ಮಂಗಳೂರು: ಬೇಸಿಗೆ ಆರಂಭಕ್ಕೂ ಮುನ್ನವೆ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೊ ಕೂಡಲೇ ಅದರ ಪಟ್ಟಿ ಸಿದ್ದಮಾಡಿ ಕೊಡಬೇಕು. ಅನುದಾನ ಇಲ್ಲವೆಂದು ಸುಮ್ಮನೆ ಕೂರಬಾರದು ಎಂದು ಸುಳ್ಯ ಶಾಸಕ ಎಸ್. ಅಂಗಾರ ಅವರು ಸೂಚನೆ ನೀಡಿದ್ದಾರೆ.
ಶುಕ್ರವಾರ ಶಾಸಕ ಅಂಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಯಾರಿಗೂ ನೀರಿನ ಸಮಸ್ಯೆ ಆಗಬಾರದು. ಈ ಕುರಿತು ಅಧಿಕಾರಿಗಳು ಕೂಡಲೆ ಜಾಗೃತರಾಗಬೇಕು. ಎಲ್ಲೆಲ್ಲಿ ಸಮಸ್ಯೆಗಳಿದೆಯೋ ಅವುಗಳ ಪಟ್ಟಿ ತಯಾರಿಸಿ ಕೊಡಿ ಎಂದು ಸೂಚನೆ ನೀಡಿದ್ದಾರೆ.