ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸುಮಾರು 1,256 ವ್ಯಕ್ತಿಗಳನ್ನು ರೌಡಿ ಶೀಟರ್ ಪಟ್ಟಿಯಿಂದ ಮುಕ್ತಗೊಳಿಸಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಇಂದು ನಗರದ ರಮಣ ಪೈ ಸಭಾಂಗಣದಲ್ಲಿ ರೌಡಿ ಶೀಟರ್ಗಳಿಗೆ ಪರಿವರ್ತನಾ ಸಭೆ ಆಯೋಜನೆ ಮಾಡಿತ್ತು.
ರೌಡಿಶೀಟರ್ ಪಟ್ಟಿಯಲ್ಲಿ ಹೆಸರು ಕೇಳಿ ಬಂದ ಬಳಿಕ ಐದು ವರ್ಷಗಳ ಕಾಲ ಯಾವುದೇ ಪ್ರಕರಣದಲ್ಲಿ ಕೇಸ್ ದಾಖಲಾಗದವರು, ಗಂಭೀರ ಅಪರಾಧಗಳಲ್ಲಿ ಪ್ರಕರಣ ದಾಖಲಾಗದವರು, ವಯಸ್ಸಾದವರು, ಅತ್ಯಂತ ಜವಾಬ್ದಾರಿಯುತವಾಗಿ ಕುಟುಂಬ, ಸಮಾಜದಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಗುರುತಿಸಿ ಅವರ ಹೆಸರನ್ನು ಅಳಿಸಿ ಹಾಕಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸುಮಾರು 3,263 ಮಂದಿ ರೌಡಿ ಶೀಟರ್ಗಳಿದ್ದಾರೆ. ಇವರಲ್ಲಿ ಇಂದು 1,256 ಮಂದಿಯನ್ನು ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ರದ್ದುಗೊಳಿಸಲಾಗಿದೆ. ಸುಮಾರು 3 ತಿಂಗಳಿನಿಂದ ಪೊಲೀಸ್ ಅಧಿಕಾರಿಗಳು ದಿನದ ಕೆಲ ಸಮಯವನ್ನು ಇದಕ್ಕಾಗಿ ವ್ಯಯ ಮಾಡಿ ರೌಡಿಶೀಟರ್ಗಳ ಈಗಿನ ಚಲನವಲನಗಳನ್ನು ಗಮನಿಸಿ ಈ ಕಾರ್ಯ ಮಾಡಿದ್ದಾರೆ.
ವೈಯಕ್ತಿಕವಾಗಿ ಸಂತಷವಾಗ್ತಿದೆ ಎಂದ ಕಮಿಷನರ್
ಈ ವೇಳೆ, ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಓರ್ವ ಪೊಲೀಸ್ ಕಮಿಷನರ್ ಆಗಿ 1,256 ಮೇಲಿದ್ದ ರೌಡಿ ಶೀಟರ್ ಹಣೆಪಟ್ಟಿಯನ್ನು ತೆಗೆದುಹಾಕಲು ವೈಯಕ್ತಿಕವಾಗಿ ಬಹಳ ಸಂತೋಷವಾಗುತ್ತಿದೆ. ಕೃತ್ಯಗಳಲ್ಲಿ ತೊಡಗಿರುವವರ ಮೇಲೆ ರೌಡಿ ಶೀಟರ್ ತೆರೆಯುವ ಪೊಲೀಸ್ ಅಧಿಕಾರಿಗಳು ಆತನ ಮನ ಪರಿವರ್ತನೆಯಾಗಿ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವದಿಂದ ಸಾಮಾನ್ಯ ಜನರಂತೆ ಬದುಕುತ್ತಿದ್ದಾನೆ ಎಂದಾಗ ಆ ರೌಡಿಶೀಟರ್ ಅನ್ನು ಮುಕ್ತಾಯಗೊಳಿಸುವುದು ನಮ್ಮ ಜವಾಬ್ದಾರಿ ಆಗಿರುತ್ತದೆ ಎಂದರು.
ಈಗ ತಲೆ ಎತ್ತಿ ತಿರುಗಾಡಬಹುದು
ನಂತರ ರೌಡಿಶೀಟರ್ ಮುಕ್ತ ಕಲೀಲ್ ರಹಮಾನ್ ಮಾತನಾಡಿ, ಸಿಎಎ, ಎನ್ಆರ್ಸಿ ಗಲಭೆ ವೇಳೆ ನನ್ನ ಕೈಯಲ್ಲಿದ್ದ ಸಂಘಿ ಪೊಲೀಸರಿಗೆ ಧಿಕ್ಕಾರ ಎಂಬ ಫ್ಲಕ್ ಕಾರ್ಡ್ನಿಂದಾಗಿ ನಾನು ಬಂಧನಕ್ಕೊಳಗಾಗಿದ್ದೇ, ಅದೇ ವಿಚಾರವಾಗಿ ರೌಡಿ ಶೀಟರ್ ಪಟ್ಟ ಸಹ ದೊರಕಿತ್ತು.
ಆ ಬಳಿಕ ಮನೆಯಲ್ಲಿ, ಗೆಳೆಯರ ಬಳಗದಲ್ಲಿ ಮುಖಭಂಗವಾಯಿತು. ತಲೆಯೆತ್ತಿ ತಿರುಗಾಡದಂತೆ ಆಗಿತ್ತು. ಇದೀಗ ನಮ್ಮ ಮೇಲಿನ ರೌಡಿಶೀಟರ್ ಅನ್ನು ರದ್ದುಗೊಳಿಸಿದ್ದು ಕೇಳಿ ಸಂತೋಷವಾಯಿತು. ಈ ಕಾರ್ಯ ಮಾಡಿದ ಪೊಲೀಸ್ ಕಮಿಷನರ್ ಅವರಿಗೆ ಧನ್ಯವಾದ. ಮುಂದೆ ಯಾವುದೇ ಅಹಿತಕರ ಘಟನೆಗಳಲ್ಲಿ ನನ್ನನ್ನು ಗುರುತಿಸಿಕೊಳ್ಳದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಉಪ್ಪಿನಂಗಡಿ ಗಲಭೆ, ಲಾಠಿಚಾರ್ಜ್ ಪ್ರಕರಣ: 10 ಮಂದಿ ಪಿಎಫ್ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು