ಬೆಳ್ತಂಗಡಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯನ್ನು ಶಾಸಕ ಹರೀಶ್ ಪೂಂಜ ಸನ್ಮಾನಿಸಿದರು.
ಲಾಯಿಲ ಸೈಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಡೋಂಗ್ರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 622 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಳು. ಬಳಿಕ ವಿದ್ಯಾರ್ಥಿನಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು. ಅದರಲ್ಲಿ 3 ಹೆಚ್ಚುವರಿ ಅಂಕ ಪಡೆದು 625 ಅಂಕ ಗಳಿಸಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಶ್ರೇಯಾ ಡೋಂಗ್ರೆ ಅವರನ್ನು ಶಾಸಕ ಹರೀಶ್ ಪೂಂಜ ಅವರು ಮನೆಯಲ್ಲಿ ಗೌರವಿಸಿದರು. ಈಕೆ ಬೆಳ್ತಂಗಡಿಯ ವೈದ್ಯರಾದ ಡಾ. ಶಶಿಕಾಂತ್ ಡೋಂಗ್ರೆ ಮತ್ತು ಡಾ. ದೀಪಾಲಿ ಎಸ್. ಡೋಂಗ್ರೆ ಇವರ ಪುತ್ರಿಯಾಗಿದ್ದಾಳೆ.
ಈ ಸಂದರ್ಭದಲ್ಲಿ ಅರವಿಂದ ಲಾಯ್ಲ, ಗಣೇಶ್ ಲಾಯ್ಲ, ಗಿರೀಶ್ ಡೋಂಗ್ರೆ, ಸುಧಾಕರ್ ಬಿಎಲ್, ಸುಪ್ರೀತ್ ಜೈನ್, ಸುರೇಶ್ ಶೆಟ್ಟಿ ಲಾಯ್ಲ ಉಪಸ್ಥಿತರಿದ್ದರು.