ETV Bharat / state

ಕಡಬ: ನಾಪತ್ತೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿ ಬೆಂಗಳೂರಿನಲ್ಲಿ ಪತ್ತೆ - student missing case

ಕಡಬದ ರಾಮಕುಂಜೇಶ್ವರ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಯೊಬ್ಬ ಕಾಲೇಜಿಗೂ ಹೋಗದೆ, ಮನೆಗೂ ತೆರಳದೇ ನಾಪತ್ತೆಯಾಗಿದ್ದ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಇದೀಗ ಬಾಲಕನನ್ನು ಪತ್ತೆ ಹಚ್ಚಿದ್ದಾರೆ.

missing
missing
author img

By

Published : Sep 22, 2021, 10:12 AM IST

Updated : Sep 22, 2021, 11:08 AM IST

ಕಡಬ: ನಾಪತ್ತೆಯಾಗಿದ್ದ ತಾಲೂಕಿನ ಶ್ರೀ ರಾಮಕುಂಜೇಶ್ವರ ವಸತಿ ನಿಲಯದ ಪ್ರಥಮ ಪಿಯುಸಿ ವಿದ್ಯಾರ್ಥಿ ಇದೀಗ ಬೆಂಗಳೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾನೆ.

ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಂಜನ್ ಸಿ.ಎಂ (16) ನಿನ್ನೆ ಬೆಳಗ್ಗೆ 9 ಗಂಟೆಗೆ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹಾಸ್ಟೇಲ್​ನಿಂದ ಹೋಗಿದ್ದು, ಕಾಲೇಜಿಗೂ ಹೋಗದೆ, ಮನೆಗೂ ತೆರಳಿರಲ್ಲ. ಮಧ್ಯಾಹ್ನ ಇತರ ವಿದ್ಯಾರ್ಥಿಗಳು ಊಟಕ್ಕೆ ವಸತಿ ನಿಲಯಕ್ಕೆ ಬಂದಾಗ ಅಂಜನ್ ಕಾಲೇಜಿಗೆ ಹೋಗದೆ ಇರುವ ವಿಚಾರವನ್ನು ಮ್ಯಾನೇಜರ್ ಗಮನಕ್ಕೆ ತಂದಿದ್ದರು.

ಈ ಕುರಿತು ವಸತಿ ನಿಲಯದ ಮ್ಯಾನೇಜರ್ ರಮೇಶ್ ಕಾಲೇಜಿನ ಪ್ರಾಂಶುಪಾಲರನ್ನು ವಿಚಾರಿಸಿದಾಗ ಕಾಲೇಜಿಗೆ ವಿದ್ಯಾರ್ಥಿ ಬಾರದಿರುವ ವಿಚಾರ ತಿಳಿದು ಬಂದಿದೆ. ನಂತರ ಅಂಜನ್ ಪೋಷಕರಿಗೆ ಕೂಡ ದೂರವಾಣಿ ಮುಖಾಂತರ ವಿಚಾರಿಸಲಾಗಿತ್ತು. ಇದೆಲ್ಲ ಆದ ಬಳಿಕ ಕಡಬ ಪೊಲೀಸ್​ ಠಾಣೆಗೆ ದೂರು ನೀಡಲಾಗಿತ್ತು.

ಈ ಕುರಿತು ಪೊಲೀಸರು ತನಿಖೆ ನಡೆದಾಗ ವಿದ್ಯಾರ್ಥಿ ಬೆಂಗಳೂರಿನ ತಮ್ಮ ಸಂಬಂಧಿಕರ ಮನೆಯಲ್ಲಿ ಇರುವುದು ತಿಳಿದು ಬಂದಿದೆ.

Last Updated : Sep 22, 2021, 11:08 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.