ಪುತ್ತೂರು (ದಕ್ಷಿಣ ಕನ್ನಡ): ಅಕ್ಟೋಬರ್ 15ರಂದು ತಾಲೂಕಿನ ಬೊಳುವಾರಿನಲ್ಲಿ ಉಂಟಾದ ಅಗ್ನಿ ಅವಘಡ ಸ್ಥಳಗಳಿಗೆ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಪರಿಶೀಲಿಸಿದರು.
ಅಕ್ಟೋಬರ್ 15ರಂದು ಪುತ್ತೂರು ತಾಲೂಕಿನ ಬೊಳುವಾರಿನಲ್ಲಿನ ಮೆನ್ಸ್ ಪಾರ್ಲರ್, ಡಿ.ಕೆ.ಮೊಬೈಲ್ ಮತ್ತು ತರಕಾರಿ ಅಂಗಡಿ ಹಾಗೂ ಎರಡು ಹೊಟೇಲ್‌ಗಳಿಗೆ ಆಕಸ್ಮಿಕ ಬೆಂಕಿ ತಗುಲಿ ನಷ್ಟ ಉಂಟಾಗಿತ್ತು.
ನಷ್ಟ ಉಂಟಾದ ಸ್ಥಳಕ್ಕೆ ಭೇಡಿ ನೀಡಿ ಅಂಗಡಿ ಮಾಲೀಕರೊಂದಿಗೆ ಮಾತನಾಡಿದ ಶಾಸಕ, ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಭರವಸೆ ನೀಡಿದರು.