ ತವರು ಮನೆಗೆ ಪೂಜೆಯ ನಿಮಿತ್ತವಾಗಿ ಬಂದಿದ್ದು, ನಾಳೆ ಮೆಲ್ಕಾರ್​ಗೆ ಹೋಗುವವರಿದ್ದರು. ಪಕ್ಕದ ನೆಂಟರೋರ್ವರ ಮನೆಗೆ ಹೋಗುವಾಗ ಮಗು ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದಿದೆ ಎನ್ನಲಾಗಿದೆ. ಮಗು ಕೆರೆಗೆ ಬಿದ್ದದ್ದನ್ನು ನೋಡಿದ ತಾಯಿ ಸಂಗೀತಾ ಅವರು ಮಗುವನ್ನು ರಕ್ಷಿಸಲು ಕೆರೆಗೆ ಹಾರಿದ್ದಾರೆ. ಆದರೆ ಈಜುಲು ಬಾರದ ಸಂಗೀತಾ ಅವರು ಮಗುವನ್ನು ರಕ್ಷಿಸಲೂ ಆಗದೆ ಇತ್ತ ತನ್ನ ಪ್ರಾಣವನ್ನೂ ರಕ್ಷಿಸಿಕೊಳ್ಳಲಾಗದೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸುಳ್ಯ ಅಗ್ನಿಶಾಮಕ ದಳದ ನೇತೃತ್ವದಲ್ಲಿ ಸಂಗೀತಾ ಹಾಗೂ ಮಗುವಿನ ಮೃತದೇಹಗಳನ್ನು ಮೇಲೆತ್ತಲಾಗಿದ್ದು ಸ್ಥಳಕ್ಕೆ ಸುಳ್ಯ ತಹಶಿಲ್ದಾರ್ ಅನಿತಾಲಕ್ಷ್ಮಿ ಹಾಗೂ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.