ETV Bharat / state

ತುರ್ತು ಸೇವಾ ವಾಹನಗಳಿಗೆ ಟೋಲ್​ ಪಡೆಯದಂತೆ ಶಾಸಕ ಹರೀಶ್ ಪೂಂಜಾ ಮನವಿ - ಶಾಸಕ ಹರೀಶ್ ಪೂಂಜಾ

ತುರ್ತು ಸೇವಾ ವಾಹನಗಳಿಗೆ ಟೋಲ್ ಪಡೆಯದಂತೆ ಶಾಸಕ ಹರೀಶ್ ಪೂಂಜಾ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

MLA Harish Poonja
ಶಾಸಕ ಹರೀಶ್ ಪೂಂಜಾ
author img

By

Published : Apr 21, 2020, 5:25 PM IST

ಬೆಳ್ತಂಗಡಿ: ಟೋಲ್ ಸಂಗ್ರಹ ಪ್ರಾರಂಭವಾದ ಬೆನ್ನಲ್ಲೇ ತುರ್ತು ಸೇವಾ ವಾಹನಗಳಿಗೆ ಟೋಲ್ ಸಂಗ್ರಹ ಮಾಡುವ ಬಗ್ಗೆ ಶಾಸಕ ಹರೀಶ್ ಪೂಂಜಾರಿಗೆ ದೂರು ಬಂದಿದ್ದು, ಇದಕ್ಕೆ ತಕ್ಷಣ ಸ್ಪಂದಿಸಿ ಜಿಲ್ಲಾಧಿಕಾರಿಗಳಿಗೆ ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

ಬ್ರಹ್ಮರಕೂಟ್ಲು ಟೋಲ್​​ನಲ್ಲಿ ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ತುರ್ತು ಸೇವೆಗೆ ಸಿಬ್ಬಂದಿಯನ್ನು ಕರೆದೊಯ್ಯುವ ಆಸ್ಪತ್ರೆಗಳ ವಾಹನಗಳಿಗೆ ಟೋಲ್ ಸಂಗ್ರಹಿಸುತ್ತಿದ್ದುದು ಕಂಡು ಬಂದಿತ್ತು. ಈ ಬಗ್ಗೆ ತುರ್ತು ಸೇವಾ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿ ಶಾಸಕರಿಗೆ ಮನವಿ ಮಾಡಿದ್ದರು. ಶಾಸಕರ ಮನವಿ ಮೇರೆಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.