ETV Bharat / state

ಕ್ಷೇತ್ರದ ಎಲ್ಲ ರಿಕ್ಷಾ ನಿಲ್ದಾಣ ಶೀಘ್ರದಲ್ಲೇ ಅಭಿವೃದ್ಧಿ: ಶಾಸಕ ರಾಜೇಶ್ ನಾಯ್ಕ್

ಮುಂದಿನ ದಿನಗಳಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಲ್ಲ ರಿಕ್ಷಾ ನಿಲ್ದಾಣಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ.

author img

By

Published : Sep 28, 2020, 7:58 PM IST

rajesh naik
rajesh naik

ಬಂಟ್ವಾಳ (ದಕ್ಷಿಣ ಕನ್ನಡ): ಬಿ.ಸಿ.ರೋಡ್ ಕೈಕಂಬದ ಪೊಳಲಿ ದ್ವಾರದ ಬಳಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನೂತನವಾಗಿ ನಿರ್ಮಾಣಗೊಂಡ ರಿಕ್ಷಾ ನಿಲ್ದಾಣವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇಂದು ಲೋಕರ್ಪಣೆಗೊಳಿಸಿದರು.

ರಿಕ್ಷಾ ಚಾಲಕರು ಸೇವಾ ಮನೋಭಾವದಿಂದ ದುಡಿಯುತ್ತಿದ್ದು, ತಮ್ಮ ನಿತ್ಯ ದುಡಿಮೆಯ ಜೊತೆ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಯಾವುದೇ ಸಮಯದಲ್ಲಿ ಜನಸಾಮಾನ್ಯರಿಗೆ ಸ್ಪಂದಿಸುವ ಮೂಲಕ ವಿಶ್ವಾಸ ಅರ್ಹರಾಗಿರುತ್ತಾರೆ ಎಂದರು.

ರಿಕ್ಷಾ ನಿಲ್ದಾಣ ಲೋಕಾರ್ಪಣೆ

ಈ ಭಾಗದ ರಿಕ್ಷಾ ಚಾಲಕರ ಬಹು ದಿನಗಳ ಬೇಡಿಕೆಯನ್ನು ಇಂದು ಈಡೇರಿಸಿದ್ದು, ಮುಂದಿನ ದಿನಗಳಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಲ್ಲ ರಿಕ್ಷಾ ನಿಲ್ದಾಣಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು.

ಬೂಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಪ್ರಮುಖರಾದ ರಮನಾಥ ರಾಯಿ, ಪ್ರಕಾಶ್ ಅಂಚನ್, ಗಣೇಶ್ ದಾಸ್,ಮಹಾಬಲ ಶೆಟ್ಟಿ, ಸಂಜೀವ ಪೂಜಾರಿ ಪಿಲಿಂಗಾಲು, ಸೀತಾರಾಮ ಪೂಜಾರಿ, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ಸುದರ್ಶನ್ ಬಜ, ಅಭಿಯಂತರರಾದ ಡೊಮಿನಿಕ್ ಡಿಮೇಲ್ಲೋ, ಅಶ್ವತ್ಥ ರಾವ್ ಬಾಳಿಕೆ, ಪ್ರಮೋದ್ ನೂಜಿಪ್ಪಾಡಿ, ರಿಕ್ಷಾ ಚಾಲಕರ ಅಧ್ಯಕ್ಷರಾದ ಚಿತ್ತರಂಜನ್ ಪೂಜಾರಿ, ಕಾರ್ಯದರ್ಶಿ ಇಸ್ಮಾಯಿಲ್, ಗುತ್ತಿಗೆದಾರರದ ಕಾರ್ತಿಕ್ ಬಲ್ಲಾಳ್, ಪ್ರಕಾಶ್ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.