ETV Bharat / state

ಕಾಣೆಯಾಗಿದ್ದ ಮಹಿಳೆ ಪಯಸ್ವಿನಿ ನದಿಯಲ್ಲಿ ಶವವಾಗಿ ಪತ್ತೆ - ಪಯಸ್ವಿನಿ ನದಿನೀರಲ್ಲಿ ಶವ ಪತ್ತೆ

ಸುಳ್ಯ ತಾಲೂಕಿನ ಕೇರ್ಪಳದಿಂದ ಕಾಣೆಯಾಗಿದ್ದ ಗೃಹಿಣಿಯೊಬ್ಬರ ಮೃತದೇಹ ನಾರ್ಕೋಡು ಸಮೀಪ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಪಡೆದಿದ್ದಾರೆ.

woman deadbody found in payaswini river
ಮಹಿಳೆಯ ಮೃತದೇಹ ಪಯಸ್ವಿನಿ ನದಿಯಲ್ಲಿ ಪತ್ತೆ
author img

By

Published : Jan 24, 2021, 9:06 AM IST

ಸುಳ್ಯ : ತಾಲೂಕಿನ ಕೇರ್ಪಳದಿಂದ ಕಾಣೆಯಾಗಿದ್ದ ಮಹಿಳೆಯೋರ್ವರ ಮೃತದೇಹ ನಾರ್ಕೋಡು ಸಮೀಪ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿದೆ.

ಸುಳ್ಯ ತಾಲೂಕಿನ ಕೇರ್ಪಳದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಆನಂದ ಎಂಬವರ ಪತ್ನಿ ಚಂದ್ರಾವತಿ, ಕಾಣೆಯಾದ ದಿನದಿಂದ ಸಮೀಪದ ಕಾಡುಗುಡ್ಡಗಳಲ್ಲಿ ಇವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಅವರು ಎಲ್ಲಿಯೂ ಪತ್ತೆಯಾಗಿರಲಿಲ್ಲ, ಮತ್ತು ಮನೆಗೂ ಹಿಂದಿರುಗಿರಲಿಲ್ಲ. ನಂತರದಲ್ಲಿ ಇವರ ಮೊಬೈಲ್ ಫೋನ್ ಮತ್ತು ಪರ್ಸ್ ನದಿಯ ಸಮೀಪದಲ್ಲಿ ಕಂಡು ಬಂದ ಹಿನ್ನೆಲೆ ಮನೆಯವರು, ಸ್ಥಳೀಯರು, ಅಗ್ನಿಶಾಮಕ ದಳದವರು ಮತ್ತು ಗೃಹರಕ್ಷಕ ದಳದವರು ಸೇರಿ ಪಯಸ್ವಿನಿ ನದಿಯ ಗುಂಡಿಗಳಲ್ಲಿ ಹುಡುಕಾಟ ನಡೆಸಿದ್ದರು. ಆದರೂ ಇವರ ಸುಳಿವು ಸಿಕ್ಕಿರಲಿಲ್ಲ.

ಇದೀಗ ಜ.23 ರಂದು ನಾರ್ಕೋಡು ಸಮೀಪ ಪಯಸ್ವಿನಿ ನದಿನೀರಲ್ಲಿ ಚಂದ್ರಾವತಿಯವರ ಮೃತದೇಹ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ:ಮಹಿಳಾ ಕಮಾಂಡರ್​ ನೇತೃತ್ವದಲ್ಲಿ ಈ ಬಾರಿ ರಾಜ್​ಪಥ್​ನಲ್ಲಿ ಶಿಲ್ಕಾ ಶಸ್ತ್ರಾಸ್ತ್ರ ಪ್ರದರ್ಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.