ETV Bharat / state

ಬೆಳ್ತಂಗಡಿಯಲ್ಲಿ ರಬ್ಬರ್ ಪಾರ್ಕ್ ನಿರ್ಮಾಣ ಯೋಜನೆ: ಶಾಸಕ ಹರೀಶ್ ಪೂಂಜ

author img

By

Published : Feb 9, 2021, 8:18 PM IST

ಬೆಳ್ತಂಗಡಿ ತಾಲೂಕಿನಲ್ಲಿ ರಬ್ಬರ್ ಪಾರ್ಕ್ ನಿರ್ಮಾಣ ಮಾಡುವ ಯೋಜನೆಯನ್ನು ಇಟ್ಟುಕೊಳ್ಳಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

belthangady
ಬೆಳ್ತಂಗಡಿಯಲ್ಲಿ ರಬ್ಬರ್ ಪಾರ್ಕ್ ನಿರ್ಮಾಣ ಯೋಜನೆ

ಬೆಳ್ತಂಗಡಿ: ತಾಲೂಕನ್ನು ಕೇಂದ್ರವಾಗಿಟ್ಟುಕೊಂಡು ರಬ್ಬರ್ ಪಾರ್ಕ್ ನಿರ್ಮಾಣ ಮಾಡುವ ಯೋಜನೆಯನ್ನು ಇಟ್ಟುಕೊಳ್ಳಲಾಗಿದೆ. ಇದಕ್ಕೆ ರಬ್ಬರ್ ಮಂಡಳಿ ಹಾಗೂ ರಬ್ಬರ್ ಸಹಕಾರಿ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಬೆಳ್ತಂಗಡಿ ತಾಲೂಕು ರಬ್ಬರ್​ ಬೆಳೆಗಾರರ ಮಾರಾಟ ಮತ್ತು ಸಹಕಾರಿ ಸಂಸ್ಥೆ ಮತ್ತು ಅಳದಂಗಡಿ ರಬ್ಬರ್ ಉತ್ಪಾದಕರ ಸಂಘದ ಸಹಯೋಗದಲ್ಲಿ ಸಿದ್ಧವಾಗಿರುವ ರಬ್ಬರ್​ ಖರೀದಿ ಕೇಂದ್ರವನ್ನು ಸೋಮವಾರ ಅವರು ಉದ್ಘಾಟಿಸಿ ಮಾತನಾಡಿದರು.

ದ.ಕ.ದಲ್ಲಿ ಸುಳ್ಯ ಮತ್ತು ಬೆಳ್ತಂಗಡಿಯಲ್ಲಿ ಅತ್ಯಧಿಕ ರಬ್ಬರ್ ಬೆಳೆಯಾಗುತ್ತಿದೆ. ಹೀಗಾಗಿ ರಬ್ಬರ್ ಪಾರ್ಕ್ ಇಲ್ಲಿಯೇ ಸ್ಥಾಪನೆ ಮಾಡುವ ಯೋಜನೆ ಇದೆ. ಅಲ್ಲದೆ ರಬ್ಬರ್​ನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವ ಘಟಕವನ್ನು ನಿರ್ಮಾಣ ಮಾಡಿದರೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಬಹುದಾಗಿದೆ. ಇದಕ್ಕೆ ಸಂಶೋಧನೆಗಳು ನಡೆಯಬೇಕಿದ್ದು, ಅದಕ್ಕೆ ಬೇಕಾದ ಅನುದಾನವನ್ನು‌ ರಬ್ಬರ್ ಸಹಕಾರ ಸಂಘಗಳು ನೀಡಬೇಕು ಎಂದರು.

ಮಾಸ್ ಸಂಸ್ಥೆಯನ್ನು ಉಳಿಸುವ ದಿಕ್ಕಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲು ಸಿದ್ಧ. ನಮ್ಮತನವನ್ನು ಉಳಿಸಿಕೊಳ್ಳುವಲ್ಲಿ ದ.ಕ.ದ ಎಲ್ಲಾ ಸಹಕಾರ ಸಂಸ್ಥೆಗಳು ಸಾಮರ್ಥ್ಯ ಹೊಂದಿರವುದನ್ನು ಶಾಸಕರು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ಧ ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ. ಭಿಡೆ‌, ರಬ್ಬರ್ ಸೊಸೈಟಿಯ 34ನೇ ರಬ್ಬರ್ ಖರೀದಿ ಕೇಂದ್ರ ಇದಾಗಿದ್ದು, ಇಲ್ಲಿ‌ ವ್ಯವಹಾರ ಅಚ್ಚುಕಟ್ಟಾಗಿ ನಡೆದರೆ ಸಂಸ್ಥೆ ಶಕ್ತಿಯುತವಾಗುತ್ತದೆ. ಯಾವ್ಯಾವುದಕ್ಕೋ ಖರ್ಚು ಮಾಡುವ ನಾವು ಐವತ್ತು ಪೈಸೆ ಲಾಭದಾಸೆಗೆ ಖಾಸಗಿ ವ್ಯಕ್ತಿಗಳಿಗೆ ರಬ್ವರ್ ಮಾರಾಟ ಮಾಡುವುದು ಸರಿಯಲ್ಲ. ಎಲ್ಲಾ ಕೃಷಿ ಬೆಳೆಗಳು ಸಹಕಾರಿ ಸಂಸ್ಥೆಗೆ ಬಂದರೆ ಮಾರುಕಟ್ಟೆ ನಿಯಂತ್ರಣಕ್ಕೆ ಬರುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.