ಬೆಳ್ತಂಗಡಿ: ತಾಲೂಕಿನ ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1.55 ಕೋಟಿ ರೂ. ಅನುದಾನದಲ್ಲಿ ವಿವಿಧ ರಸ್ತೆ ಕಾಂಕ್ರೀಟಿಕರಣ ಮತ್ತು ಮರು ಡಾಂಬರೀಕರಣಕ್ಕೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿದರು.
ಮಾವಿನ ಕಟ್ಟೆ ಮುಖ್ಯರಸ್ತೆಯಿಂದ ಹಣ್ಮಜೆ ರಸ್ತೆ ಕಾಂಕ್ರೀಟಿಕರಣ 10 ಲಕ್ಷ, ಬನತ್ತಿಪಲ್ಕೆ ರಸ್ತೆ ಅಭಿವೃದ್ಧಿ 10 ಲಕ್ಷ, ಹಾಲಿನ ಸೊಸೈಟಿಯಿಂದ ಮಾಣಿಲು ಮುಖ್ಯರಸ್ತೆ ಅಭಿವೃದ್ಧಿ 10 ಲಕ್ಷ, ಅರಸಿನಕಟ್ಟೆಯಿಂದ ಜಾರೋಡಿ ರಸ್ತೆ ಕಾಂಕ್ರೀಟಿಕರಣ 10 ಲಕ್ಷ, ನಾರಾವಿ ಸೂರ್ಯ ನಾರಾಯಣ ದೇವಸ್ಥಾನ ರಸ್ತೆ ಕಾಂಕ್ರೀಟಿಕರಣ 25 ಲಕ್ಷ, ಪಾಣಾಲುವಿನಿಂದ ಕಾವಲುಗುಡ್ಡೆ ರಸ್ತೆ ಕಾಂಕ್ರೀಟಿಕರಣ 35 ಲಕ್ಷ, ನಾರಾವಿ ಹೊಳೆಹೊದ್ದು ರಸ್ತೆ ಕಾಂಕ್ರೀಟಿಕರಣ 10 ಲಕ್ಷ, ಹೊಳೆಹೊದ್ದು ನೂಜೋಡಿ ರಸ್ತೆ ಕಾಂಕ್ರೀಟಿಕರಣ 25 ಲಕ್ಷ, ವೈಶಾಲಿಯಿಂದ ದೊಂಕಬೆಟ್ಟು ರಸ್ತೆ ಮರು ಡಾಂಬರೀಕರಣ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕರು, ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಗಳನ್ನು ಈಡೇರಿಸುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ತಿಳಿಸಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ತಾ ಪಂ ಸದಸ್ಯ ಸುಧೀರ್ ಸುವರ್ಣ, ಮೋಹನ್ ಅಂಡಿಂಜೆ, ಉದಯ ಹೆಗ್ಡೆ, ನಾರಾವಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.