ETV Bharat / state

ನೇತ್ರದಾನಕ್ಕೆ ಸಹಿ ಹಾಕಿ ಜಾಗೃತಿ ಮೂಡಿಸಿದ ಶಾಸಕ ಡಾ.ಭರತ್ ಶೆಟ್ಟಿ

author img

By

Published : Jan 18, 2021, 6:29 AM IST

ನೇತ್ರ ತಪಾಸಣಾ ಶಿಬಿರ ಮತ್ತು ನೇತ್ರದಾನ ಅಭಿಯಾನವು ನಗರದ ಮೇರಿಹಿಲ್​​​ನಲ್ಲಿ ನಡೆಯಿತು. ಈ ಸಂದಂರ್ಭದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ತಮ್ಮ ಕಣ್ಣುಗಳನ್ನು ದಾನ ಮಾಡುವ ಒಪ್ಪಂದ ಪತ್ರಕ್ಕೆ ಸಹಿ ಹಾಕುವ ಮೂಲಕ ಜಾಗೃತಿ ಮೂಡಿಸಿದರು.

MLA Dr Bharat Shetty, who raised awareness by signing the eye donate
ನೇತ್ರದಾನಕ್ಕೆ ಸಹಿ ಹಾಕಿ ಜಾಗೃತಿ ಮೂಡಿಸಿದ ಶಾಸಕ ಡಾ.ಭರತ್ ಶೆಟ್ಟಿ

ಮಂಗಳೂರು: ತಮ್ಮ ಕಣ್ಣುಗಳನ್ನು ದಾನ ಮಾಡುವ ಒಪ್ಪಂದ ಪತ್ರಕ್ಕೆ ಸಹಿ ಹಾಕುವ ಮೂಲಕ ಮಂಗಳೂರು ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ಎಲ್ಲರಲ್ಲೂ ಜಾಗೃತಿ ಮೂಡಿಸಿದ್ದಾರೆ.

ದ.ಕ. ಜಿಲ್ಲಾ ಗೃಹರಕ್ಷಕ ದಳ ಹಾಗೂ ಜಿಲ್ಲಾ ಪೌರ ರಕ್ಷಣಾ ಪಡೆ, ಲಯನ್ಸ್ ಕ್ಲಬ್ ಮಂಗಳೂರು, ಮಾನವ ಹಕ್ಕುಗಳ ಮಹಾಮೈತ್ರಿ ಇದರ ಸಂಯುಕ್ತ ಆಶ್ರಯದಲ್ಲಿ, ಪ್ರಸಾದ್ ನೇತ್ರಾಲಯ ಇದರ ಸಹಯೋಗದೊಂದಿಗೆ ನೇತ್ರ ತಪಾಸಣಾ ಶಿಬಿರ ಮತ್ತು ನೇತ್ರದಾನ ಅಭಿಯಾನವು ನಗರದ ಮೇರಿಹಿಲ್ ನಲ್ಲಿ ನಡೆಯಿತು.

ಈ ಅಭಿಯಾನವನ್ನು ಉದ್ಘಾಟಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ ನೇತ್ರದಾನಕ್ಕೆ ಸಹಿ ಹಾಕಿದರು. ಬಳಿಕ ಮಾತನಾಡಿದ ಅವರು, ನಮ್ಮ ಮರಣ ನಂತರ ವ್ಯರ್ಥವಾಗಿ ಹೋಗುವ ಕಣ್ಣುಗಳನ್ನು ನಿರ್ದಿಷ್ಟ ಅವಧಿಯ ಒಳಗೆ ಅಗತ್ಯವಿದ್ದವರಿಗೆ ಶಸ್ತ್ರಚಿಕಿತ್ಸೆ ಮಾಡಿ ಅಳವಡಿಸುವ ಮೂಲಕ ನಮ್ಮ ನಂತರ ಈ ಸುಂದರ ಪ್ರಪಂಚವನ್ನು ಬೇರೆಯವರು ಕೂಡ ನೋಡುವಂತಾಗುತ್ತದೆ. ಒಬ್ಬ ವ್ಯಕ್ತಿಯಿಂದ ಇಬ್ಬರಿಗೆ ಕಣ್ಣುಗಳನ್ನು ದಾನ ಮಾಡಬಹುದು ಎಂದು ಹೇಳಿದರು.

ಓದಿ : ರಾಮ ಮಂದಿರ ನಿರ್ಮಾಣಕ್ಕೆ 11 ಕೋಟಿ ರೂ. ದೇಣಿಗೆ ನೀಡಿದ ಭಕ್ತ

ಈ ಸಂದರ್ಭ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಮುರಳಿ ಮೋಹನ್ ಚೂಂತಾರು, ಲಯನ್ ಉಮೇಶ್ ಪ್ರಭು, ಕೃಷ್ಣಾನಂದ ಪೈ, ಪ್ರಸನ್ನ ಕುಮಾರ್ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.