ETV Bharat / state

ಮಂಗಳೂರು ಪಾಲಿಕೆ ಚುನಾವಣೆಗೆ ಪಾರದರ್ಶಕವಾಗಿ ಟಿಕೆಟ್​ ನೀಡಲಾಗಿದೆ: ಮೊಯ್ದಿನ್ ಬಾವ

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಡೆದ ಸಂದರ್ಭ, ಮಾಜಿ ಮೇಯರ್ ಗುಲ್ಜಾರ್ ಬಾನು ಪುತ್ರ ತನ್ನ ಮೇಲೆ ನಡೆಸಿದ ಹಲ್ಲೆ ಪ್ರಕರಣದ ಬಗ್ಗೆ ವಿಷಾದವಿದೆ ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಹೇಳಿದರು.

ಮೊಯ್ದಿನ್ ಬಾವ, ಮಾಜಿ ಶಾಸಕ
author img

By

Published : Nov 1, 2019, 11:01 PM IST

ಮಂಗಳೂರು: ಮ.ನ.ಪಾ ಚುನಾವಣೆಗೆ ಪಾರದರ್ಶಕವಾಗಿ ಟಿಕೆಟ್​ ನೀಡಲಾಗಿದೆ. ಗುಲ್ಜಾರ್​ ಬಾನು ಮಗ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆಯೇ ಹೊರತು ಬೆಂಬಲಿಗರು ಈ ಕೃತ್ಯ ನಡೆಸಿಲ್ಲ. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಹೇಳಿದರು.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಪಟ್ಟಿ ಬಿಡುಗಡೆ ನಡೆದ ಸಂದರ್ಭ, ಮಾಜಿ ಮೇಯರ್ ಗುಲ್ಜಾರ್ ಬಾನು ಪುತ್ರ ತನ್ನ ಮೇಲೆ ನಡೆಸಿದ ಹಲ್ಲೆ ಪ್ರಕರಣದ ಬಗ್ಗೆ ನನಗೆ ಬಹಳ ವಿಷಾದವಿದೆ ಎಂದರು.

ಮೊಯ್ದಿನ್ ಬಾವ, ಮಾಜಿ ಶಾಸಕ

ಈ ಗಲಭೆ ನಡೆದ ಸಂದರ್ಭದಲ್ಲಿ ಮಾಜಿ ಮೇಯರ್ ಗುಲ್ಜಾರ್ ಬಾನು, ಅವರ ಪುತ್ರ ಹಾಗೂ ಡ್ರೈವರ್ ಮೂರೇ ಮಂದಿ ಇದ್ದರು. ಆದರೆ ಕೆಲವು ಮಾಧ್ಯಮಗಳಲ್ಲಿ ಗುಲ್ಜಾರ್ ಬಾನು ಬೆಂಬಲಿಗರಿಂದ ಹಲ್ಲೆ ಎಂದು ಹೇಳಲಾಗಿದೆ. ಆದರೆ ಅಲ್ಲಿ ನಮ್ಮ ನಡುವೆ ಕೆಲವೇ ಹೊತ್ತು ಮಾತುಕತೆಯಾಗಿದ್ದು, ಏಕಾಏಕಿ ಗುಲ್ಜಾರ್ ಪುತ್ರ ನನ್ನ ಕೆನ್ನೆಗೆ ಬಾರಿಸಿದ್ದಾನೆ. ಆದರೆ ನಾನು ಆ ಸಂದರ್ಭ ಆತನ ವಿರುದ್ದ ಪೊಲೀಸ್ ದೂರು ನೀಡಿಲ್ಲ. ರಾತ್ರಿ ಕಿವಿಯೊಳಗೆ ಬಹಳಷ್ಟು ನೋವು ಕಾಣಿಸಿದ್ದು, ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ಪೊಲೀಸರು ಮಾಧ್ಯಮದಲ್ಲಿ ಬಂದ ವರದಿಯನ್ನು ನೋಡಿ, ಆಸ್ಪತ್ರೆಗೆ ಬಂದು ನನ್ನಲ್ಲಿ‌ ವಿವರ ಪಡೆದು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹೇಳಿದರು.

Intro:ಮಂಗಳೂರು: ಮನಪಾ ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲಾ ಅಭ್ಯರ್ಥಿಗಳಿಗೆ ನಾವು ಪಾರದರ್ಶಕವಾದ ಕೆಲಸ ಮಾಡಿದ್ದೇವೆ. ಆದರೆ ತಾನು ಅಭ್ಯರ್ಥಿಯಲ್ಲಿ 10 ಲಕ್ಷ ರೂ. ಪಡೆದು ಟಿಕೇಟ್ ನೀಡಿಲ್ಲ ಎಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ. ಇದು ಸತ್ಯಕ್ಕೆ ದೂರವಾದ ಮಾತು. 10 ಲಕ್ಷ ಅಲ್ಲ 10 ರೂ.ವನ್ನು ಪಡೆದಿಲ್ಲ.‌ ಒಂದು ವೇಳೆ ತೆಗೆದುಕೊಂಡಿದ್ದರೆ ದೇವರು ನನ್ನನ್ನು ಮನೆ ಮುಟ್ಟಿಸಲಿಕ್ಕಿಲ್ಲ ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಹೇಳಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

Body:ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಪಟ್ಟಿ ಬಿಡುಗಡೆ ನಡೆದ ಸಂದರ್ಭ ಮಾಜಿ ಮೇಯರ್ ಗುಲ್ಜಾರ್ ಬಾನು ಪುತ್ರ ತನ್ನ ಮೇಲೆ ನಡೆಸಿದ ಹಲ್ಲೆ ಪ್ರಕರಣದ ಬಗ್ಗೆ ತನಗೆ ಬಹಳ ವಿಷಾದವಿದೆ. ಈ ಗಲಭೆ ನಡೆದ ಸಂದರ್ಭದಲ್ಲಿ ಮಾಜಿ ಮೇಯರ್ ಗುಲ್ಜಾರ್ ಬಾನು, ಅವರ ಪುತ್ರ ಹಾಗೂ ಡ್ರೈವರ್ ಮೂರೇ ಮಂದಿ ಇದ್ದಿದ್ದು. ಆದರೆ ಕೆಲವು ಮಾಧ್ಯಮಗಳಲ್ಲಿ ಗುಲ್ಜಾರ್ ಬಾನು ಬೆಂಬಲಿಗರಿಂದ ಹಲ್ಲೆ ಎಂದು ಹೇಳಲಾಗಿದೆ. ಆದರೆ ಅಲ್ಲಿ ನಮ್ಮ ನಡುವೆ ಕೆಲವೇ ಕ್ಷಣದ ಮಾತುಕತೆಯಾಗಿದ್ದು, ಏಕಾಏಕಿ ಗುಲ್ಜಾರ್ ಪುತ್ರ ನನ್ನ ಕೆನ್ನೆಗೆ ಬಾರಿಸಿದ್ದಾನೆ. ಆದರೆ ನಾನು ಆ ಸಂದರ್ಭ ಆತನ ಮೇಲೆ ಪೊಲೀಸ್ ದೂರು ನೀಡಿಲ್ಲ. ರಾತ್ರಿ ನನಗೆ ಕಿವಿಯೊಳಗೆ ಬಹಳಷ್ಟು ನೋವು ಕಾಣಿಸಿದ್ದು, ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ಪೊಲೀಸರು ಮಾಧ್ಯಮ ದಲ್ಲಿ ಬಂದ ವರದಿಯನ್ನು ನೋಡಿ, ಆಸ್ಪತ್ರೆಗೆ ಬಂದು ನನ್ನಲ್ಲಿ‌ ವಿವರ ಪಡೆದು ಸ್ವಯಂ ಆಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಶಾಸಕ ಮೊಯ್ದೀನ್ ಬಾವಾ ಹೇಳಿದರು.

Reporter_Vishwanath Panjimogaru

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.