ETV Bharat / state

ಮೋರ್ಗನ್ಸ್‌ಗೇಟ್ ಶೂಟೌಟ್ ಪ್ರಕರಣ: ಆರೋಪಿ ರಾಜೇಶ್ ಪ್ರಭುವಿಗೆ ಷರತ್ತು ಬದ್ಧ ಜಾಮೀನು - ರಾಜೇಶ್ ಪ್ರಭುವಿಗೆ ಷರತ್ತು ಬದ್ಧ ಜಾಮೀನು,

ಮಂಗಳೂರು ಜಿಲ್ಲೆಯಲ್ಲಿ ಮೋರ್ಗನ್ಸ್‌ಗೇಟ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿ ರಾಜೇಶ್ ಪ್ರಭುವಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

Morgansgate Shootout Case,  Morgansgate Shootout Case news,  Rajesh Prabhu released,  Rajesh Prabhu released on conditional bail,  ಮೋರ್ಗನ್ಸ್‌ಗೇಟ್ ಶೂಟೌಟ್ ಪ್ರಕರಣ,  ಮೋರ್ಗನ್ಸ್‌ಗೇಟ್ ಶೂಟೌಟ್ ಪ್ರಕರಣ ಸುದ್ದಿ,  ರಾಜೇಶ್ ಪ್ರಭುವಿಗೆ ಜಾಮೀನು,  ರಾಜೇಶ್ ಪ್ರಭುವಿಗೆ ಷರತ್ತು ಬದ್ಧ ಜಾಮೀನು, ರಾಜೇಶ್ ಪ್ರಭುವಿಗೆ ಷರತ್ತು ಬದ್ಧ ಜಾಮೀನು ಸುದ್ದಿ,
ರಾಜೇಶ್ ಪ್ರಭುವಿಗೆ ಷರತ್ತು ಬದ್ಧ ಜಾಮೀನು
author img

By

Published : Nov 3, 2021, 4:56 AM IST

ಮಂಗಳೂರು: ಮೋರ್ಗನ್ಸ್‌ಗೇಟ್ ಶೂಟೌಟ್ ಪ್ರಕರಣದ ಆರೋಪಿ ರಾಜೇಶ್ ಪ್ರಭುಗೆ 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದವನ್ನು ಆಲಿಸಿರುವ ನ್ಯಾಯಾಧೀಶ ಅಭಯ್ ಧನ್ ಪಾಲ್ ಚೌಗಾಲ ಅವರು ರಾಜೇಶ್ ಪ್ರಭುವಿನ ಗನ್​ನಿಂದ ಆಕಸ್ಮಿವಾಗಿ ಗುಂಡು ಹಾರಲ್ಪಟ್ಟಿದೆ.‌ ಅಲ್ಲದೆ ಮೃತಪಟ್ಟಿರೋದು ಅವರ ಸ್ವಂತ ಮಗ ಎನ್ನುವ ಕಾರಣಕ್ಕೆ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿಯಿಂದ ನ್ಯಾಯಾಲಯವು 5 ಲಕ್ಷ ರೂ. ಬಾಂಡ್ ಇರಿಸಿ ಜಾಮೀನು ಮಂಜೂರು ಮಾಡಿದೆ. ರಾಜೇಶ್ ಪ್ರಭು ಪರ ನ್ಯಾಯವಾದಿಗಳಾದ ವೈ ವಿಕ್ರಂ ಹೆಗ್ಡೆ, ನರಸಿಂಹ ಹೆಗ್ಡೆ ವಾದಿಸಿದ್ದರು.

ಮೋರ್ಗನ್ಸ್‌ಗೇಟ್‌ನ ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೊ ಸರಕು ಸಾಗಾಟ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಸಂಬಳದ ವಿಚಾರದಲ್ಲಿ ಇಬ್ಬರು ಕಾರ್ಮಿಕರನ್ನು ಸತಾಯಿಸಿದ್ದರು‌. ಅ. 5ರಂದು ಸಂಜೆ 3:30ಕ್ಕೆ ಕಚೇರಿಗೆ ಬಂದ ಅವರಿಬ್ಬರು ರಾಜೇಶ್ ಪ್ರಭು ಪತ್ನಿ ಶಾಂತಲಾ ಪ್ರಭು ಅವರಲ್ಲಿ ಉಳಿದ ಹಣ ಕೊಸುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಆಕೆ ಪತಿಯನ್ನು ಕರೆಸಿಕೊಂಡಿದ್ದರು. ಈ ವೇಳೆ ಇಬ್ಬರು ಕಾರ್ಮಿಕರು ಮತ್ತು ರಾಜೇಶ್ ಪ್ರಭು ಹಾಗೂ ಆತನ ಪುತ್ರ ಸುಧೀಂದ್ರ ಪ್ರಭು ನಡುವೆ ಮಾತಿನ ಚಕಮಕಿ ನಡೆದು ವಾಗ್ವಾದಕ್ಕೆ ಕಾರಣವಾಗಿದೆ. ಈ ಸಂದರ್ಭ ರಾಜೇಶ್ ಪ್ರಭು ಪುತ್ರ ಸುಧೀಂದ್ರ ಪ್ರಭು ಓರ್ವ ಕಾರ್ಮಿಕನಿಗೆ ಹಲ್ಲೆಗೈದಿದ್ದಾನೆ.

ಈ ಸಂದರ್ಭದಲ್ಲಿ ನಡೆದ ತಳ್ಳಾಟದ ವೇಳೆ ರಾಜೇಶ್ ಎರಡು ಸುತ್ತಿನ ಗುಂಡು ಹಾರಿಸಿದ್ದಾನೆ‌. ಆದರೆ ಆ ಗುಂಡು ಆತನ ಪುತ್ರ ಸುಧೀಂದ್ರನ ಎಡಗಣ್ಣಿನ ಪಕ್ಕ ಹಾದು, ತಲೆಯ ಒಳಭಾಗದಲ್ಲಿ 7-8 ಇಂಚು ಆಳದಲ್ಲಿ ಗಾಯ ಮಾಡಿತ್ತು. ಗಂಭೀರವಾಗಿ ಗಾಯಗೊಂಡ ಪುತ್ರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅ.6ರಂದು ಮೃತಪಟ್ಟಿದ್ದನು. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಆರೋಪಿ ರಾಜೇಶ್ ಪ್ರಭುವನ್ನು ಪೊಲೀಸರು ಬಂಧಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.