ETV Bharat / state

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗ್ರಾಮ ವಿಕಾಸ ಯಾತ್ರೆ: ಗಮನ ಸೆಳೆಯುತ್ತಿದೆ ಪ್ರಚಾರ ವಾಹನ

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್​ ಚುನಾವಣೆಯಲ್ಲಿ ಬಳಸಿದ್ದ ವಾಹನವನ್ನೇ ಇದೀಗ ಶಾಸಕ ರಾಜೇಶ್‌ ನಾಯ್ಕ್ ತಮ್ಮ ಗ್ರಾಮ ವಿಕಾಸ ಯಾತ್ರೆಗೆ ಬಳಸುತ್ತಿದ್ದಾರೆ.

mla-rajesh-naik-is-a-campaign-vehicle-attracting-attention-in-the-gram-vikas-yatra
ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಗ್ರಾಮವಿಕಾಸ ಯಾತ್ರೆಯಲ್ಲಿ ಗಮನ ಸೆಳೆಯುತ್ತಿರು ಪ್ರಚಾರ ವಾಹನ
author img

By

Published : Jan 16, 2023, 8:36 AM IST

ಬಂಟ್ವಾಳ (ದಕ್ಷಿಣ ಕನ್ನಡ) : ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಕಳೆದ ಶನಿವಾರ ಸಂಜೆ ಗ್ರಾಮವಿಕಾಸ ಯಾತ್ರೆ ಎಂಬ 13 ದಿನಗಳ ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ. ರೋಡ್ ಶೋ ಹಾಗೂ ಭಾಷಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಚುನಾವಣಾ ಪ್ರಚಾರಕ್ಕೆ ಬಳಸಿದ್ದ ವಾಹನವನ್ನೇ ಶಾಸಕ​ ನಾಯ್ಕ್​ ಉಪಯೋಗಿಸುತ್ತಿದ್ದು, ಗಮನ ಸೆಳೆದಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪೊಳಲಿಯಲ್ಲಿ ಯಾತ್ರೆಗೆ ಚಾಲನೆ ನೀಡಿ, ಈ ಕಾರ್‌ನಲ್ಲಿ ರೋಡ್ ಶೋ ನಡೆಸಿದರು.

ಹೇಗಿದೆ ವಾಹನ?: ಆಂಧ್ರಪ್ರದೇಶದಲ್ಲಿ ತಯಾರಾಗಿರುವ ವಿನೂತನ ಮಾದರಿಯ ಪ್ರಚಾರದ ಎಸ್ ಕ್ಯಾಬ್ ವಾಹನವಿದು. ರಾತ್ರಿ ವೇಳೆ ನಡೆಯುವ ಬಹಿರಂಗಸಭೆಗೆ ಬೇಕಾದ ಫೋಕಸ್ ಲೈಟ್​, ವಿದ್ಯುತ್, ಮೈಕ್ ಮತ್ತು ವಾಹನದ ಒಳಭಾಗದಲ್ಲಿ ಇಬ್ಬರಿಗೆ ಕುಳಿತುಕೊಳ್ಳಲು ಮತ್ತು ಹಿಂಬದಿಯಲ್ಲಿ ವೇದಿಕೆ ಮಾದರಿಯಲ್ಲಿದ್ದು ನಿಂತು ಭಾಷಣ ಮಾಡುವ ವ್ಯವಸ್ಥೆ ಹೊಂದಿದೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ ಸೇರಿ ರಾಜ್ಯ ಬಿಜೆಪಿಯ ಹಲವು ನಾಯಕರ ಭಾವಚಿತ್ರವನ್ನು ಪ್ರಚಾರದ ವಾಹನದಲ್ಲಿ ಅಂಟಿಸಲಾಗಿದೆ. ಜನವರಿ 14ರಿಂದ ಪೊಳಲಿಯಿಂದ ಆರಂಭಗೊಂಡ ರಾಜೇಶ್ ನಾಯ್ಕ್ ಅವರ ಗ್ರಾಮ ವಿಕಾಸ ಯಾತ್ರೆಯಲ್ಲಿ ಈ ವಿನೂತನ ವಾಹನವನ್ನು ಬಳಸಲಾಗುತ್ತಿದೆ. ಜನವರಿ 21ರ ಬಳಿಕ ಮುಂಬರುವ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಇದೇ ಮಾದರಿಯಲ್ಲಿ ಮತ್ತೊಂದು ವಾಹನ ಬರಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ನಳಿನ್ ಕುಮಾರ್​ ಕಟೀಲ್​ ವಾಗ್ದಾಳಿ: ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಧ್ಯುಕ್ತವಾಗಿ ಈ ವಾಹನವನ್ನೇರಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ಧ ಮಾತಿನ ಚಾಟಿ ಬೀಸಿದ ನಳಿನ್ ಕುಮಾರ್ ಕಟೀಲ್​, ಮುಂಬರುವ ವಿಧಾನಸಭೆ ಚುನಾವಣೆಯ ಬಳಿಕ ಕಾಂಗ್ರೆಸ್ ನೆಲಕಚ್ಚುವುದು ಖಚಿತ ಎಂದು ಭವಿಷ್ಯ ನುಡಿದರು.

'ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್': ಜವಾಹರ್ ಲಾಲ್ನೆಹರು ಪ್ರಧಾನಮಂತ್ರಿ ಆಗಿದ್ದಾಗ ಜೀಪ್​ ಹಗರಣ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಮಾರುತಿ ಹಗರಣ, ರಾಜೀವ್​ ಗಾಂಧಿ ಪ್ರಧಾನಿಯಾಗಿದ್ದಾಗ ಬೋಫೋರ್ಸ್ ಹಗರಣ, ಮನಮೋಹನ್​ ಸಿಂಗ್​ ಪ್ರಧಾನಿಯಾಗಿದ್ದಾಗ ನೀರಲ್ಲಿ, ಗಾಳಿಯಲ್ಲಿ ಪಂಚಭೂತಗಳಲ್ಲಿ ಹಗರಣ ನಡೆದಿದ್ದವು ಎಂದು ಕಟೀಲ್​ ಟೀಕಿಸಿದರು.

ಹಳೆ ಕಾಂಗ್ರೆಸ್​ ಶಾಸಕರು ಕೇವಲ ಹೆಸರಿಗಷ್ಟೇ ಶಾಸಕರು ಸಚಿವರಾಗಿದ್ದರು. ಆದರೆ, ರಾಜೇಶ್​ ನಾಯ್ಕ್​ ಅವರ ಕಾಲದಲ್ಲಿ ಬಂಟ್ವಾಳಕ್ಕೆ ಸರ್ಕಾರಿ ಆಸ್ಪತ್ರೆ, ಪಾಲಿಟೆಕ್ನಿಕ್​ ಕಾಲೇಜು, ಹಳ್ಳಿಗಳಲ್ಲಿ ಕಾಂಕ್ರಿಟ್​ ರಸ್ತೆ ಮತ್ತು ಇನ್ನಿತರೆ ಮೂಲಭೂತ ಸೌಕರ್ಯಗಳಾಗಿದ್ದು ಬಂಟ್ವಾಳ ಅಭಿವೃದ್ಧಿ ಹೊಂದಿದೆ ಎಂದು ಹೇಳಿದರು.

ಇದನ್ನೂ ಓದಿ: ನಾಳೆ ಬೊಮ್ಮಾಯಿ‌, ಬಿಎಸ್​ವೈ ದೆಹಲಿ ಪ್ರವಾಸ: ಸಚಿವಾಕಾಂಕ್ಷಿಗಳಲ್ಲಿ ಮತ್ತೆ ಗರಿಗೆದರಿದ ಕನಸು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.