ETV Bharat / state

ಬೀದಿ ಬದಿಯಲ್ಲಿ ಸಿಕ್ಕಿತು ಲಕ್ಷ ಗಟ್ಟಲೆ ಹಣ : ಅರ್ಧ ಗಂಟೆಯಲ್ಲಿ ಕೈತಪ್ಪಿದು ಹೀಗೆ... - ಈಟಿವಿ ಭಾರತ ಕನ್ನಡ

ಬಾರ್​ನ ಮುಂದೆ ಲಕ್ಷಗಟ್ಟಲೆ ಹಣ ಬಿದ್ದು ಸಿಕ್ಕಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಮೂರು ದಿನ ಜೈಲಿನಲ್ಲಿರಿಸಿ ಬಳಿಕ ಬಿಡುಗಡೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

money-found-on-the-street-side-in-mangaluru
ಬೀದಿ ಬದಿಯಲ್ಲಿ ಸಿಕ್ಕಿತು ಲಕ್ಷ ಗಟ್ಟಲೆ ಹಣ : ಅರ್ಧ ಗಂಟೆಯಲ್ಲಿ ಕೈತಪ್ಪಿದು ಹೀಗೆ...
author img

By

Published : Dec 6, 2022, 7:55 PM IST

ಮಂಗಳೂರು : ವಾರಸುದಾರರಿಲ್ಲದ ಲಕ್ಷಗಟ್ಟಲೆ ಹಣ ವ್ಯಕ್ತಿಯೊಬ್ಬರಿಗೆ ದೊರಕಿದೆ. ಆದರೆ ಅರ್ಧ ಗಂಟೆಯಲ್ಲಿ ಆ ಹಣ ಆತನ ಕೈತಪ್ಪಿದೆ. ಮಂಗಳೂರಿನ ಪಂಪ್ ವೆಲ್ ನಲ್ಲಿರುವ ಬಾರ್ ಹೊರಗಡೆ ಶಿವರಾಜ್ ಎಂಬವರಿಗೆ ಹಣದ ಕಟ್ಟೊಂದು ಸಿಕ್ಕಿತ್ತು. ಇದರಲ್ಲಿ ಲಕ್ಷಗಟ್ಟಲೆ ಹಣ ಇತ್ತು ಎಂದು ಹಣ ದೊರೆತ ಶಿವರಾಜ್ ಎಂಬಾತ​ ಹೇಳಿಕೊಂಡಿದ್ದಾನೆ.

ಈ ಹಣ ಸಿಕ್ಕ‌ ಸಂದರ್ಭದಲ್ಲಿ ಇದನ್ನು ಮತ್ತೊಬ್ಬ ವ್ಯಕ್ತಿ ನೋಡಿದ್ದರಿಂದ ಶಿವರಾಜ್​ ಆತನಿಗೂ ಒಂದು ಕಟ್ಟನ್ನು ನೀಡಿದ್ದನಂತೆ. ಇದಾದ ಬಳಿಕ ಆತ ಬಾರ್ ನಲ್ಲಿ ಕುಡಿದಿದ್ದಾನೆ. ಅಲ್ಲಿಂದ ಹಣದೊಂದಿಗೆ ರಸ್ತೆ ಬದಿಯಲ್ಲಿ ಕುಳಿತುಕೊಂಡಿದ್ದಾಗ ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆದು ಕಂಕನಾಡಿ ನಗರ ಠಾಣೆಯಲ್ಲಿ ಮೂರು ದಿನ ಇರಿಸಿದ್ದರು ಎನ್ನಲಾಗಿದ್ದು, ಆ ಬಳಿಕ ಶಿವರಾಜನನ್ನು ಬಿಟ್ಟು ಕಳುಹಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು ಶಿವರಾಜ್​​ ಬಳಿ ಇದ್ದ ಕಟ್ಟಿನಲ್ಲಿ 49 ಸಾವಿರ ರೂ. ಇತ್ತು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಬೆಳ್ತಂಗಡಿಯಲ್ಲಿ ಅಪರೂಪದ ಸಾರಿಬಾಳ ಹಾವು ಪತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.