ಸುಳ್ಯ/ಕಡಬ: ಸುಳ್ಯ ಹಾಗೂ ಕಡಬ ತಾಲೂಕುಗಳ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಹುತೇಕ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.
ಸುಳ್ಯದ 25 ಗ್ರಾ.ಪಂ.ಗಳ ಪೈಕಿ 18 ಗ್ರಾಮ ಪಂಚಾಯತ್ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ 5 ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.
ಕಡಬ ತಾಲೂಕಿನ 21 ಗ್ರಾ.ಪಂ.ಗಳ ಪೈಕಿ 18 ಗ್ರಾಮ ಪಂಚಾಯತ್ಗಳಲ್ಲಿ ಬಿಜೆಪಿ ಬೆಂಬಲಿತರು ಹಾಗೂ 3 ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್ ಬೆಂಬಲಿತರು ವಿಜಯ ಸಾಧಿಸಿದ್ದಾರೆ. 2 ಗ್ರಾ.ಪಂ.ಗಳಲ್ಲಿ ಪಕ್ಷೇತರರು ವಿಜಯ ಸಾಧಿಸಿದ್ದಾರೆ.
ಓದಿ: ಖುಲಾಯಿಸಿದ ಅದೃಷ್ಟ... ಬಿಇಡಿ ವಿದ್ಯಾರ್ಥಿನಿ ಈಗ ಗ್ರಾಪಂ ಸದಸ್ಯೆ
ಐವರ್ನಾಡು ಪಂಚಾಯತ್ನಲ್ಲಿ ಬಂಡಾಯ ಅಭ್ಯರ್ಥಿಗಳು ಅಧಿಕಾರ ಹಿಡಿದರೆ, ದೇವಚಳ್ಳದಲ್ಲಿ ಸ್ವಾಭಿಮಾನಿ ಬಳಗ ಗೆಲುವು ಸಾಧಿಸಿ ಅಧಿಕಾರ ಹಿಡಿಯಲಿದೆ.
ಸುಳ್ಯ ತಾಲೂಕು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 168 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು, 78 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಪಕ್ಷೇತರರಾಗಿ ನಿಂತು 34 ಮಂದಿ, ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ಇಬ್ಬರು ಜಯಗಳಿಸಿದ್ದಾರೆ.