ಮಂಗಳೂರು: ಸುರತ್ಕಲ್ ಟೋಲ್ ಗೇಟ್ ತೆರವಿಗೆ ಹೋರಾಟ ಮಾಡುವ ಮೊದಲೇ ಅಂದ್ರೆ ಒಂದು ವರ್ಷದ ಹಿಂದೆಯೇ ಕೇಂದ್ರ ಹೆದ್ದಾರಿ ಸಚಿವರಿಗೆ ಪತ್ರ ಬರೆದು ಪ್ರಯತ್ನಿಸಿದ್ದೇನೆ. ಇದೀಗ ಹೆಜಮಾಡಿ ಟೋಲ್ನೊಂದಿಗೆ ವಿಲೀನಗೊಳಿಸಿ ಸರ್ಕಾರ ಆದೇಶಿಸಿದೆ. ಒಂದು ವಾರದಲ್ಲಿ ಜಿಲ್ಲಾಧಿಕಾರಿಯವರು ನೋಟಿಫಿಕೇಶನ್ ನೀಡಲಿದ್ದಾರೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಸುರತ್ಕಲ್ ಟೋಲ್ ಗೇಟ್ ಹೆಜಮಾಡಿ ಟೋಲ್ನೊಂದಿಗೆ ವಿಲೀನವಾಗಲಿದೆ. ಮರ್ಜ್ ದರವೂ ಆ ಬಳಿಕವೇ ತಿಳಿಯಲಿದೆ. ಸುರತ್ಕಲ್ ಟೋಲ್ ತೆರವಿಗೆ ಕೆಲವರು ಪ್ರಾಮಾಣಿಕ ಹೋರಾಟ ಮಾಡಿದ್ದಾರೆ. ಅಂದು ಟೋಲ್ ಆರಂಭಿಸಿದವರೇ ಇಂದು ಟೋಲ್ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಟೋಲ್ ಹೋರಾಟಗಾರರು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ತುಳುನಾಡು ಮತ್ತು ಬಿಜೆಪಿ ಹೋರಾಟ ಎಂಬಂತೆ ಬಿಂಬಿಸುತ್ತಿದ್ದಾರೆ. ಆದರೆ ಹಿಂದುತ್ವಕ್ಕೂ ಟೋಲ್ ಹೋರಾಟಕ್ಕೂ ಏನು ಸಂಬಂಧವಿದೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬಹು ದಿನಗಳ ಹೋರಾಟದ ಬಳಿಕ ಸುರತ್ಕಲ್ ಟೋಲ್ ಗೇಟ್ ರದ್ದು: ನಳಿನ್ ಕುಮಾರ್ ಕಟೀಲ್ ಟ್ವೀಟ್
ಹೆಜಮಾಡಿ, ಸುರತ್ಕಲ್ ಟೋಲ್ ಗೇಟ್ ನೋಟಿಫಿಕೇಶನ್ ಜೂನ್ 13, 2013 ರಲ್ಲಿ ಆಗಿತ್ತು. 2015 ರಿಂದ ಟೋಲ್ ಸಂಗ್ರಹ ಆರಂಭವಾಗಿದೆ. ಟೋಲ್ ಆರಂಭವಾದ 2013ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಸ್ತಿತ್ವದಲ್ಲಿತ್ತು. ಆಗ ಎಲ್ಲರಿಗೂ ಟೋಲ್ ನಿಲ್ಲಿಸಲು ಅವಕಾಶವಿತ್ತು. ಆದರೆ, ಯಾರೂ ಅದಕ್ಕೆ ಪ್ರಯತ್ನ ಪಟ್ಟಿಲ್ಲ. ಈಗ ಆ ಪಕ್ಷದಲ್ಲಿರುವವರು ಹೋರಾಟ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಸುರತ್ಕಲ್ ಟೋಲ್ ರದ್ದು- ಕಟೀಲ್; ಹಣ ಸಂಗ್ರಹ ಸ್ಥಗಿತಗೊಳ್ಳುವವರೆಗೂ ಹೋರಾಟ-ಮುನೀರ್ ಕಾಟಿಪಳ್ಳ
ಯು ಟಿ ಖಾದರ್ ಸಚಿವರಾಗಿದ್ದಾಗ ಟೋಲ್ ಗೇಟ್ ಬಂದ್ ಮಾಡಿಸ್ತೇನೆ ಎಂದು ಹೇಳಿದ್ದರು. ಆದರೆ, ಅವರಿಗೆ ಅದನ್ನು ಮಾಡಲು ಆಗಲಿಲ್ಲ. ನಾನು ಪ್ರಯತ್ನ ಮಾಡಿ ಟೋಲ್ ಗೇಟ್ ತೆರವು ಮಾಡಿದ್ದೇನೆ ಎಂದರು.